ಮೀಸಲು ಕಾಮಗಾರಿಗಳ ಟೆಂಡರ್ ಕರೆಯದೆ ಅನ್ಯಾಯ
ಹಾಸನ

ಮೀಸಲು ಕಾಮಗಾರಿಗಳ ಟೆಂಡರ್ ಕರೆಯದೆ ಅನ್ಯಾಯ

December 13, 2018

ಎಸ್ಸಿ, ಎಸ್ಟಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಹೇಮರಾಜು ಆರೋಪ
ಹಾಸನ: ಮೀಸಲು ಕಾಮ ಗಾರಿಗಳ ಟೆಂಡರ್ ಕರೆಯದೇ ಅನ್ಯಾಯ ಮಾಡಲಾಗಿದ್ದು, ಕೂಡಲೇ ಪರಿಶಿಷ್ಟ ಜಾತಿ ಮತ್ತು ವರ್ಗದ ಗುತ್ತಿಗೆದಾರರಿಗೆ ನ್ಯಾಯ ದೊರಕಿಸಿಕೊಡುವಂತೆ ರಾಜ್ಯ ಎಸ್.ಸಿ/ಎಸ್.ಟಿ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಜಿ. ಹೇಮರಾಜು ಗೊರೂರು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ಜಿಲ್ಲಾ ಎಲ್ಲಾ ಸರ್ಕಾರಿ ಇಲ್ಲಾಖೆಗಳಲ್ಲಿ ಪರಿಶಿಷ್ಟ ಜಾತಿ/ ಪರಿಶಿಷ್ಟ ವರ್ಗದ ಗುತ್ತಿಗೆದಾರರಿಗೆ ಶೇಕಡ 24.1ಕ್ಕೆ ಅನ್ವಯವಾಗುವಂತೆ 50ಲಕ್ಷಕ್ಕಿಂತ ಕಡಿಮೆ ಅಂದಾಜು ತಯಾರಿಸದೆ 50ಲಕ್ಷ ಕ್ಕಿಂತ ಮೇಲ್ಪಟ್ಟು ಅಂದಾಜು ತಯಾರಿಸಿ, ಸರ್ಕಾರದ ಮೀಸಲು ನಿಯಮದಂತೆ ರ್ಯಾಂಡಾ ಮಿಜೇಷನ್‍ಗೆ ಒಳಪಡದಂತೆ ಮಾಡಿ ಮೀಸಲು ಕಾಮಗಾರಿಗಳ ಟೆಂಡರ್ ಕರೆಯದೆ ಅನ್ಯಾಯ ಎಸಗುತ್ತಿರುವ ಬಗ್ಗೆ ಅನೇಕ ಬಾರಿ ಮನವಿ ಮಾಡಲಾಗಿದೆ ಎಂದರು.

ಹಾಸನ ಜಿಲ್ಲೆಯ ಚುನಾಯಿತ ಜನಪ್ರತಿ ನಿಧಿಗಳು ಹಾಗೂ ಸರ್ಕಾರದ ಅನುಷ್ಠಾನ ಗೊಳಿಸುವ ಮೇಲಧಿಕಾರಿಗಳು, ಎಲ್ಲಾ ಇಲಾಖೆಗಳ ಕಾಮಗಾರಿಗಳ ಅಂದಾಜು 50 ಲಕ್ಷಕ್ಕಿಂತ ಮೇಲ್ಪಟ್ಟು ತಯಾರಿಸಿ ಶೇಕಡ 24.1ಕ್ಕೆ ಅನ್ವಯವಾಗದಂತೆ ಪರಿ ಶಿಷ್ಟ ಜಾತಿ / ಪರಿಶಿಷ್ಟ ವರ್ಗದ ಮೀಸಲು ಕಾಮಗಾರಿಗಳು ಇಲಾಖಾ ನಿಯಮ ದಂತೆ ರ್ಯಾಂಡಾಮಿಜೇಷನ್‍ಗೆ ಒಳಪಡ ಬಾರದೆಂಬ ದೆಸೆಯಿಂದ ಅಂದಾಜು ಗಳನ್ನು ತಯಾರಿಸಿ ಮೀಸಲು ಕಾಮಗಾರಿ ಗಳು ಟೆಂಡರ್‍ಗೆ ಒಳಪಡದಂತೆ ಮಾಡಿ ಮೀಸಲು ಗುತ್ತಿಗೆದಾರರಿಗೆ ಅನ್ಯಾಯ ಪ್ರವೃತ್ತಿ ಹೊಂದಿರುವ ಮೇಲಧಿಕಾರಿಗಳು ಮತ್ತು ಚುನಾಯಿತ ಜನಪ್ರತಿನಿಧಿಗಳು ಸರ್ಕಾರದ ನಿಯಮವನ್ನು ಧಿಕ್ಕರಿಸಿ ಮೀಸಲು ಆದೇಶವನ್ನು ಗಾಳಿಗೆ ತೂರಿ, ಮನಸೋ ಇಚ್ಛೆ ಅಧಿಕಾರವನ್ನು ಮಾಡಿ ಮೀಸಲು ಕಾಮಗಾರಿಯಲ್ಲಿ ಅನ್ಯಾಯವಾಗುತ್ತಿರು ವುದನ್ನು ಸಂಘವು ಖಂಡಿಸುವುದಾಗಿ ಹೇಳಿದರು. ಸಂಬಂಧಪಟ್ಟ ಇಲಾಖೆ ಗಳವರು ಶೀಘ್ರದಲ್ಲಿ ಮೀಸಲು ಕಾಮ ಗಾರಿಗಳಿಗೆ ಅಂದಾಜು ಮಾಡಿ ಕಾಮಗಾರಿ ಹೊಂದಲು ಅವಕಾಶ ಮಾಡಿ ಕೊಡಬೇಕು.

ಹಾಸನ ಜಿಲ್ಲೆಯಲ್ಲಿ ಯಾವ ಕಾನೂನು ಪಾಲನೆಯಾಗುತ್ತಿಲ್ಲ. ನಾವು ಗುತ್ತಿಗೆದಾರ ರಾಗಿ ನೋಂದಣಿ ಆಗಿದ್ದೇವೆ ಅಷ್ಟೆ. ಗುತ್ತಿಗೆ ಸಿಕ್ಕಾಗ ಅಭಿವೃದ್ಧಿ ಆಗಬಹುದು ಎಂಬ ನಿರೀಕ್ಷೆಯಲ್ಲಿ ಇದ್ದೇವೆ. ಹಾಸನ ಜಿಲ್ಲೆ ಎಂದರೇ ಪ್ರಧಾನಮಂತ್ರಿ ಮತ್ತು ಎರಡು ಬಾರಿ ಮುಖ್ಯಮಂತ್ರಿಯನ್ನು ಕೊಟ್ಟಿದೆ. ಅಧಿಕಾರ ವರ್ಗದವರು ಮತ್ತು ರಾಜಕಾರಣಿಗಳು ಇತ್ತ ಕಡೆ ದೃಷ್ಠಿಕರಿಸಿ ಕಾಮಗಾರಿಗಳನ್ನು ತಯಾರು ಮಾಡ ಬೇಕು. 50 ಲಕ್ಷ ಒಳಗೆ ಕಾಮಗಾರಿ ದರ ನಿಗದಿಪಡಿಸಿ ಈ ಬಗ್ಗೆ ಸೂಕ್ತವಾಗಿ ಸರ್ಕಾರದ ಕಣ್ಣು ತೆರೆಸುವ ಕೆಲಸ ಮಾಡುವಂತೆ ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಎಸ್.ಸಿ./ಎಸ್.ಟಿ. ಗುತ್ತಿಗೆದಾರರ ಸಂಘದ ಗೌರವಾಧ್ಯಕ್ಷ ಕೃಷ್ಣಪ್ಪ, ಉಪಾಧ್ಯಕ್ಷ ದ್ಯಾವಪ್ಪ, ಕಾರ್ಯದರ್ಶಿ ಮುರುಳಿ ಮೋಹನ್, ಖಜಾಂಚಿ ಧರ್ಮಪ್ರಕಾಶ್ ಉಪಸ್ಥಿತರಿದ್ದರು.

Translate »