ಮಾದಕ ವಸ್ತುಗಳ ಸೇವನೆ ಪರಿಣಾಮದ ಬಗ್ಗೆ ಜಾಗೃತಿ
ಮೈಸೂರು

ಮಾದಕ ವಸ್ತುಗಳ ಸೇವನೆ ಪರಿಣಾಮದ ಬಗ್ಗೆ ಜಾಗೃತಿ

June 27, 2018

ಮೈಸೂರು:  ಮಾದಕ ವಸ್ತುಗಳ ಸೇವನೆಯಿಂದ ದೂರವಿರಿ… ಆರೋಗ್ಯ ಕಾಪಾಡಿಕೊಳ್ಳಿ… ಎಂಬುದು ಸೇರಿದಂತೆ ಮಾದಕ ವಸ್ತುಗಳ ಮುಕ್ತ ಸಮಾಜಕ್ಕೆ ಅಗತ್ಯವಾದ ಹತ್ತು ಹಲವು ಘೋಷ ವಾಕ್ಯಗಳನ್ನು ಒಳಗೊಂಡ ಫಲಕಗಳು ವ್ಯಸನ ಮುಕ್ತರಾಗಿ ಎಂಬ ಸಂದೇಶ ರವಾನಿಸಿದವು.

ದೇವರಾಜ ಪೊಲೀಸ್ ಠಾಣೆ ವತಿಯಿಂದ ಅಂತಾರಾಷ್ಟ್ರೀಯ ಮಾದಕ ಪದಾರ್ಥ ಸೇವನೆ ಮತ್ತು ಅಕ್ರಮ ಸಾಗಾಣೆ ವಿರೋಧಿ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಜಾಥಾ ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳು ಪಾಲ್ಗೊಂಡು ಈ ರೀತಿಯ ಸಂದೇಶಗಳ ಫಲಕಗಳನ್ನಿಡಿದು ಜಾಗೃತಿ ಮೂಡಿಸಿದರು.

ಅವಿಲಾ ಕಾನ್ವೆಂಟ್ ಶಾಲಾ ಆವರಣದಿಂದ ಪ್ರಾರಂಭವಾದ ಜಾಗೃತಿ ಜಾಥಾ ಅರಸು ರಸ್ತೆ, ನಾರಾಯಣಶಾಸ್ತ್ರಿ ರಸ್ತೆ, ಕೃಷ್ಣವಿಲಾಸ ರಸ್ತೆ ಮೂಲಕ ಮತ್ತೆ ಶಾಲಾ ಆವರಣದಲ್ಲಿ ಮುಕ್ತಾಯಗೊಂಡಿತು. ಜಾಥಾದಲ್ಲಿ ಅವಿಲಾ ಕಾನ್ವೆಂಟ್‍ನ ಸುಮಾರು 150 ಮಕ್ಕಳು ಭಾಗವಹಿಸಿದ್ದರು. ದೇವರಾಜ ಠಾಣೆ ಸಬ್‍ಇನ್‍ಸ್ಪೆಕ್ಟರ್ ಮಹದೇವ ನಾಯ್ಕ, ಎಎಸ್‍ಐ ಉದಯ್‍ಕುಮಾರ್, ಮುಖ್ಯಪೇದೆ ಆಂಜನೇಯ, ಮಹಿಳಾ ಪೇದೆ ಚಂದ್ರಿಕಾ ಮತ್ತಿತರರು ಪಾಲ್ಗೊಂಡಿದ್ದರು.

Translate »