ಮೈಸೂರು: ಸಂಚಾರ ನಿರ್ವಹಣೆ ಮತ್ತು ರಸ್ತೆ ಸುರಕ್ಷತೆ ಅಂಗವಾಗಿ ದೇವರಾಜ ಸಂಚಾರ ಠಾಣೆ ವತಿಯಿಂದ ಸಂಚಾರ ನಿಯಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಪಥಸಂಚಲನವನ್ನು ಹಮ್ಮಿಕೊಳ್ಳಲಾಗಿತ್ತು. ರೋಟರಿ ಐಡಿಯಲ್ ಜಾವಾ ಶಾಲಾ ವಿದ್ಯಾರ್ಥಿಗಳು ಸಂಚಾರ ನಿಯಮಗಳನ್ನು ಅಗತ್ಯವಾಗಿ ಪಾಲಿಸಿ. ವೇಗದಲ್ಲಿ ವಾಹನ ಚಾಲನೆ ಮಾಡಬೇಡಿ ಹಾಗೂ ಸಾರ್ವಜನಿಕರು ರಸ್ತೆ ದಾಟುವಾಗ ಹಸಿರು ದೀಪವನ್ನು ಗಮನಿಸಿ ದಾಟಬೇಕು ಎಂಬಿತ್ಯಾದಿ ಪೋಸ್ಟರ್ ಮತ್ತು ಭಿತ್ತಿಪತ್ರಗಳನ್ನು ಹಿಡಿದು ಕೆ.ಆರ್.ವೃತ್ತದಿಂದ ಸಾಗಿ ಅರಸು ರಸ್ತೆ, ಜೆಎಲ್‍ಬಿ ರಸ್ತೆ ಮೂಲಕಸಾಗಿ ಕೆಆರ್‌ಎಸ್ ರಸ್ತೆಯ ಐಡಿಯಲ್…
ವೃದ್ಧೆಗೆ ನಕಲಿ ಚಿನ್ನಾಭರಣ ನೀಡಿ, ಅಸಲಿ ಆಭರಣ ದೋಚಿ ಪರಾರಿ ತಡವಾಗಿ ಬೆಳಕಿಗೆ ಬಂದ ವಂಚನೆ ಪ್ರಕರಣ
July 6, 2018ಮೈಸೂರು: ಅಪರಿಚಿತರಿಬ್ಬರು ಹಾಡಹಗಲೇ ವೃದ್ಧೆಯೊಬ್ಬರಿಗೆ ವಂಚಿಸಿ, ಸುಮಾರು ಒಂದು ಲಕ್ಷ ಮೌಲ್ಯದ ಚಿನ್ನಾಭರಣವನ್ನು ದೋಚಿರುವ ಘಟನೆ ಮೈಸೂರಿನ ದೇವರಾಜ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮೈಸೂರಿನ ಜೆ.ಪಿ.ನಗರದ ನಿವಾಸಿ ಪುಟ್ಟಮ್ಮ(55), ನಕಲಿ ಚಿನ್ನಾಭರಣಕ್ಕೆ ಆಸೆ ಬಿದ್ದು, ವಂಚನೆಗೊಳಗಾಗಿ ಸುಮಾರು 38 ಗ್ರಾಂ ತೂಕದ ತಮ್ಮ ಅಸಲಿ ಚಿನ್ನಾಭರಣವನ್ನು ಕಳೆದುಕೊಂಡಿದ್ದಾರೆ. ಪುಟ್ಟಮ್ಮ ಅವರು ಜೂ.26ರಂದು ಕಣ್ಣಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಗಾಂಧೀ ವೃತ್ತದ ಸಮೀಪ ಸುಮಂಗಲಿ ಸಿಲ್ಕ್ಸ್ ಬಳಿ ನಡೆದುಕೊಂಡು ಬರುತ್ತಿದ್ದರು. ಆಗ ಎದುರಾದ…
ಮಾದಕ ವಸ್ತುಗಳ ಸೇವನೆ ಪರಿಣಾಮದ ಬಗ್ಗೆ ಜಾಗೃತಿ
June 27, 2018ಮೈಸೂರು: ಮಾದಕ ವಸ್ತುಗಳ ಸೇವನೆಯಿಂದ ದೂರವಿರಿ… ಆರೋಗ್ಯ ಕಾಪಾಡಿಕೊಳ್ಳಿ… ಎಂಬುದು ಸೇರಿದಂತೆ ಮಾದಕ ವಸ್ತುಗಳ ಮುಕ್ತ ಸಮಾಜಕ್ಕೆ ಅಗತ್ಯವಾದ ಹತ್ತು ಹಲವು ಘೋಷ ವಾಕ್ಯಗಳನ್ನು ಒಳಗೊಂಡ ಫಲಕಗಳು ವ್ಯಸನ ಮುಕ್ತರಾಗಿ ಎಂಬ ಸಂದೇಶ ರವಾನಿಸಿದವು. ದೇವರಾಜ ಪೊಲೀಸ್ ಠಾಣೆ ವತಿಯಿಂದ ಅಂತಾರಾಷ್ಟ್ರೀಯ ಮಾದಕ ಪದಾರ್ಥ ಸೇವನೆ ಮತ್ತು ಅಕ್ರಮ ಸಾಗಾಣೆ ವಿರೋಧಿ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಜಾಥಾ ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳು ಪಾಲ್ಗೊಂಡು ಈ ರೀತಿಯ ಸಂದೇಶಗಳ ಫಲಕಗಳನ್ನಿಡಿದು ಜಾಗೃತಿ ಮೂಡಿಸಿದರು. ಅವಿಲಾ ಕಾನ್ವೆಂಟ್ ಶಾಲಾ ಆವರಣದಿಂದ…
ಇಬ್ಬರು ದ್ವಿಚಕ್ರ ವಾಹನ ಕಳ್ಳರ ಬಂಧನ: 4 ಬೈಕ್ ವಶ
May 26, 2018ಮೈಸೂರು: ಮೈಸೂರಿನ ದೇವರಾಜ ಠಾಣೆ ಪೊಲೀಸರು ಇಬ್ಬರು ದ್ವಿಚಕ್ರ ವಾಹನ ಕಳ್ಳ ರನ್ನು ಬಂಧಿಸಿ, ಸುಮಾರು 3.50 ಲಕ್ಷ ಮೌಲ್ಯದ 4 ಬೈಕ್ ಗಳನ್ನು ವಶಪಡಿಸಿಕೊಂಡಿ ದ್ದಾರೆ. ರಾಜೀವ್‍ನಗರ 1ನೇ ಹಂತದ ತನ್ವೀರ್‍ಸೇಠ್ ಬ್ಲಾಕ್ ನಿವಾಸಿ ಮಹಮದ್ ಸಲ್ಮಾನ್ ರಾಜಾ (23) ಹಾಗೂ ಶಾಂತಿನಗರದ ನಿವಾಸಿ ಜಮೀರ್ ಪಾಷಾ(38) ಬಂಧಿತ ಆರೋಪಿಗಳು. ಮಹಮದ್ ಸಲ್ಮಾನ್ ಹಾಗೂ ಜಮೀರ್ ಪಾಷಾ, ಕಳವು ಮಾಡಿದ್ದ ರಾಯಲ್ ಎನ್‍ಫೀಲ್ಡ್ ಬುಲೆಟ್‍ನಲ್ಲಿ ಇಂದು ಬಿಎನ್ ಸ್ಟ್ರೀಟ್‍ನಲ್ಲಿ ಅನುಮಾ ನಾಸ್ಪದವಾಗಿ ಓಡಾಡುತ್ತಿದ್ದರು. ಈ ಸಂದರ್ಭದಲ್ಲಿ…