ಜೈನ ಮಿಲನ ಜೂನ್ ತಿಂಗಳ ಮಾಸಿಕ ಸಭೆ
ಮೈಸೂರು

ಜೈನ ಮಿಲನ ಜೂನ್ ತಿಂಗಳ ಮಾಸಿಕ ಸಭೆ

June 27, 2018

ಮೈಸೂರು:  ಜೈನ ಮಿಲನ, ಮೈಸೂರು ಮುಖ್ಯ ಶಾಖೆಯ ಜೂನ್ ತಿಂಗಳ ಮಾಸಿಕ ಸಭೆಯು ಅಧ್ಯಕ್ಷರಾದ ವೀರಾಂಗನಾ ಅಂಜನಾ ಸುದರ್ಶನ್ ಅವರ ಅಧ್ಯಕ್ಷತೆಯಲ್ಲಿ ನಿರ್ದೇಶಕ ವೀರ್ ನಿಟ್ಟೂರು ದೇವೇಂದ್ರ ಕುಮಾರ್ ನಿವಾಸದಲ್ಲಿ ನಡೆಯಿತು.
ಮಹಾವೀರ ಪ್ರಾರ್ಥನೆಯೊಂದಿಗೆ ಸಭೆ ಪ್ರಾರಂಭವಾಯಿತು. ಶ್ರೀಮತಿ ಜ್ಯೋತಿ ಆದರ್ಶ್ ಸ್ವಾಗತಿಸಿದರು. ಕಾರ್ಯದರ್ಶಿ ವೀರ್ ಬಿ.ಕೆ. ದೀಪಕ್ ಕುಮಾರ್ ಜೈನ್ ಹಿಂದಿನ ಸಭೆಯ ವರದಿ ಓದಿದರು.

ಎನ್.ಎಂ.ಪಿ. ಅಕಾಡೆಮಿಯ ಅಧ್ಯಕ್ಷರೂ ಆದ ಉಪ ನ್ಯಾಸಕಿ ಶ್ರೀಮತಿ ಡಾ. ಸಿ.ತೇಜೋವತಿ, ಜೈನ ಧರ್ಮದ ತತ್ವಗಳ ಬಗ್ಗೆ ತಮ್ಮ ವಿಚಾರಗಳನ್ನು ಹಂಚಿಕೊಂಡರು. ಜೈನ ಧರ್ಮ ವಿಶ್ವಧರ್ಮ, ಇದರ ಪಂಚ ಮಹಾ ವೃತ ಸಿದ್ಧಾಂತಗಳು ಅನುಕರಣೀಯ ಎಂದು ನುಡಿದರು. ಶ್ರೀಮತಿ ಸಿ.ತೇಜೋವತಿ ಆದಿ ಕವಿ ಪಂಪ ಅವರ ಜೀವನ, ದರ್ಶನ ಮತ್ತು ಕೃತಿಗಳ ಬಗ್ಗೆ ಸವಿಸ್ತಾರ ವಾಗಿ ಚರ್ಚಿಸಿದರು. ಪಂಪರನ್ನು ಕನ್ನಡದ ಕವಿಕುಲ ಗುರು ಎಂದು ವರ್ಣಿಸಿ, ಕನ್ನಡದ ಚೇತನವೆಂದು ಕರೆದರು. ಮಹಾಕವಿ ಪಂಪರವರ ಕೃತಿಗಳಲ್ಲಿ ಆದಿಪುರಾಣ ಜಿನಾಗಮವಾದರೆ ವಿಕ್ರಮಾರ್ಜುನ ವಿಜಯ ಲೌಕಿಕ ಕೃತಿ. ಈ ಎರಡೂ ಕೃತಿಗಳು ಪಾವನ ಕೃತಿಗಳೆಂದು ತಿಳಿಸಿದರು.

ಉಪಾಧ್ಯಕ್ಷ ವೀರ ಡಾ. ಎಸ್.ಪ್ರಸನ್ನ ಕುಮಾರ್, ನುಗ್ಗೆಕಾಯಿಯ ಉಪಯೋಗ, ಅದರ ಔಷಧೀಯ ಗುಣಗಳ ಸಂಬಂಧ ವೀರ್ ಜಿ.ಪಿ.ಅನಂತರಾಜು ಸಂಘ ಯಾತ್ರೆಯ ಮಾಹಿತಿ ನೀಡಿದರು. ವೀರ್ ಎನ್.ದೇವೇಂದ್ರಕುಮಾರ್ ಧಾರ್ಮಿಕ ರಸಪ್ರಶ್ನೆ ಕಾರ್ಯಕ್ರಮ ನಡೆಸಿಕೊಟ್ಟರು. ಶ್ರೀಮತಿ ಜ್ಯೋತಿ ಆದರ್ಶ್, ಡಾ. ಎಸ್. ಪ್ರಸನ್ನಕುಮಾರ್, ವೀರಾಂಗನಾ ನಂದಿನಿ ಅನಂತರಾಜು, ವೀರಾಂಗನಾ ರಾಪಾ ನಾಗರಾಜ್, ವೀರಾಂಗನಾ ಇಂದಿರಾ ಅಜರಿಯವರು ಬಹುಮಾನ ಪಡೆದರು. ಅದೃಷ್ಟ ವ್ಯಕ್ತಿಯಾಗಿ ವೀರಾಂಗನಾ ವೀರ್ ಬಿ.ಎಸ್.ಪ್ರಭಾಕರ್ ಆಯ್ಕೆಗೊಂಡರು. ವಿಭಿನ್ನ ಸ್ಪರ್ಧೆಗಳಲ್ಲಿ ವೀರಾಂಗನಾ ಸಹನಾ ಮಹಾವೀರಪ್ರಸಾದ್, ವೀರ್ ದೀಪಕ್ ಕುಮಾರ್ ಜೈನ್ ವಿಜೇತರಾದರು. ಜಂಟಿ ಕಾರ್ಯದರ್ಶಿ ವೀರಾಂಗನಾ ಚಂದ್ರಿಕಾ ಅಡಿಗಾ ವಂದಿಸಿದರು.

Translate »