ವ್ಯಕ್ತಿ ಹತ್ಯೆ ಯತ್ನ: ಆರೋಪಿಗೆ 4 ವರ್ಷ ಜೈಲು ಶಿಕ್ಷೆ
ಮೈಸೂರು

ವ್ಯಕ್ತಿ ಹತ್ಯೆ ಯತ್ನ: ಆರೋಪಿಗೆ 4 ವರ್ಷ ಜೈಲು ಶಿಕ್ಷೆ

May 26, 2018

ಮೈಸೂರು:  ಹಳೇ ವೈಷ್ಯಮ್ಯದಿಂದ ವ್ಯಕ್ತಿಯನ್ನು ಹತ್ಯೆ ಮಾಡಲು ಯತ್ನಿಸಿದ್ದ ಆರೋಪಿಗೆ, ಮೈಸೂರಿನ 1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾ ಲಯದ ನ್ಯಾಯಾಧೀಶರಾದ ಎಸ್. ಸುಧೀಂದ್ರನಾಥ್ ಅವರು, 4 ವರ್ಷ ಜೈಲು ಶಿಕ್ಷೆ ವಿಧಿಸಿದ್ದಾರೆ.

ಕೆ.ಆರ್.ನಗರ ತಾಲೂಕಿನ ಬಸವಪುರ ಗ್ರಾಮದ ಹೇಮಚಂದ್ರ ಅಲಿಯಾಸ್ ಬಿ.ಎಲ್.ಚಂದ್ರು(47)ಗೆ ಶಿಕ್ಷೆ ವಿಧಿಸಲಾಗಿದೆ. ಈತ ನಾಲ್ಕು ವರ್ಷಗಳ ಹಿಂದೆ ವಿರೂ ಪಾಕ್ಷ ಅವರ ಮೇಲೆ ಹಲ್ಲೆ ಮಾಡಿ, ಹತ್ಯೆಗೆ ಯತ್ನಿಸಿದ್ದ. ಆರೋಪಿ ಹೇಮಚಂದ್ರ ಹಾಗೂ ವಿರೂಪಾಕ್ಷ ಕ್ಷುಲ್ಲಕ ವಿಚಾರಕ್ಕೆ ಜಗಳ ಮಾಡಿಕೊಂಡಿದ್ದರು. ಇದನ್ನೇ ಹಗೆ ಸಾಧಿಸಿದ್ದ ಹೇಮಚಂದ್ರ, ಸ್ನೇಹಿತರಾದ ಶ್ರೀನಿವಾಸ, ಅಶೋಕ ಹಾಗೂ ಮಂಜು ನಾಥನೊಡನೆ ಸೇರಿ 2012ರ ಸೆಪ್ಟೆಂಬರ್ 16ರಂದು ಕಾಲುವೆ ಏರಿಯ ಮೇಲೆ ವಿರೂಪಾಕ್ಷ ಅವರನ್ನು ಅಡ್ಡಗಟ್ಟಿ ನಿಲ್ಲಿಸಿ, ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದ. ಲಾಂಗ್ ಬೀಸಿದಾಗ ವಿರೂಪಾಕ್ಷ ತಪ್ಪಿಸಿ ಕೊಂಡಿದ್ದರು. ಆದರೆ ಕಬ್ಬಿಣದ ರಾಡ್ ನಿಂದ ಕಾಲುಗಳಿಗೆ ಹೊಡೆದು ಆರೋಪಿ ಗಳು ಪರಾರಿಯಾಗಿದ್ದರು.

ಈ ಸಂಬಂಧ ವಿರೂಪಾಕ್ಷ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿ ಕೊಂಡಿದ್ದ ಕೆ.ಆರ್.ನಗರ ಪೊಲೀಸರು, ತನಿಖೆ ನಡೆಸಿ, ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಮೈಸೂರಿನ 1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ರಾದ ಎಸ್.ಸುಧೀಂದ್ರನಾಥ್ ಅವರು, ಪ್ರಮುಖ ಆರೋಪಿ ಹೇಮಚಂದ್ರನ ವಿರುದ್ಧದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆತನಿಗೆ 4 ವರ್ಷ ಜೈಲುಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿದ್ದಾರೆ. ಇನ್ನುಳಿದ ಆರೋಪಿಗಳ ವಿರುದ್ಧದ ಆರೋಪ ಸಾಬೀತಾಗದ ಕಾರಣ ಅವರನ್ನು ಬಿಡುಗಡೆ ಮಾಡಲು ಆದೇಶಿಸಿ ತೀರ್ಪು ನೀಡಿದ್ದಾರೆ. ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಅಜಿತ್‍ಕುಮಾರ್ ಡಿ. ಹಮಿಗಿ ಅವರು ವಾದ ಮಂಡಿಸಿದ್ದರು.

Translate »