ಬಿರುಗಾಳಿ ಸಹಿತ ಮಳೆ: ಲಕ್ಷಾಂತರ ರೂ. ಹಾನಿ
ಹಾಸನ

ಬಿರುಗಾಳಿ ಸಹಿತ ಮಳೆ: ಲಕ್ಷಾಂತರ ರೂ. ಹಾನಿ

May 26, 2018

ರಾಮನಾಥಪುರ: ಹೋಬಳಿ ಸುತ್ತಮುತ್ತ ಬಿರುಗಾಳಿ ಸಹಿತ ಸುರಿದ ಮಳೆಗೆ ಲಕ್ಷಾಂತರ ರೂ. ಹಾನಿಯಾಗಿದೆ.

ಹೋಬಳಿಯ ಸುತ್ತಮುತ್ತ ಗುರುವಾರ ರಾತ್ರಿ ಸುರಿದ ಗಾಳಿ ಸಹಿತ ಮಳೆಯಿಂದ ಬೆಲೆ ಬಾಳುವ ಮರ-ಗಿಡಗಳು ನಾಶವಾಗಿದ್ದು, ಹಲವಾರು ಮನೆಗಳ ಹೆಂಚು, ಮೇಲ್ಛಾವಣೆ ಶೀಟುಗಳು ಹಾರಿ ಹೋಗಿವೆ. ಭಾರೀ ಗಾತ್ರದ ಮರಗಳು ಧರೆಗೆ ಉರುಳಿವೆ. ಕೆಲವು ಕಡೆಗಳಲ್ಲಿ ವಿದ್ಯುತ್ ಕಂಬಗಳು ಉರುಳಿದ್ದು ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದೆ. ಕೇರಳಾಪುರ, ಕಾಳೇನ ಹಳ್ಳಿ, ಆನಂದೂರು ಮುಂತಾದ ಕಡೆಗಳ ಗ್ರಾಮಗಳಲ್ಲಿ ಬಿರುಗಾಳಿಗೆ ಮನೆಗಳ ಮೇಲ್ಚಾವಣ ಹಾರಿ ಹೋಗಿದೆ. ಕೇರಳಾಪುರಕ್ಕೆ ಹೋಗುವ ಮಾರ್ಗ ಕಾಳೇನಹಳ್ಳಿ ರಸ್ತೆಯಲ್ಲಿ ಮರ ಬಿದ್ದು ವಾಹನ ಹಾಗೂ ಸಾರ್ವ ಜನಿಕರಿಗೆ ಕೆಲ ಕಾಲ ತೊಂದರೆಯಾಯಿತು.

Translate »