ಅಳಿವಿನತ್ತ ಹುಣಸಿನ ಕೆರೆ
ಹಾಸನ

ಅಳಿವಿನತ್ತ ಹುಣಸಿನ ಕೆರೆ

May 26, 2018

ಹಾಸನ: ನಗರದ ಹೊರ ವಲಯದಲ್ಲಿರುವ ಹುಣಸಿನಕೆರೆ ತ್ಯಾಜ್ಯಗಳ ಸಮ್ಮಿಶ್ರಣದಲ್ಲಿ ಸಂಪೂರ್ಣ ಕಲುಷಿತಗೊ ಳ್ಳುತ್ತಿದ್ದು, ಅಳಿವಿನ ಅಂಚಿನತ್ತ ಸಾಗುತ್ತಿದೆ.

ಬಡವರ ಊಟಿ ಎಂದೇ ಕರೆಯಲ್ಪ ಡುವ ಹಾಸನ ನಗರದಲ್ಲಿ ಈಗ ಎಲ್ಲಿ ನೋಡಿದರೂ ಸಿಮೆಂಟ್ ಕಟ್ಟಡಗಳೇ ಎದ್ದುನಿಂತಿದ್ದು, ನಗರದ ಜನತೆ ಮನೆ ಮಂದಿಯೊಂದಿಗೆ ರಜೆ ಕಳೆಯಲು ಮನಸ್ಸಿಗೆ ನೆಮ್ಮದಿಕೊಡುವಂತ ನೈಸರ್ಗಿಕ ಪ್ರದೇಶಗಳನ್ನು ಬೂದು ಕನ್ನಡಿಯಲ್ಲಿ ಹುಡುಕುವಂತಹ ಪರಿಸ್ಥಿತಿ ನಿರ್ಮಾಣ ವಾಗಿದೆ. ಪ್ರತಿ ವರ್ಷ ದೇಶ-ವಿದೇಶ ಗಳಿಂದ ಕೆರೆ ಅಂಗಳಕ್ಕೆ ವಲಸೆ ಬರುತ್ತಿದ್ದ ಪಕ್ಷಿಗಳ ಸಂಖ್ಯೆಯೂ ಕ್ಷೀಣ ಸುತ್ತಿದ್ದು, ಪಕ್ಷಿ ಪ್ರಿಯರಲ್ಲಿ ಆತಂಕ ಮೂಡಿಸಿದೆ.

261 ಎಕರೆ ವಿಸ್ತೀರ್ಣದಲ್ಲಿ ಹರಡಿರುವ ಹುಣಸಿನಕೆರೆ ಹಲವು ಇತಿಹಾಸಗಳನ್ನು ಹೊಂದಿದ್ದು, ಇದುವರೆಗೂ ಒಮ್ಮೆಗೂ ಬತ್ತದಿರುವುದು ವಿಶೇಷ.

ಪೂರ್ಣ ತ್ಯಾಜ್ಯಮಯ: ಈ ಹಿಂದೆ ಹಾಸನದ ಅಧಿದೇವತೆ ಹಾಸನಾಂಬೆಯ ಒಡವೆ-ವಸ್ತ್ರಗಳನ್ನು ಹುಣಸಿನಕೆರೆಯಲ್ಲಿ ಶುಚಿಗೊಳಿಸಲಾಗುತ್ತಿತ್ತು, ವರ್ಷದಲ್ಲಿ ವಾರ ಗಳು ಮಾತ್ರ ದರುಶನ ಭಾಗ್ಯ ಕರುಣ ಸುವ ಹಾಸನಾಂಬೆ ಜಾತ್ರೆ ಸಮಯದಲ್ಲಿ ಇದೇ ಕೆರೆ ಅಂಗಳದಲ್ಲಿ ಅದ್ಧೂರಿ ತೆಪ್ಪೋತ್ಸವ ನಡೆಯುತ್ತಿತ್ತು. ಆದರಿಂದು… ಎಲ್ಲವೂ ಬದಲಾಗಿದೆ. ಇತಿಹಾಸ ಪ್ರಸಿದ್ಧ ಹುಣಸಿನ ಕೆರೆ ಸಂಪೂರ್ಣ ತ್ಯಾಜ್ಯಮಯವಾಗಿ ತನ್ನ ಸೌಂದರ್ಯವನ್ನು ಕಳೆದುಕೊಳ್ಳುತ್ತಿದೆ.

ಪಕ್ಷಿ ಪ್ರಿಯರ ಆತಂಕ: ಪ್ರತಿವರ್ಷ ಚಳಿ ಗಾಲದಲ್ಲಿ ದೇಶ ವಿದೇಶಗಳಿಂದ ಸಾವಿರಾರು ವಿವಿಧ ಹಾಗೂ ವಿಶಿಷ್ಟ ಪಕ್ಷಿಗಳು ಹುಣಸಿನಕೆರೆ ಅಂಗಳಕ್ಕೆ ಬಂದು ಸಂತಾ ನೋತ್ಪತ್ತಿ ಕಾರ್ಯದಲ್ಲಿ ತೊಡಗಿ, ಮರಳು ತ್ತಿದ್ದವು. ಆದರೆ ಕೆರೆ ಸಂಪೂರ್ಣ ತ್ಯಾಜ್ಯ ಮಯವಾಗಿದ್ದು, ಕೆಲ ವರ್ಷದಿಂದೀಚೆಗೆ ಪಕ್ಷಿಗಳಿಗೆ ಬೇಕಾದ ಸೂಕ್ತ ವಾತಾವರಣ ವಿಲ್ಲದೆ ಈ ಬಾರಿ ವಲಸೆ ಬರುವ ಪಕ್ಷಿಗಳ ಸಂಖ್ಯೆಯಲ್ಲಿ ಭಾರೀ ಇಳಿಕೆ ಖಂಡಿರುವುದು, ಪಕ್ಷಿ ಪ್ರಿಯರಲ್ಲಿ ಆತಂಕವನ್ನುಂಟು ಮಾಡಿದೆ.

ಭದ್ರತಾ ಕೊರತೆ: ಅಷ್ಟೆಯಲ್ಲದೆ ಕೆರೆಯ ಸುತ್ತ ಮುತ್ತ ಯಾವುದೇ ಭದ್ರತಾ ವ್ಯವಸ್ಥೆ ಕಲ್ಪಿಸದ ಕಾರಣ, ಕೆರೆಯ ಸುತ್ತ ಅನೈತಿಕ ಚಟುವಟಿಕೆಗಳೂ ನಡೆಯುತ್ತಿದ್ದು ಒಂದುಕಡೆ ಯಾದರೇ ಕೆಲವರು ದಡದ ಬಂಡೆಗಳ ಮೇಲೆ ತಾಮ್ರದ ತಂತಿಯನ್ನು ತೆಗೆಯಲು ವೈರ್ ಗಳು, ಟೈರ್‍ಗಳನ್ನು ಭಾರೀ ಪ್ರಮಾಣದಲ್ಲಿ ಸುಡುತ್ತಿದ್ದು, ಅದರಿಂದ ಹೊರಬರುವ ಹೊಗೆಯಿಂದ ಕೆರೆಯಲ್ಲದೆ ಇಲ್ಲಿನ ಪ್ರದೇಶ ಕೂಡ ಸಂಪೂರ್ಣ ಮಲಿನಗೊಳ್ಳುತ್ತಿದೆ.

ಕೆರೆಯ ಸುತ್ತಮುತ್ತ ತ್ಯಾಜ್ಯ, ಕೊಳಚೆ ನೀರು, ಯುಜಿಡಿ ನೀರೆಲ್ಲಾ ಹುಣಸಿನ ಕೆರೆ ಅಂಗಳದಲ್ಲೇ ಶೇಖರಣೆಗೊಳ್ಳುತ್ತಿದೆ. ಈ ನಡುವೆ ಸ್ಥಳೀಯ ಪಕ್ಷಿಗಳು ಹಾಗೂ ಮೀನುಗಳು, ರಾಸಾಯನಿಕ ತ್ಯಾಜ್ಯ ಮಿಶ್ರಿತ ನೀರಿನಿಂದ ಸಾವನ್ನಪ್ಪುತ್ತಿವೆ. ತ್ಯಾಜ್ಯದ ದುರ್ನಾತ ಸುತ್ತಮುತ್ತಲ ಪ್ರದೇಶವನ್ನು ಆವರಿ ಸಿದ್ದು, ಅಕ್ಕ-ಪಕ್ಕದ ನಿವಾಸಿಗಳು ಖಾಯಿಲೆಗೆ ತುತ್ತಾಗುತ್ತಿದ್ದಾರೆ.
20 ಕೋಟಿ ರೂ. ಮೀಸಲು: ಅಂದ ಹಾಗೇ ಹುಣಸಿನ ಕೆರೆ ಅಭಿವೃದ್ಧಿಯನ್ನೇ ಕಂಡಿಲ್ಲವೆಂದಲ್ಲ, ಈಗಾಗಲೇ ಈ ಪ್ರದೇಶ ಒಂದಿಷ್ಟು ಅಭಿವೃದ್ಧಿ ಖಂಡಿದೆ. ಕೆರೆ ಏರಿಯನ್ನು ವಿಸ್ತರಿಸಲಾಗಿದೆ. ಸುತ್ತ ಮುತ್ತಲ ಒತ್ತುವರಿ ಯನ್ನು ತೆರವುಗೊಳಿಸಿ ತಂತಿ ಬೇಲಿ ಹಾಕ ಲಾಗಿದೆ. ಇದರೊಟ್ಟಿಗೆ ನಗರದ ಕೆರೆಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರ ಕಳೆದ ಬಜೆಟ್‍ನಲ್ಲಿ 20 ಕೋಟಿ ರೂ. ಮೀಸಲಿಟ್ಟಿದ್ದು, ಎಷ್ಟರ ಮಟ್ಟಿಗೆ ಅದರ ಸದುಪಯೋಗ ವಾಗುವುದೆಂಬುದನ್ನು ಕಾದುನೋಡಬೇಕಿದೆ.

ಒಟ್ಟಿನಲ್ಲಿ ಇಂತಹದೊಂದು ಅದ್ಭುತ ಕೆರೆ, ಪ್ರಕೃತಿ ಸೌಂದರ್ಯವನ್ನು ಮರುಸೃಷ್ಠಿ ಮಾಡಲು ಸಾಧ್ಯವಿಲ್ಲ. ನೈಸರ್ಗಿಕವಾಗಿ ಸೃಷ್ಠಿ ಯಾಗಿರುವ ಈ ಸುಂದರ ಪ್ರದೇಶ ವನ್ನು ಕಾಪಾಡಿಕೊಂಡಿದ್ದೇಯಾದಲ್ಲಿ ಈ ಪ್ರದೇಶವನ್ನು ಮನಸ್ಸಿಗೆ ನೆಮ್ಮದಿ ಕೊಡುವ ಒಂದು ಸುಂದರ ಪ್ರವಾಸಿ ತಾಣವನ್ನಾಗಿ ಮಾಡಬಹುದಾಗಿದೆ. ನಿಟ್ಟಿನಲ್ಲಿ ಸಂಬಂಧ ಇಲಾಖೆಗಳು, ಜನಪ್ರತಿನಿಧಿಗಳು, ನಾಗರಿಕರು ಎಚ್ಚೆತ್ತು ಕೆರೆ ಸಂರಕ್ಷಣೆಗೆ ಪಣ ತೊಡಬೇಕಿದೆ. ಬಡವರ ಊಟಿ ಎಂಬ ಹೆಸರನ್ನು ಉಳಿಸಿ ಕೊಳ್ಳಲು ನಗರದ ಪ್ರತಿಯೊಬ್ಬರೂ ನಿಸ್ವಾರ್ಥ ಮಾನೋ ಭಾವದಿಂದ ಇಂತಹ ಅಳಿದುಳಿದ ಕೆರೆಗಳನ್ನು, ನೈಸರ್ಗಿಕ ಸೊಬಗನ್ನು ಉಳಿಸಿ ಬೆಳಸು ವಂತಾಗಲೀ ಎಂಬುದೇ ನಮ್ಮ ಆಶಯ.

Translate »