ಗ್ರಂಥಾಲಯ ಸೇವೆ ಸದ್ಬಳಕೆಗೆ ಸಲಹೆ
ಚಾಮರಾಜನಗರ

ಗ್ರಂಥಾಲಯ ಸೇವೆ ಸದ್ಬಳಕೆಗೆ ಸಲಹೆ

September 8, 2018

ಚಾಮರಾಜನಗರ: ಜ್ಞಾನ ಸಂಪಾ ದನೆಗೆ ಅಗತ್ಯವಾಗಿರುವ ಗ್ರಂಥಾಲಯಗಳ ಸೇವೆಯನ್ನು ಪ್ರತಿಯೊಬ್ಬರು ಸದುಪ ಯೋಗ ಮಾಡಿಕೊಳ್ಳಬೇಕೆಂದು ಸಂಸದ ಆರ್.ಧ್ರುವನಾರಾಯಣ ಸಲಹೆ ಮಾಡಿದರು.

ನಗರದ ಜಿಲ್ಲಾ ನ್ಯಾಯಾಲಯ ಅವ ರಣದ ಸಂಕೀರ್ಣದಲ್ಲಿ ವಕೀಲರಿಗಾಗಿ ರಾಜ್ಯ ಸರ್ಕಾರದ ಅನುದಾನದಡಿ ವ್ಯವಸ್ಥೆ ಮಾಡಲಾಗಿರುವ ಇ-ಲೈಬ್ರರಿ ಸೇವೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಜ್ಞಾನಾರ್ಜನೆಗೆ ಪೂರಕವಾಗಿರುವ ಗ್ರಂಥಾಲಯಗಳು ಪ್ರತಿ ಜಿಲ್ಲೆ, ತಾಲೂಕು ಸೇರಿದಂತೆ ಎಲ್ಲೆಡೆ ಇರಬೇಕು. ಆದರೆ ಗ್ರಂಥಾ ಲಯಗಳಿಗೆ ನಿರೀಕ್ಷಿತ ಅದ್ಯತೆಯನ್ನು ನೀಡ ಲಾಗುತ್ತಿಲ್ಲ. ಅಧ್ಯಯನಕ್ಕೆ ಗ್ರಂಥಾಲಯ ಗಳು ತುಂಬಾ ಅವಶ್ಯಕವಾಗಿದೆ. ಹೀಗಾಗಿ ಎಲ್ಲೆಡೆ ಗ್ರಂಥಾಲಯಗಳ ಸೇವೆಗೆ ಮುಂದಾಗಬೇಕಿದೆ ಎಂದರು.

ವಕೀಲರಿಗೆ ವೃತ್ತಿ ನಿರ್ವಹಿಸಲು ನಿರಂ ತರ ಅಧ್ಯಯನ ಅಗತ್ಯವಿದೆ. ಇದಕ್ಕಾಗಿ ಪ್ರತಿ ತಾಲೂಕು ನ್ಯಾಯಾಲಯಗಳ ಲ್ಲಿಯೂ ವಕೀಲರಿಗೆ ಇ-ಲೈಬ್ರರಿ ಸೇವೆ ವ್ಯವಸ್ಥೆಯನ್ನು ಕಲ್ಪಿಸುವಂತೆ ರಾಜ್ಯ ಕಾನೂನು ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸು ವುದಾಗಿ ಧ್ರುವನಾರಾಯಣ ತಿಳಿಸಿದರು.

ಜಿಲ್ಲೆಗೆ ಕಾನೂನು ಕಾಲೇಜು ಮಂಜೂ ರಾಗಿದೆ. ಕೇಂದ್ರೀಯ ವಿದ್ಯಾಲಯವು ತಾತ್ಕಾ ಲಿಕವಾಗಿ ನಡೆಯುತ್ತಿದ್ದ ಕಟ್ಟಡದಲ್ಲಿ ಕಾನೂನು ಕಾಲೇಜು ಆರಂಭಿಸಲು ಸಿದ್ಧತೆ ನಡೆದಿದೆ. ಇನ್ನು 2-3 ದಿನಗಳಲ್ಲಿಯೇ ಎಲ್ಲ ಪ್ರಕ್ರಿಯೆ ಮುಗಿಯಲಿದ್ದು, ಪ್ರಸಕ್ತ ಶೈಕ್ಷಣಿಕ ಸಾಲಿ ನಲ್ಲಿಯೇ ಕಾನೂನು ಕಾಲೇಜು ಆರಂಭವಾ ಗಲಿದೆ ಎಂದು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಪ್ರಧಾನ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಧೀಶರಾದ ಜಿ.ಬಸವರಾಜ ಮಾತನಾಡಿ, ವಕೀಲರು ಹೆಚ್ಚಿನ ಜ್ಞಾನ, ತಿಳಿವಳಿಕೆ ಹೊಂದಲು ಇ-ಲೈಬ್ರರಿ ಅಗತ್ಯವಿತ್ತು. ಸೌಲಭ್ಯವು ಇನ್ನು ಮುಂದೆ ಜಿಲ್ಲಾ ನ್ಯಾಯಾಲಯದಲ್ಲಿ ಲಭ್ಯ ವಿರುವುದರಿಂದ ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದು ಸಲಹೆ ಮಾಡಿದರು.

ಇತ್ತೀಚಿನ ಕಾಯಿದೆ, ತಿದ್ದುಪಡಿ, ಅದೇ ಶಗಳು ಸೇರಿದಂತೆ ವಕೀಲ ವೃತ್ತಿಗೆ ಬೇಕಿ ರುವ ಅನೇಕ ಮಾಹಿತಿಗಳು ಇ-ಲೈಬ್ರರಿ ಮೂಲಕ ಪಡೆಯಬಹುದಾಗಿದೆ. ಈ ಉಪ ಯುಕ್ತ ಸೇವೆ ದೊರಕಿರುವುದು ಶ್ಲಾಘ ನೀಯವೆಂದು ಜಿಲ್ಲಾ ನ್ಯಾಯಾಧೀಶರು ನುಡಿದರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್ ಅವರು ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ.ರಮೇಶ್, ಸಿ.ಜೆ. ವಿಶಾಲಾಕ್ಷಿ, ಪ್ರಧಾನ ಸಿವಿಲ್ ನ್ಯಾಯಾ ಧೀಶರಾದ ವಿ.ದೀಪಾ, ಉಮೇಶ್, ರಾಜ್ಯ ವಕೀಲರ ಪರಿಷತ್ತಿನ ಸದಸ್ಯರಾದ ಬಿ.ಆರ್. ಚಂದ್ರಮೌಳಿ, ವಿಶಾಲ್ ರಘು, ಸರ್ಕಾರಿ ವಕೀಲರಾದ ಎಚ್.ಎನ್.ಲೋಕೇಶ್, ವಿಶೇಷ ಸರ್ಕಾರಿ ಅಭಿಯೋಜಕರಾದ ಕೆ.ಯೋಗೀಶ್, ಯಳಂದೂರು ತಾಲೂಕು ವಕೀಲರ ಸಂಘದ ಅಧ್ಯಕ್ಷ ಕೆ.ಬಿ. ಶಶಿಧರ್, ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಆರ್. ಅರುಣ್‍ಕುಮಾರ್ ಇತರರು
ಕಾರ್ಯ ಕ್ರಮದಲ್ಲಿ ಉಪಸ್ಥಿತರಿದ್ದರು.

Translate »