ಮೈಸೂರು ಬಗ್ಗೆ ಪ್ರವಾಸಿಗರಿಗೆ ಮಾರ್ಗಮಧ್ಯೆ ಮಾಹಿತಿ  ಒದಗಿಸಲು ಮಿನಿಯೇಚರ್ ಪಾರ್ಕ್ ಸ್ಥಾಪನೆ
ಮೈಸೂರು

ಮೈಸೂರು ಬಗ್ಗೆ ಪ್ರವಾಸಿಗರಿಗೆ ಮಾರ್ಗಮಧ್ಯೆ ಮಾಹಿತಿ ಒದಗಿಸಲು ಮಿನಿಯೇಚರ್ ಪಾರ್ಕ್ ಸ್ಥಾಪನೆ

February 12, 2019

ಮೈಸೂರು:ಮೈಸೂರು ನಗರ ಮತ್ತು ಸುತ್ತಮುತ್ತಲಿನ ಪ್ರವಾಸಿ ತಾಣಗಳ ಬಗ್ಗೆ ಮಾಹಿತಿ ನೀಡಲು ಬೆಂಗಳೂರು-ಮೈಸೂರು ನಡುವೆ ಮಿನಿಯೇಚರ್ ಪಾರ್ಕ್ ಮಾಡಲು ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಮುಂದಾಗಿದೆ.

ಪ್ರವಾಸಿಗರನ್ನು ಆಕರ್ಷಿಸಲು ಮೈಸೂರು-ಬೆಂಗಳೂರು ನಡುವೆ ಪ್ರಶಸ್ಥ ಸ್ಥಳವೊಂದರಲ್ಲಿ ಮಿನಿಯೇಚರ್ ಪಾರ್ಕ್ ನಿರ್ಮಿಸಿ ಮೈಸೂರು ಹಾಗೂ ಸುತ್ತಮುತ್ತ ಲಿನ ಪ್ರವಾಸಿ ತಾಣಗಳು, ಪ್ರವೇಶ ಸಮಯ, ಶುಲ್ಕ, ಪಾರ್ಕಿಂಗ್ ಸೌಲಭ್ಯ, ಅಲ್ಲಿಗೆ ಹೋಗುವ ಮಾರ್ಗ, ಯಾರನ್ನು ಹೇಗೆ ಸಂಪರ್ಕಿಸಬೇಕು ಎಂಬಿತ್ಯಾದಿ ಮಾಹಿತಿ ಗಳನ್ನು ನೀಡಲು ಚಿಂತಿಸಲಾಗಿದೆ.

ಈ ಕುರಿತಂತೆ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ‘ಮೈಸೂರು ಮಿತ್ರ’ ನೊಂದಿಗೆ ಮಾತನಾಡಿ, ಬೆಂಗಳೂರಿ ನಿಂದ ಹೊರಡುವ ಪ್ರವಾಸಿಗರು, ಸುಮಾರು 130 ಕಿ.ಮೀ. ದೂರ ಕ್ರಮಿಸಿ ಮೈಸೂರಿಗೆ ತಲುಪಲು ಕನಿಷ್ಟ 3 ತಾಸು ಬೇಕಾಗು ವುದರಿಂದ ತಿಂಡಿ-ಕಾಫಿ, ಊಟ ಮತ್ತು ವಿಶ್ರಾಂತಿಗೆಂದು ಮಾರ್ಗಮಧ್ಯೆ ತಮ್ಮ ವಾಹನಗಳ ನಿಲುಗಡೆ ಮಾಡುತ್ತಾರೆ.

ಮೈಸೂರಿಗೆ ತಲುಪಿದ ನಂತರ ಅಲ್ಲಿ ಮೊದಲು ಎಲ್ಲಿಗೆ ಹೋಗಬೇಕು, ಎಂದು ಪ್ಲಾನ್ ಮಾಡಿಕೊಳ್ಳುವಷ್ಟರಲ್ಲಿ ಸಂಜೆಯಾಗುತ್ತದೆ. ಕಡೆಗೆ ಸರಿಯಾಗಿ ಮಾಹಿತಿ ಸಿಗದೆ ಪರದಾಡುತ್ತಾರೆ. ಅವರಿಗೆ ಮೈಸೂರು ತಲುಪುವ ಮುಂಚೆಯೇ ಪ್ರವಾಸದ ಯೋಜನೆ ರೂಪಿಸಿಕೊಳ್ಳಲು ಅನುಕೂಲ ವಾಗುವಂತೆ ಈ ಯೋಜನೆ ಜಾರಿಗೊಳಿ ಸಲು ಚಿಂತನೆ ಮಾಡಿದ್ದೇವೆ ಎಂದರು.

ರಾಜ್ಯ ಪ್ರವಾಸೋದ್ಯಮ ನಿಗಮ (ಕೆಎಸ್‍ಟಿಡಿಸಿ)ದ ವತಿಯಿಂದ ಮಿನಿಯೇ ಚರ್ ಪಾರ್ಕ್(ಮಾಹಿತಿ ಹಾಗೂ ತಂಗು ದಾಣ) ಮಾಡಲು ಈಗಾಗಲೇ ಚರ್ಚಿಸಿ ದ್ದೇವೆ. ಅದಕ್ಕಾಗಿ ಚನ್ನಪಟ್ಟಣ ಸಮೀಪ ಹೆದ್ದಾರಿಯಲ್ಲಿ ಒಂದು ಜಾಗವನ್ನೂ ಗುರುತಿಸಿದ್ದೇವೆ. ನಿಗಮದಿಂದ ಪ್ರಸ್ತಾವನೆ ತರಿಸಿಕೊಂಡು ಸದರಿ ಉದ್ದೇಶಕ್ಕೆ ಭೂ ಸ್ವಾಧೀನಪಡಿಸಿಕೊಳ್ಳಲು ಪ್ರಕ್ರಿಯೆ ನಡೆ ಸುತ್ತೇವೆ ಎಂದು ತಿಳಿಸಿದರು.

ಮಾರ್ಗಮಧ್ಯೆ ನಿರ್ಮಿಸುವ ಮಿನಿಯೇ ಚರ್ ಪಾರ್ಕ್‍ನಲ್ಲಿ ಪ್ರವಾಸಿ ತಾಣಗಳ ಸಮಗ್ರ ಮಾಹಿತಿ ಒದಗಿಸಲು ವ್ಯವಸ್ಥೆ ಮಾಡುವ ಜತೆಗೆ ವಿಶ್ರಾಂತಿ ಗೃಹ, ಉಪ ಹಾರ-ಊಟ-ತಿಂಡಿ ಸೌಲಭ್ಯ ಕಲ್ಪಿಸಲು ಯೋಜನೆ ರೂಪಿಸಲಾಗುವುದು ಎಂದು ಸಚಿವರು ತಿಳಿಸಿದರು.

ಇದರಿಂದ ಪ್ರವಾಸಿಗರು ತಮಗೆ ಬೇಕಾದಂತೆ ಪ್ಲಾನ್ ಮಾಡಿಕೊಂಡು ಮೈಸೂರಲ್ಲಿ ಪ್ರವಾಸಿ ತಾಣಗಳನ್ನು ವೀಕ್ಷಿಸಲು ಅನುಕೂಲವಾಗುತ್ತದೆಯಲ್ಲದೆ, ಹೆಚ್ಚು ಪ್ರವಾಸಿಗರನ್ನು ಮೈಸೂರಿಗೆ ಸೆಳೆಯಬಹುದಾಗಿದೆ ಎಂದು ಸಾ.ರಾ.ಮಹೇಶ್ ತಿಳಿಸಿದರು.

Translate »