ಹಾರಂಗಿ ಜಲಾಶಯ ಭರ್ತಿಗೆ 20 ಅಡಿ ಬಾಕಿ
ಕೊಡಗು

ಹಾರಂಗಿ ಜಲಾಶಯ ಭರ್ತಿಗೆ 20 ಅಡಿ ಬಾಕಿ

June 27, 2018

ಕುಶಾಲನಗರ:  ಕಾವೇರಿ ಕಣಿವೆ ಪ್ರಮುಖ ಜಲಾಶಯಗಳಲ್ಲಿ ಒಂದಾಗಿ ರುವ ಹಾರಂಗಿ ಜಲಾಶಯ ಭರ್ತಿಗೆ ಮಂಗಳ ವಾರ 20 ಅಡಿ ಮಾತ್ರ ಬಾಕಿ ಇದೆ.

ಗರಿಷ್ಠ 2859 ಅಡಿ ಸಾಮಥ್ರ್ಯದಲ್ಲಿ ಮಂಗಳವಾರ ಮಧ್ಯಾಹ್ನ 12 ಗಂಟೆಗೆ 2838.52 ನೀರು ಸಂಗ್ರಹಗೊಂಡಿದ್ದು, 4.02 ಟಿಎಂಸಿ ನೀರು ಇದೆ. ಅಣೆಕಟ್ಟೆಗೆ ಒಳಹರಿವು 1252ಇದ್ದು, 30 ಕ್ಯೂಸೆಕ್ಸ್ ನೀರು ಹೊರ ಹರಿವು ಇದೆ.ಜಲಾಶಯ ವ್ಯಾಪ್ತಿಯಲ್ಲಿ ಮಳೆಯ ಪ್ರಮಾಣ 1.02 ಎಂ.ಎಂ. ಇದೆ. ಕಳೆದ ವರ್ಷ ಇದೇ ಅವಧಿಗೆ 2817 ಅಡಿ ನೀರು ಸಂಗ್ರಹ ಗೊಂಡಿತ್ತು. 2.34 ಟಿಎಂಸಿ ನೀರು ಮಾತ್ರ ಇತ್ತು. ಒಳ ಹರಿವು 980 ಇತ್ತು. ಇದೀಗ ಜಲಾನಯನ ಪ್ರದೇಶದಲ್ಲಿ ಮಳೆಯ ಪ್ರಮಾಣ ಸ್ವಲ್ಪ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಜಲಾಶಯಕ್ಕೆ ನೀರಿನ ಒಳ ಹರಿವು ಕಡಿಮೆ ಯಾಗಿದೆ ಎಂದು ಅಣೆಕಟ್ಟೆ ವಿಭಾಗದ ಸಹಾಯಕ ಎಂಜಿನಿಯರ್ ನಾಗರಾಜು ಮೈಸೂರುಮಿತ್ರಗೆ ತಿಳಿಸಿದ್ದಾರೆ.

Translate »