ಅರಸೀಕೆರೆ ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆ: ಬಿಜೆಪಿ ಪ್ರತಿಭಟನೆ
ಕೊಡಗು

ಅರಸೀಕೆರೆ ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆ: ಬಿಜೆಪಿ ಪ್ರತಿಭಟನೆ

December 13, 2018

ಅರಸೀಕೆರೆ: ನಗರದ ಸರ್ಕಾರಿ ಜಯಚಾಮರಾಜೇಂದ್ರ ಸಾರ್ವಜನಿಕ ಆಸ್ಪತ್ರೆಯಲ್ಲಿ ಅವ್ಯವಸ್ಥೆ ತಾಂಡವವಾಡು ತ್ತಿದ್ದು, ಸ್ಥಳಿಯ ರಕ್ಷಾ ಸಮಿತಿ ನಿರ್ಲಕ್ಷ ದಿಂದ ಸಾಮಾನ್ಯ ಜನತೆ ಪರದಾಡು ವಂತೆ ಆಗಿದೆ ಎಂದು ಆರೋಪಿಸಿ ಆಸ್ಪತ್ರೆ ಆವರಣದಲ್ಲಿ ತಾಲೂಕು ಭಾಜಪದಿಂದ ಬೃಹತ್ ಧರಣಿ ನಡೆಸಲಾಯಿತು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಜಿವಿಟಿ ಬಸವರಾಜು ಮಾತನಾಡಿ, ಸ್ಥಳೀಯ ಶಾಸಕ ಕೆ.ಎಂ.ಶಿವಲಿಂಗೇಗೌಡ ಇವರು ಈ ಆಸ್ಪತ್ರೆ ರಕ್ಷಾ ಸಮಿತಿ ಅಧ್ಯಕ್ಷರೂ ಆಗಿ ದ್ದಾರೆ. ಆದರೆ ಈ ಆಸ್ಪತ್ರೆಯಲ್ಲಿ ಮೂಲ ಸೌಕರ್ಯಗಳೇ ಇಲ್ಲದೇ ಇಲ್ಲಿಯ ವೈದ್ಯಾ ಧಿಕಾರಿಗಳು ಖಾಸಗಿ ಆಸ್ಪತ್ರೆಗಳಿಗೆ ಕಳುಹಿ ಸುತ್ತಿದ್ದಾರೆ. ಅನೇಕ ವೈದ್ಯರು ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಬರದೇ ಪ್ರಾಕ್ಟೀಸ್ ಎಂಬ ನೆಪದಲ್ಲಿ ಪ್ರತ್ಯೇಕ ಕ್ಲಿನಿಕ್‍ಗಳನ್ನು ನಡೆಸಿ ಕರ್ತವ್ಯ ಲೋಪ ಎಸಗುತ್ತಿದ್ದಾರೆ. ಹೆರಿಗೆಗೆ ಎಂದು ಆಗಮಿಸುವ ಗರ್ಭಿಣಿ ಯರಿಗೆ ವ್ಯವಸ್ಥಿತ ವಾರ್ಡ್‍ಗಳಿಲ್ಲದೆ ಶೌಚಾ ಲಯ, ನೀರಿನ ವ್ಯವಸ್ಥೆ, ವಿದ್ಯುತ್ ಇನ್ನಿ ತರೆ ಸೌಲಭ್ಯಗಳು ಇಲ್ಲದೇ ಜೀವವನ್ನು ಹಿಡಿದುಕೊಂಡು ಆಸ್ಪತ್ರೆಗೆ ಬಂದು ಹೋಗುತ್ತಿದ್ದಾರೆ.

ಆಸ್ಪತ್ರೆ ಆವರಣವಂತೂ ಸದಾ ಕೊಳ ಕಾಗಿರುವುದರ ಮೂಲಕ ಸ್ವಚ್ಛ ವಾತಾ ವರಣ ರೋಗಿಗಳಿಗೆ ಇಲ್ಲದಂತೆ ಆಗಿದೆ. ಇಂತಹ ಬೆಳವಣಿಗೆಗಳಿಂದ ಆಸ್ಪತ್ರೆಯು ಭಯ ಮೂಡಿಸುವ ಭೂತ ಬಂಗಲೆ ಯಂತೆ ಆಗಿದೆ. ಇತ್ತೀಚೆಗಷ್ಟೆ ಪ್ರಾರಂಭ ವಾದ ಡಯಾಲೀಸಿಸ್, ತೀವ್ರ ನಿಗಾ ಘಟಕ, ಎಕ್ಸ್‍ರೇ ಘಟಕ, ಶಸ್ತ್ರಚಿಕಿತ್ಸೆ ಘಟಕಗಳು ಸೂಕ್ತ ನಿರ್ವಹಣೆ ಇಲ್ಲದೇ ಪಾಳು ಬಿದ್ದು ಜನ ಸಾಮಾನ್ಯರಿಗೆ ದೊರಕ ದಂತೆ ಆಗಿದೆ. ಇಷ್ಟೆಲ್ಲಾ ಅವ್ಯವಸ್ಥೆಗಳು ನಡೆಯಲು ಸ್ಥಳೀಯ ರಕ್ಷಾ ಕಮಿಟಿಯ ನಿರ್ಲಕ್ಷ್ಯ ಹಾಗೂ ಅಭಿವೃದ್ಧಿ ಬಗ್ಗೆ ಗಮನ ಹರಿಸದಿರುವುದೇ ಮೂಲ ಕಾರಣವಾ ಗಿದೆ. ಆವಶ್ಯವಾಗಿರುವ ಸಿಬ್ಬಂದಿ ಮತ್ತು ವೈದ್ಯಾಧಿಕಾರಿಗಳನ್ನು ಕೂಡಲೇ ನಿಯೋ ಜಿಸಿಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನ ಗಳಲ್ಲಿ ಇನ್ನೂ ಹೆಚ್ಚಿನ ಉಗ್ರ ಹೋರಾಟ ವನ್ನು ಮಾಡಲಾಗುವುದು ಎಂದು ಎಚ್ಚರಿಸಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸತೀಶ್ ಸ್ಥಳಕ್ಕೆ ಭೇಟಿ, ನೀಡಿ ಪ್ರತಿಭಟನಾಕಾರ ರಿಂದ ಮನವಿ ಪತ್ರ ಸ್ವೀಕರಿಸಿ, ಹಾಲಿ ಇರುವ ಸಮಸ್ಯೆಗಳನ್ನು ಬಗೆಹರಿಸಲು ಪ್ರಮಾ ಣಿಕವಾಗಿ ಪ್ರಯತ್ನಿಸಿ ಅದೇಶ ಮಾಡ ಲಾಗುವುದು ಎಂದರು. ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾ ವಕ್ತಾರ ಎನ್.ಡಿ ಪ್ರಸಾದ್, ಗ್ರಾಮಾಂತರ ಘಟಕ ಕಾರ್ಯದರ್ಶಿ ಗಳಾದ ಯೋಗೀಶ್, ಶ್ರೀನಿವಾಸ್, ನಗರ ಸಭಾ ಸದಸ್ಯರಾದ ಕೆ.ಜೆ.ಶುಭಾ, ಶ್ವೇತಾ, ತಾಲೂಕು ಘಟಕದ ಮಾಜಿ ಅಧ್ಯಕ್ಷರಾದ ಡಿ.ಬಿ ಗಂಗಾಧರ್, ಹರಳಕಟ್ಟೆ ರಮೇಶ್, ನಗರಾಧ್ಯಕ್ಷ ಮನೋಜ್ ಕುಮಾರ್, ತಾ.ಪಂ ಮಾಜಿ ಸದಸ್ಯ ಬಾಣಾವರ ಜಯಣ್ಣ, ಮುಖಂಡರಾದ ಲಾಳನಕೆರೆ ಯೋಗೀಶ್, ಕೆಂಪುಸಾಗರ ಶಿವರಾಜ್, ರಮೇಶ್ ನಾಯ್ಡು, ವಿಜಯ್‍ಕುಮಾರ್, ಟಿ.ವಿ ಅರುಣ್‍ಕುಮಾರ್, ನಗರ ಮಂಡಲ ಕಾರ್ಯದರ್ಶಿ ಮುರಳಿಧರ್, ಕೆಂಪಮ್ಮ, ಶೀಲ್ಪಾ ಸತೀಶ್, ಚಂದ್ರಶೇಖರ್, ಬಾಣಾ ವರ ವಿರೂಪಾಕ್ಷ,ಎ.ಸಿ ಶಂಕರಯ್ಯ, ದುಮ್ಮೇನಹಳ್ಳಿ ರಮೇಶ್, ಹನುಮಂತ ರಾಜ್, ಪುರಿ ನಾಗೇಶ್ ಇನ್ನಿತರರು ಇದ್ದರು.

Translate »