ಸ್ಕೂಟರ್‍ಗೆ ಟಿಪ್ಪರ್ ಡಿಕ್ಕಿ: ಯುವತಿ ಸಾವು, ಮತ್ತೊಬ್ಬ ಯುವತಿಗೆ ಗಂಭೀರ ಗಾಯ
ಮೈಸೂರು

ಸ್ಕೂಟರ್‍ಗೆ ಟಿಪ್ಪರ್ ಡಿಕ್ಕಿ: ಯುವತಿ ಸಾವು, ಮತ್ತೊಬ್ಬ ಯುವತಿಗೆ ಗಂಭೀರ ಗಾಯ

May 26, 2018

ಮೈಸೂರು: ಸ್ಕೂಟರ್‍ಗೆ ಟಿಪ್ಪರ್ ಹಿಂದಿ ನಿಂದ ಡಿಕ್ಕಿ ಹೊಡೆದ ಪರಿಣಾಮ ಯುವತಿಯೊಬ್ಬರು ಸಾವನ್ನಪ್ಪಿದ್ದು, ಮತ್ತೋರ್ವ ವಿದ್ಯಾರ್ಥಿಗೆ ಗಂಭೀರ ಗಾಯವಾಗಿರುವ ಘಟನೆ ಮೈಸೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆ ಸಮೀಪ ಹಳೇ ಟೋಲ್‍ಗೇಟ್ ಬಳಿ ಇಂದು ಮಧ್ಯಾಹ್ನ ಸಂಭವಿಸಿದೆ.

ಮೈಸೂರಿನ ಕೃಷ್ಣಮೂರ್ತಿಪುರಂ ನಿವಾಸಿಗಳಾದ ಚಂದ್ರಶೇಖರ್ ಅವರ ಪುತ್ರಿ ನೇಹಾ(19) ಸಾವನ್ನಪ್ಪಿದವರು. ತೀವ್ರ ಗಾಯ ಗೊಂಡಿರುವ ಜ್ಞಾನೇಶ್ವರ್ ಅವರ ಪುತ್ರಿ ಪ್ರಕೃತಿ(21)ಯನ್ನು ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಈಗ ತಾನೇ ದ್ವಿತೀಯ ಪಿಯುಸಿ ಪಾಸಾಗಿದ್ದ ನೇಹಾ ಮತ್ತು ಬಿಎಸ್ಸಿ ಓದುತ್ತಿದ್ದ ಪ್ರಕೃತಿ, ಹೋಂಡಾ ಆಕ್ಟಿವಾ (ಕೆಎ 09, ಹೆಚ್‍ಡಿ 8884)ದಲ್ಲಿ ಶ್ರೀರಂಗಪಟ್ಟಣ ಬಳಿಯ ನಿಮಿಷಾಂಬ ದೇವಸ್ಥಾನಕ್ಕೆ ಹೋಗುತ್ತಿದ್ದಾಗ ಹಿಂದಿನಿಂದ ಬಂದ ಟಿಪ್ಪರ್ (ಕೆಎ 42, 124) ಬೆಂಗಳೂರು-ಮೈಸೂರು ಹೆದ್ದಾರಿಯ ಹಳೇ ಟೋಲ್‍ಗೇಟ್ ಬಳಿ ಮಧ್ಯಾಹ್ನ 3.30 ಗಂಟೆಗೆ ಡಿಕ್ಕಿ ಹೊಡೆದಿದೆ.

ಪರಿಣಾಮ ಸ್ಕೂಟರ್‍ನಲ್ಲಿದ್ದ ಇಬ್ಬರಿಗೂ ತೀವ್ರ ಗಾಯಗಳಾದ ಕಾರಣ ಅವರನ್ನು ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ದಾಖಲಿಸ ಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ನೇಹಾ ಸಂಜೆ 4.15ಗೆ ಕೊನೆಯುಸಿರೆಳೆದರು. ಗಂಭೀರ ಗಾಯಗಳಾಗಿರುವ ಪ್ರಕೃತಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದು, ಆಕೆಯನ್ನು ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಕರಣ ದಾಖಲಿಸಿಕೊಂಡಿ ರುವ ಎನ್.ಆರ್. ಸಂಚಾರ ಠಾಣೆ ಇನ್ಸ್‍ಪೆಕ್ಟರ್ ನಾಗೇಶ ತನಿಖೆ ನಡೆಸುತ್ತಿದ್ದಾರೆ. ಟಿಪ್ಪರ್ ಅನ್ನು ವಶಕ್ಕೆ ಪಡೆದಿರುವ ಪೊಲೀಸರು, ಪರಾರಿಯಾಗಿರುವ ಚಾಲಕನಿಗಾಗಿ ಶೋಧ ನಡೆಸುತ್ತಿದ್ದಾರೆ.

Translate »