ಅನುಮಾನಾಸ್ಪದವಾಗಿ ಸಾವಿಗೀಡಾದ ಸೈನಿಕ ಶಾಲೆ ವಿದ್ಯಾರ್ಥಿ ಕುಟುಂಬಕ್ಕೆ ಸಂಕೇತ್ ಸಾಂತ್ವನ
ಕೊಡಗು

ಅನುಮಾನಾಸ್ಪದವಾಗಿ ಸಾವಿಗೀಡಾದ ಸೈನಿಕ ಶಾಲೆ ವಿದ್ಯಾರ್ಥಿ ಕುಟುಂಬಕ್ಕೆ ಸಂಕೇತ್ ಸಾಂತ್ವನ

June 27, 2018

ಕುಶಾಲನಗರ: ಕಳೆದ ಶನಿವಾರ ಕೂಡಿಗೆ ಸೈನಿಕ ಶಾಲೆಯಲ್ಲಿ ನಿಗೂಢವಾಗಿ ಮೃತಪಟ್ಟ ವಿದ್ಯಾರ್ಥಿ ಚಿಂಗಪ್ಪ ಮನೆಗೆ ಕೊಡಗು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಮೇರಿ ಯಂಡ ಸಂಕೇತ್ ಪೂವಯ್ಯ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಮಾದಾಪುರದ ಮೂವತ್ತೊಕ್ಲು ಗ್ರಾಮ ದಲ್ಲಿರುವ ಮನೆಗೆ ಭೇಟಿ ನೀಡಿದ ಅವರು, ಮೃತ ವಿದ್ಯಾರ್ಥಿಯ ತಂದೆ ನಾಗಂಡ ಟಿ ಪೂವಯ್ಯ ಮತ್ತು ಕುಟುಂಬ ಸದಸ್ಯ ರೊಂದಿಗೆ ಚರ್ಚಿಸಿದರು. ತಮ್ಮ ಮಗನ ಸಾವಿಗೆ ಕಾರಣಕರ್ತರಾದ ಆರೋಪಿ ಗಳಿಗೆ ಶಿಕ್ಷೆಯಾಗುವಂತೆ ಮಾಡಲು ಸಹ ಕರಿಸುವುದರೊಂದಿಗೆ ತಮ್ಮ ಕುಟುಂಬಕ್ಕೆ ನ್ಯಾಯ ದೊರಕಿಸಿ ಎಂದು ಪೂವಯ್ಯ ಸಂಕೇತ್ ಅವರೊಂದಿಗೆ ಪೂವಯ್ಯ ತಮ್ಮ ಅಳಲನ್ನು ತೋಡಿಕೊಂಡರು.

ನಂತರ ಮಾತನಾಡಿದ ಅವರು, ಮೃತ ವಿದ್ಯಾರ್ಥಿಯ ಮರಣೋತ್ತರ ಪರೀಕ್ಷೆಯ ವರದಿ ಕೈಸೇರಿದ ಕೂಡಲೆ ಸಂಬಂಧಿಸಿದ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಕುಟುಂಬಕ್ಕೆ ನ್ಯಾಯ ಒದಗಿಸಲು ಪ್ರಯತ್ನಿಸಲಾಗುವುದು ಎಂದಿದ್ದಾರೆ.
ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುವ ಉದ್ದೇಶದೊಂದಿಗೆ ಸೈನಿಕ ಶಾಲೆಗೆ ಸೇರಿದ ಜಿಲ್ಲೆಯ ವಿದ್ಯಾರ್ಥಿ ಯೊಬ್ಬನ ನಿಗೂಢ ಸಾವಿನ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಲು ಸರಕಾರದ ಮಟ್ಟದಲ್ಲಿ ಒತ್ತಾಯಿ ಸಲಾಗುವುದು ಎಂದರಲ್ಲದೆ ಪ್ರಕರಣದ ಬಗ್ಗೆ ವೈಜ್ಞಾನಿಕ ರೀತಿಯಲ್ಲಿ ತನಿಖೆ ನಡೆಸಬೇಕಾಗಿದೆ ಎಂದು ತಿಳಿಸಿದರು.

ಮಾದಾಪುರದ ಜೆಡಿಎಸ್ ಸ್ಥಾನೀಯ ಸಮಿತಿ ಅಧ್ಯಕ್ಷ ಮುಸ್ತಾಫ ಸೀದಿ, ಗ್ರಾಪಂ ಸದಸ್ಯರು ಹಾಗೂ ಪಕ್ಷದ ಹೋಬಳಿ ಅಧ್ಯಕ್ಷರಾದ ಎಂ.ಎಂ.ಬೆಳ್ಳಿಯಪ್ಪ, ಜಿಲ್ಲಾ ಜೆಡಿಎಸ್ ಪ್ರಮುಖರಾದ ಡಿ.ಎಸ್.ಪೂವಯ್ಯ ಮತ್ತು ಕಾರ್ಯಕರ್ತರು ಇದ್ದರು.

Translate »