ಇಬ್ಬರು ದ್ವಿಚಕ್ರ ವಾಹನ ಕಳ್ಳರ ಬಂಧನ: 4 ಬೈಕ್ ವಶ
ಮೈಸೂರು

ಇಬ್ಬರು ದ್ವಿಚಕ್ರ ವಾಹನ ಕಳ್ಳರ ಬಂಧನ: 4 ಬೈಕ್ ವಶ

May 26, 2018

ಮೈಸೂರು:  ಮೈಸೂರಿನ ದೇವರಾಜ ಠಾಣೆ ಪೊಲೀಸರು ಇಬ್ಬರು ದ್ವಿಚಕ್ರ ವಾಹನ ಕಳ್ಳ ರನ್ನು ಬಂಧಿಸಿ, ಸುಮಾರು 3.50 ಲಕ್ಷ ಮೌಲ್ಯದ 4 ಬೈಕ್ ಗಳನ್ನು ವಶಪಡಿಸಿಕೊಂಡಿ ದ್ದಾರೆ. ರಾಜೀವ್‍ನಗರ 1ನೇ ಹಂತದ ತನ್ವೀರ್‍ಸೇಠ್ ಬ್ಲಾಕ್ ನಿವಾಸಿ ಮಹಮದ್ ಸಲ್ಮಾನ್ ರಾಜಾ (23) ಹಾಗೂ ಶಾಂತಿನಗರದ ನಿವಾಸಿ ಜಮೀರ್ ಪಾಷಾ(38) ಬಂಧಿತ ಆರೋಪಿಗಳು.

ಮಹಮದ್ ಸಲ್ಮಾನ್ ಹಾಗೂ ಜಮೀರ್ ಪಾಷಾ, ಕಳವು ಮಾಡಿದ್ದ ರಾಯಲ್ ಎನ್‍ಫೀಲ್ಡ್ ಬುಲೆಟ್‍ನಲ್ಲಿ ಇಂದು ಬಿಎನ್ ಸ್ಟ್ರೀಟ್‍ನಲ್ಲಿ ಅನುಮಾ ನಾಸ್ಪದವಾಗಿ ಓಡಾಡುತ್ತಿದ್ದರು. ಈ ಸಂದರ್ಭದಲ್ಲಿ ಬಾತ್ಮೀದಾರರ ಮಾಹಿತಿ ಮೇರೆಗೆ ದೇವರಾಜ ಠಾಣೆ ಸಿಬ್ಬಂದಿ ಎಲ್.ವೇಣುಗೋಪಾಲ್ ಹಾಗೂ ಮಂಜುನಾಥ್ ಆರೋಪಿ ಗಳನ್ನು ವಶಕ್ಕೆ ಪಡೆದರು. ನಂತರ ಠಾಣೆಗೆ ಕರೆತಂದು ವಿಚಾರಣೆಗೊಳಪಡಿಸಿದಾಗ ಕಳವು ಮಾಡಿದ್ದ ಬೈಕ್‍ಗಳ ಬಗ್ಗೆ ಮಾಹಿತಿ ನೀಡಿದ್ದ ಹಿನ್ನೆಲೆಯಲ್ಲಿ 2 ರಾಯಲ್ ಎನ್‍ಫೀಲ್ಡ್ ಬುಲೆಟ್ ಸೇರಿದಂತೆ ಸುಮಾರು 3.50 ಲಕ್ಷದ 4 ಬೈಕ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಡಿಸಿಪಿ ಮಹಾನಿಂಗ ನಂದಗಾವಿ, ದೇವರಾಜ ವಿಭಾಗದ ಎಸಿಪಿ ಮುರುಳೀಧರ್ ಮಾರ್ಗ ದರ್ಶನ, ದೇವರಾಜ ಠಾಣೆ ಇನ್ಸ್‍ಪೆಕ್ಟರ್ ಶಾಂತರಾಮು ನೇತೃತ್ವದಲ್ಲಿ ನಡೆದ ಕಾರ್ಯಾಚರಣೆ ಯಲ್ಲಿ ಸಬ್‍ಇನ್ಸ್‍ಪೆಕ್ಟರ್ ಮಹದೇವನಾಯಕ, ಮುಖ್ಯಪೇದೆ ವೇಣುಗೋಪಾಲ್, ಸೋಮಶೆಟ್ಟಿ, ಸುರೇಶ್, ಸಿಬ್ಬಂದಿ ಉಮೇಶ್, ಮಂಜುನಾಥ್ ಹಾಗೂ ನಂದೀಶ್ ಪಾಲ್ಗೊಂಡಿದ್ದರು.

Translate »