ಪ್ರಕಾಶ್ ರೈ, ಸ್ವಾಮಿ ಅಗ್ನಿವೇಶ್, ಗಿರೀಶ್ ಕಾರ್ನಾಡ್ ವಿರುದ್ಧ ಬಿಜೆಪಿ ಪ್ರತಿಭಟನೆ
ಚಾಮರಾಜನಗರ

ಪ್ರಕಾಶ್ ರೈ, ಸ್ವಾಮಿ ಅಗ್ನಿವೇಶ್, ಗಿರೀಶ್ ಕಾರ್ನಾಡ್ ವಿರುದ್ಧ ಬಿಜೆಪಿ ಪ್ರತಿಭಟನೆ

September 8, 2018

ಚಾಮರಾಜನಗರ:  ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಆರ್‍ಎಸ್‍ಎಸ್ ಸಂಘಟನೆ ಬಗ್ಗೆ ಪ್ರಕಾಶ್ ರೈ, ಸ್ವಾಮಿ ಅಗ್ನಿವೇಶ್ ಮತ್ತು ಗಿರೀಶ್ ಕಾರ್ನಾಡ್ ಅವರು ಅವಹೇಳನ ಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಪಕ್ಷದ ನಗರ ಮಂಡಲ ಆಶ್ರಯದಲ್ಲಿ ಪಕ್ಷದ ಜಿಲ್ಲಾ ಕಾರ್ಯಾ ಲಯದ ಮುಂದೆ ಮುಖಂಡರು ಹಾಗೂ ಕಾರ್ಯಕರ್ತರು ಜಮಾಯಿಸಿದರು. ನಂತರ ಪ್ರಕಾಶ್ ರೈ, ಸ್ವಾಮಿ ಅಗ್ನಿವೇಶ್, ಗಿರೀಶ್ ಕಾರ್ನಾಡ್ ಅವರ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಪ್ರತಿ ಭಟನಾ ಮೆರವಣಿಗೆಯನ್ನು ಆರಂಭಿಸಿದರು. ಪ್ರಮುಖ ಬೀದಿ ಗಳಲ್ಲಿ ಸಾಗಿ, ಭುವನೇಶ್ವರಿ ವೃತ್ತದಲ್ಲಿ ಸಮಾವೇಶಗೊಂಡರು. ನಂತರ ಪ್ರಕಾಶ್ ರೈ, ಸ್ವಾಮಿ ಅಗ್ನಿವೇಶ್ ಹಾಗೂ ಗಿರೀಶ್ ಕಾರ್ನಾಡ್ ಅವರ ಭಾವಚಿತ್ರವನ್ನು ದಹಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರಿನಲ್ಲಿ ನಡೆದ ಗೌರಿ ಲಂಕೇಶ್ ಅವರ ಪುಣ್ಯ ತಿಥಿ ಕಾರ್ಯಕ್ರಮದಲ್ಲಿ ಸ್ವಾಮಿ ಅಗ್ನಿವೇಶ್ ಅವರು ಆರ್‍ಎಸ್‍ಎಸ್ ಸಂಘಟನೆ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಇದೇ ಕಾರ್ಯ ಕ್ರಮದಲ್ಲಿ ಪ್ರಕಾಶ್ ರೈ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಗಿರೀಶ್ ಕಾರ್ನಾಡ್ ನಾನೊಬ್ಬ ಅರ್ಬನ್ ನಕ್ಸಲ್ ಎಂದು ನಾಮಫಲಕ ಹಾಕಿಕೊಂಡು ಓಡಾಡುತ್ತಿರುವುದು ಸಂವಿಧಾನ ಬಾಹಿರವಾಗಿದೆ. ಹೀಗಾಗಿ ಇವರನ್ನು ರಾಷ್ಟ್ರದ್ರೋಹದ ಕಾನೂನಿನ ಅಡಿಯಲ್ಲಿ ಬಂಧಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.

ಸ್ವಾಮಿ ಅಗ್ನಿವೇಶ್ ಹಾಗೂ ಪ್ರಕಾಶ್ ರೈ ಅವರು ತಮ್ಮ ಹೇಳಿಕೆ ಗಳನ್ನು ವಾಪಸ್ ಪಡೆದು ರಾಷ್ಟ್ರದ ಜನತೆಯಲ್ಲಿ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಹಂತ ಹಂತವಾಗಿ ಉಗ್ರ ಹೋರಾಟ ರೂಪಿಸ ಬೇಕಾಗುತ್ತದೆ ಎಂದು ಎಚ್ಚರಿಸಿದರು. ಪಕ್ಷದ ನಗರ ಘಟಕದ ಅಧ್ಯಕ್ಷ ಸುಂದರ್‍ರಾಜ್, ಪ್ರಧಾನ ಕಾರ್ಯದರ್ಶಿ ಎಂ.ಎಸ್. ಚಂದ್ರಶೇಖರ್, ಜಿಲ್ಲಾ ಕಾರ್ಯದರ್ಶಿಗಳಾದ ಪೃಥ್ವಿರಾಜ್, ಕುಲಗಾಣ ಶಾಂತಮೂರ್ತಿ, ಪಿ.ರಂಗಸ್ವಾಮಿ, ಶಿವಮಲ್ಲು, ನಾಗೇಶ್‍ನಾಯಕ್, ಶಿವರಾಜ್, ನಗರಸಭಾ ಸದಸ್ಯರಾದ ಮನೋಜ್ ಪಟೇಲ್, ಗಾಯಿತ್ರಿ ಚಂದ್ರಶೇಖರ್, ಸುದರ್ಶನಗೌಡ, ಮಂಜುನಾಥ್, ರಾಘವೇಂದ್ರ, ಶೇಖರ್, ನಟರಾಜು, ಚಂದ್ರಶೇಖರ್‍ರಾವ್ ಇತರರಿದ್ದರು.

Translate »