ಮೈಸೂರು: ಬಾನಂಗಳದಲ್ಲಿ ಭಾಸ್ಕರನ ಆಗಮನದ ಕ್ಷಣಗಳ ಮುಸು ಕಿನ ಮುಂಜಾನೆಯಲ್ಲಿ ಯೋಗದ ಸುಯೋಗದಲ್ಲಿ ನೂರಾರು ಮಂದಿ ಮಿಂದೆದ್ದರು. ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಯೋಗ ದಸರಾ ಉಪಸಮಿತಿ ವತಿಯಿಂದ ಭಾನು ವಾರ ಅರಮನೆಯ ಅಂಗಳದಲ್ಲಿ ಏರ್ಪಡಿಸಿದ್ದ ದಸರಾ ಯೋಗೋತ್ಸವದಲ್ಲಿ ಈ ದೃಶ್ಯಾವಳಿ ಮನಸೂರೆಗೊಂಡಿತು. ನೂರಾರು ಯೋಗಪಟುಗಳನ್ನು ಒಳಗೊಂಡ ಈ ಸಾಮೂಹಿಕ ಯೋಗ ಪ್ರದರ್ಶನದಲ್ಲಿ ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಹಾಗೂ ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ ಯೋಗ ಭಂಗಿಯಲ್ಲಿ ತಲ್ಲೀನರಾಗಿ ಗಮನ ಸೆಳೆದರು….
ಮೈಸೂರು, ಮೈಸೂರು ದಸರಾ
ದಸರಾ ಯೋಗ ಚಾರಣಕ್ಕೆ ಉತ್ತಮ ಪ್ರತಿಕ್ರಿಯೆ
October 14, 2018ಮೈಸೂರು: ಯೋಗ ದಸರಾ ಉಪಸಮಿತಿಯಿಂದ ಇಂದು ಏರ್ಪಡಿಸಿದ್ದ ಯೋಗ ಚಾರಣ ಕಾರ್ಯಕ್ರಮಕ್ಕೆ ಸಾರ್ವಜನಿಕರು ಹಾಗೂ ಯೋಗಪಟುಗಳಿಂದ ಉತ್ತಮ ಪ್ರತಿಕ್ರಿಯೆ ದೊರೆಯಿತು. ಇಂದು ಬೆಳಿಗ್ಗೆ 6.10 ಗಂಟೆಗೆ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಆರಂಭವಾದ ಯೋಗ ಚಾರಣ ಬೆಟ್ಟ ಹತ್ತುವ ಕಾರ್ಯಕ್ರಮಕ್ಕೆ ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್, ಹಸಿರು ನಿಶಾನೆ ತೋರಿಸಿದರು. ನಂತರ ಸಚಿವರು, ಯೋಗ ಶಿಕ್ಷಣ ಸಂಸ್ಥೆಗಳ ಪ್ರಮುಖರು, ಯೋಗ ಶಿಕ್ಷಕರು, ಯೋಗಪಟುಗಳು ಹಾಗೂ ವಿವಿಧ ಇಲಾಖೆ ಅಧಿಕಾರಿಗಳೂ ಸೇರಿ ಸುಮಾರು 1 ಸಾವಿರ ಮಂದಿಯೊಂದಿಗೆ ಮೆಟ್ಟಿಲುಗಳ ಮೂಲಕ…