ಕೌಶಲ್ಯ ಕರ್ನಾಟಕ ಯೋಜನೆ ಪರಿಣಾಮಕಾರಿ ಅನುಷ್ಠಾನಕ್ಕೆ ಸೂಚನೆ
ಹಾಸನ

ಕೌಶಲ್ಯ ಕರ್ನಾಟಕ ಯೋಜನೆ ಪರಿಣಾಮಕಾರಿ ಅನುಷ್ಠಾನಕ್ಕೆ ಸೂಚನೆ

September 8, 2018

ಹಾಸನ: ಯುವ ಸಮುದಾಯಕ್ಕೆ ಹೊಸ ಆಶಾ ಕಿರಣವಾಗಿರುವ ಕೌಶಲ್ಯ ಕರ್ನಾಟಕ ಯೋಜನೆ ಸಮಪರ್ಕವಾಗಿ ಜಾರಿಯಾಗಬೇಕು. ಈ ನಿಟ್ಟಿನಲ್ಲಿ ವ್ಯಾಪಕ ಪ್ರಚಾರ ಕಾರ್ಯ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಕೌಶಲ್ಯಾಭಿವೃದ್ಧಿ ಉದ್ಯಮ ಶೀಲತೆ ಹಾಗೂ ಜೀವನೋಪಾಯ ಇಲಾಖೆಯಿಂದ ನಡೆದ ಪ್ರಥಮ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜ್ಯ ಹಾಗೂ ಕೇಂದ್ರ ಸರ್ಕಾರ ವೃತ್ತಿ ಕೌಶಲ್ಯ ತರಬೇತಿ ಹಾಗೂ ಉದ್ಯೋಗಾವಕಾಶಗಳನ್ನು ಸೃಷ್ಟಿಸಿ ಹಲವು ಯೋಜನೆಗಳನ್ನು ರೂಪಿಸಿದ್ದು, ಇದು ಸಮರ್ಪಕವಾಗಿ ನಿರುದ್ಯೋಗಿಗಳಿಗೆ ತಲುಪುವಂತಾಗಬೇಕು ಎಂದರು.

ಕೌಶಲ್ಯ ಕರ್ನಾಟಕ ಯೋಜನೆಯಲ್ಲಿ 400ಕ್ಕೂ ಅಧಿಕ ರೀತಿಯ ಕೌಶಲ್ಯಗಳ ಕುರಿತು ತರಬೇತಿ ಹಾಗೂ ಉದ್ಯೋಗ ಕಲ್ಪಿಸಲು ಅವಕಾಶ ಇದೆ. ಇದೊಂದು ನಿರಂತರ ಪ್ರಕ್ರಿಯೆ. ಜಿಲ್ಲೆಯ ಎಲ್ಲಾ ನಿರುದ್ಯೋಗಿಗಳು ಹಾಗೂ ವೃತ್ತಿ ಕೌಶಲ್ಯ ಹೆಚ್ಚಿಸಿಕೊಳ್ಳಲು ಬಯಸುವವರು ಹೆಸರು ನೋಂದಣಿ ಮಾಡಿಕೊಂಡು ಬದುಕನ್ನು ಉತ್ತಮ ಪಡಿಸಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಈಗಾಗಲೇ ನೋಂದಣಿಯಾಗಿರುವ 25,000 ಉದ್ಯೋಗಾಕಾಂಕ್ಷಿಗಳಿಗೆ ಅವರ ಆಸಕ್ತ ಕ್ಷೇತ್ರದಲ್ಲಿ ತರಬೇತಿ ನೀಡಿ. ಡಿಟಿಪಿ ಆಪರೇಟರ್ ಅಥವಾ ಹೊಲಿಗೆ ಬ್ಯೂಟಿಷಿ ಯನ್ ಕೋರ್ಸ್‍ಗಳು ಸೇರಿದಂತೆ ಕೆಲವೇ ವೃತ್ತಿಗಳ ಬಗ್ಗೆ ತರಬೇತಿ ನೀಡದೆ ಹೆಚ್ಚು ಉದ್ಯೋಗಾವಕಾಶಗಳನ್ನು ಸೃಷ್ಟಿಸಬಹುದಾದ ಉದ್ಯಮಗಳನ್ನು ಗುರುತಿಸಿ, ಆ ಬಗ್ಗೆ ಯುವ ಸಮುದಾಯಕ್ಕೆ ತರಬೇತಿ ನೀಡಿ ಎಂದು ಕೌಶಲ್ಯಾಭಿವೃದ್ಧಿ ಇಲಾಖಾಅಧಿ ಕಾರಿಗಳಿಗೆ ಡಿಸಿ ನಿರ್ದೇಶನ ನೀಡಿದರು.

ಹೆಚ್ಚು ಉದ್ಯೋಗ ತರಬೇತುದಾರರನ್ನು ಗುರುತಿಸಿ ನೋಂದಾಯಿಸಿ. ಅನಕ್ಷರಸ್ತ ರಿಗೂ ವೃತ್ತಿ ಕೌಶಲ್ಯ ಕಲಿಸಬಹುದಾದ ಗಾರೆ ಕೆಲಸ, ಮರಗೆಲಸ, ಗ್ರಾನೆಟ್ ಕೆಲಸ, ಪುಷ್ಪಾಲಂಕಾರ, ಮನೆ ನಿರ್ವಹಣೆ, ಆಹಾರ ತಯಾರಿಕಾ ಕ್ಷೇತ್ರಗಳಲ್ಲಿ ತರಬೇತಿ ನೀಡುವುದು ಸೂಕ್ತ. ಕೌಶಲ್ಯ ಕರ್ನಾಟಕ ಯೋಜನೆ ಯಡಿ ಉದ್ಯೋಗ ತರಬೇತಿಗೆ ನಿರಂತರ ವಾಗಿ ನೋಂದಣಿ ಮಾಡಬಹುದಾಗಿದೆ ಎಂದು ಅವರು ತಿಳಿಸಿದರು.

ನಗರದ ಕೈಗಾರಿಕಾ ಬಡಾವಣೆಯ 250 ಎಕರೆ ವಿಶೇಷ ಆರ್ಥಿಕ ವಲಯದಲ್ಲಿ ಜಾಗ ಲಭ್ಯವಿದೆ. ಅಲ್ಲಿ ಶೌಚ ಸಾಮಗ್ರಿ ಉದ್ಯಮಗಳಿಗೆ ಪೂರಕವಾದ ಕೈಗಾರಿಕೆಗಳ ಸ್ಥಾಪನೆಗೆ ಅವಕಾಶವಿದೆ. ಅಂತಹ ಉದ್ಯಮಿಗಳನ್ನು ಪ್ರೋತ್ಸಾಹಿಸಿ ಸ್ಥಳೀಯರಿಗೆ ತರ ಬೇತಿ ನೀಡಿ, ಹೆಚ್ಚಿನ ಯುವಕರಿಗೆ ಉದ್ಯೋಗ ಕಲ್ಪಿಸಬಹುದಾಗಿದ್ದು, ಈ ಬಗ್ಗೆ ಅಗತ್ಯ ಕ್ರಮ ವಹಿಸುವಂತೆ ಕೈಗಾರಿಕಾ ಇಲಾಖೆ ಜಂಟಿ ನಿರ್ದೇಶಕರಿಗೆ ನಿರ್ದೇಶನ ನೀಡಿದರು.

ಜಿಪಂ ಸಿಇಓ ಜಿ.ಜಗದೀಶ್ ಮಾತ ನಾಡಿ, ಜಿಲ್ಲೆಯಲ್ಲಿ ಗ್ರಾನೈಟ್ ಇಂಟರ್ ಲಾಕಿಂಗ್ ಕ್ಷೇತ್ರವನ್ನು ಸಂಪೂರ್ಣ ಹೊರ ರಾಜ್ಯದ ಕೆಲಸಗಾರರು ಆವರಿಸಿದ್ದಾರೆ. ಸ್ಥಳೀಯರಿಗೆ ಉತ್ತಮ ತರಬೇತಿ ನೀಡಿದರೆ ಸಾವಿರಾರು ಮಂದಿಗೆ ಉದ್ಯೋಗ ಕಲ್ಪಿಸಬಹುದು ಎಂದರು.

ಜಿಲ್ಲಾ ಕೌಶಾಲ್ಯಾಭಿವೃದ್ದಿ ಅಧಿಕಾರಿ ವಿಜಯ ಲಕ್ಷ್ಮಿ ಮಾತನಾಡಿ, ಜಿಲ್ಲೆಯಲ್ಲಿ ಕಳೆದ ಒಂದೂವರೆ ವರ್ಷದಲ್ಲಿ 25,518 ಮಂದಿ ನೋಂದಣಿ ಮಾಡಿಸಿಕೊಂಡಿದ್ದಾರೆ. 71 ಉದ್ಯೋಗ ತರಬೇತಿ ಸಂಸ್ಥೆಗಳು ಹೆಸರು ನೋಂದಾಯಿಸಿವೆ. ಶೀಘ್ರದಲ್ಲೇ ತರಬೇತಿ ಚಟುವಟಿಕೆ ಪ್ರಾರಂಭಿಸಲಾ ಗುವುದು. ಈ ಸಂಸ್ಥೆಗಳು ತರಬೇತಿ ಜೊತೆಗೆ ಶೇ.70ರಷ್ಟು ಮಂದಿಗೆ ವೃತ್ತಿ ನಿಯೋಜನೆ ಒದಗಿಸ ಬೇಕಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು. ಸಭೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ರಿಟೇಲ್ ಅಸೊಸಿಯೇಶನ್ ಸ್ಕಿಲ್ ಕೌನ್ಸಿಲ್ ಆಫ್ ಇಂಡಿಯಾ ಸಂಸ್ಥೆ ಪ್ರತಿನಿಧಿಗಳು ಹಾಜರಿದ್ದರು.

Translate »