ಕಾಡಾನೆ ದಾಳಿಗೆ ಬಲಿಯಾದವರ ಕುಟುಂಬಕ್ಕೆ ತಕ್ಷಣ ಪರಿಹಾರ ವಿತರಿಸಿ :ಅಧಿಕಾರಿಗಳಿಗೆ ಅರಣ್ಯ ಸಚಿವ ಆರ್.ಶಂಕರ್ ಸೂಚನೆ
ಕೊಡಗು

ಕಾಡಾನೆ ದಾಳಿಗೆ ಬಲಿಯಾದವರ ಕುಟುಂಬಕ್ಕೆ ತಕ್ಷಣ ಪರಿಹಾರ ವಿತರಿಸಿ :ಅಧಿಕಾರಿಗಳಿಗೆ ಅರಣ್ಯ ಸಚಿವ ಆರ್.ಶಂಕರ್ ಸೂಚನೆ

June 27, 2018

ಮಡಿಕೇರಿ:  ಕಾಡಾನೆ ದಾಳಿಯಿಂದ ಜೀವ ಹಾನಿಯಾದ ವ್ಯಕ್ತಿಯ ಕುಟುಂಬಕ್ಕೆ ತಕ್ಷಣವೇ ಪರಿಹಾರ ವಿತರಿಸ ಬೇಕು. ಪ್ರಾಣ ಹಾನಿಯಿಂದ ನೊಂದಿರುವ ಕುಟುಂಬ ಸದಸ್ಯರನ್ನು ಪರಿಹಾರ ನೀಡುವ ನೆಪದಲ್ಲಿ ಕಚೇರಿಗೆ ಅಲೆದಾಡಿಸುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ರಾಜ್ಯ ಅರಣ್ಯ ಸಚಿವ ಆರ್.ಶಂಕರ್ ಕೊಡಗು ಸಿಸಿಎಫ್ ಲಿಂಗರಾಜ್ ಅವರಿಗೆ ಖಡಕ್ ಸೂಚನೆ ನೀಡಿದ್ದಾರೆ. ಮಡಿಕೇರಿ ಅರಣ್ಯ ಇಲಾಖೆ ನಿರೀಕ್ಷಣಾ ಮಂದಿರದಲ್ಲಿ ಅರಣ್ಯ ಅಧಿ ಕಾರಿಗಳೊಂದಿಗೆ ಸಚಿವ ಆರ್.ಶಂಕರ್ ಸಭೆ ನಡೆಸಿ ಮಾಹಿತಿ ಪಡೆದರು. ಈ ಸಂದರ್ಭ ಸ್ಥಳಕ್ಕೆ ಆಗಮಿಸಿದ ಸೋಮ ವಾರಪೇಟೆ ಹೇರೂರು ವ್ಯಾಪ್ತಿಯ ಕಾಫಿ ಬೆಳೆಗಾರರು, ಕಾಡಾನೆಗಳ ಉಪಟಳ ಗಳ ಬಗ್ಗೆ ಸಚಿವರ ಗಮನ ಸೆಳೆದರಲ್ಲದೇ, ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ದ ಅಸಮಧಾನ ವ್ಯಕ್ತಪಡಿಸಿದರು.

ಕೆಲ ದಿನಗಳ ಹಿಂದೆ ಮರದ ಕೊಂಬೆ ಮುರಿದು ಬಿದ್ದು ಮೃತಪಟ್ಟವರ ಮನೆಗೆ ತೆರಳಿ 5ಲಕ್ಷ ಪರಿಹಾರದ ಚೆಕ್ ವಿತರಿಸಿದ್ದಾರೆ. ಆದರೆ ಆನೆ ದಾಳಿಯಿಂದ ಮೃತಪಟ್ಟ ಕುಟುಂಬಗಳಿಗೆ ಪರಿಹಾರ ವಿತರಿಸಲು ತಾರತಮ್ಯ ಮಾಡಲಾಗುತ್ತಿದೆ ಎಂದು ಬೆಳೆಗಾರರು ಆಕ್ರೋಶ ವ್ಯಕ್ತ ಪಡಿಸಿದರು.

ಈ ಸಂದರ್ಭ ಪತಿಕ್ರಿಯಿಸಿದ ಸಚಿವ ಆರ್.ಶಂಕರ್ ಪರಿಹಾರ ವಿತರಣೆಯಲ್ಲಿ ತಾರ ತಮ್ಯ-ಭೇದ ಭಾವ ತೋರದೆ ತಕ್ಷಣವೇ ಪರಿಹಾರ ವಿತರಿಸಬೇಕು. ತಪ್ಪಿದರೆ ಶಿಸ್ತು ಕ್ರಮ ಜರುಗಿಸುತ್ತೇನೆ ಎಂದು ಸಿಸಿಎಫ್ ಲಿಂಗರಾಜು ಅವರಿಗೆ ಎಚ್ಚರಿಕೆ ನೀಡಿದರು. ಪರಿಹಾರದ ಚೆಕ್ಕನ್ನು ಮೃತರ ಮನೆಗೆ ತಲು ಪಿಸಿ ಎಂದು ಸಚಿವ ಪಿ.ಶಂಕರ್ ಸೂಚಿಸಿದರು.

ಹುಲಿ, ಚಿರತೆಯ ದಾಳಿಯಿಂದ ಮೃತ ಪಡುವ ಜಾನುವಾರುಗಳಿಗೂ ಹೆಚ್ಚಿನ ಪರಿಹಾರ ವಿತರಿಸಲು ಕ್ರಮಕೈಗೊಳ್ಳುವಂತೆ ಬೆಳೆಗಾರರು ಮನವಿ ಮಾಡಿದರಲ್ಲದೆ, ಬೆಳೆಗಾರರ ಸಮಸ್ಯೆ ಆಲಿಸಲು ಸಭೆ ಆಯೋ ಜಿಸುವಂತೆ ಮನವಿ ಪತ್ರ ಸಲ್ಲಿಸಿದರು. ಬೆಳೆಗಾರರ ಮನವಿಗೆ ಸ್ಪಂದಿಸಿದ ಅರಣ್ಯ ಸಚಿವ ಆರ್.ಶಂಕರ್ ಅತೀ ಶೀಘ್ರದಲ್ಲೇ ಜಿಲ್ಲೆಯಲ್ಲಿ ಬೆಳೆಗಾರರ ಸಭೆ ಆಯೋ ಜಿಸುವುದಾಗಿ ಭರವಸೆ ನೀಡಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಆರ್.ಶಂಕರ್ ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಆನೆ, ಹುಲಿ, ಚಿರತೆ ಹಾವಳಿ ಕುರಿತು ಮಾಹಿತಿ ಪಡೆದಿದ್ದು ಅವುಗಳ ನಿಯಂತ್ರಣಕ್ಕೆ ಯೋಜನೆ ರೂಪಿಸಲಾಗುತ್ತದೆ ಎಂದು ಹೇಳಿದರು. ಕಾಡಾನೆಗಳು ನಾಡಿಗೆ ಬರದಂತೆ ತಡೆ ಯಲು ರೈಲ್ವೇ ಕಂಬಿಗಳನ್ನು ಅಳವಡಿ ಸುವುದು ಸೂಕ್ತ. ಇದಕ್ಕಾಗಿ 1 ಕಿ.ಮೀಗೆ 1.50 ಕೋಟಿ ವೆಚ್ಚವಾಗಲಿದ್ದು, ಅರಣ್ಯ ಇಲಾಖೆಗೆ ಹೆಚ್ಚಿನ ಅನುದಾನ ನೀಡು ವಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೂ ಮನವಿ ಮಾಡಿದ್ದೇನೆ. ಅರಣ್ಯ ದೊಳಗೆ ಇಲಾಖೆ 5 ಕೋಟಿ ಗಿಡ ನೆಡುವ ಗುರಿಯಿ ಟ್ಟಿದ್ದು ಇದನ್ನು ಕನಿಷ್ಠ 10 ಕೋಟಿಗೆ ಏರಿಸುವ ಕುರಿತು ಮುಖ್ಯಮಂತ್ರಿಗಳ ಗಮನ ಸೆಳೆದಿದ್ದೇನೆ ಎಂದು ತಿಳಿಸಿದರು.

ಮುಖ್ಯಮಂತ್ರಿಗಳಿಂದಲೂ ಸೂಕ್ತ ಸ್ಪಂದನೆ ದೂರಕಿದ್ದು ಭವಿಷ್ಯದಲ್ಲಿ ಕಾಡಾನೆ ಮಾನವ ಸಂಘರ್ಷ ನಿಯಂತ್ರಣಕ್ಕೆ ಬರಲಿದೆ ಎಂದು ಹೇಳಿದರು. ಹುಲಿ, ಚಿರತೆ ದಾಳಿಯಿಂದ ಜಾನುವಾರುಗಳು ಬಲಿಯಾದರೆ ಪರಿಹಾರ ಮೊತ್ತವನ್ನು 10ರಿಂದ 25 ಸಾವಿರಕ್ಕೆ ಏರಿಸಲು ಕೂಡ ಕ್ರಮಕೈಗೊಳಲಾಗುವುದು ಎಂದು ತಿಳಿಸಿದರು. ಸೋಮವಾರಪೇಟೆ-ಸುಬ್ರಮಣ್ಯ ರಸ್ತೆ ಸಂಚಾರ ಆರಂಭಕ್ಕೆ ಅರಣ್ಯ ಇಲಾಖೆ ಕಡೆಯಿಂದ ಸ್ಪಂದನೆ ನೀಡುವುದಾಗಿ ಸಚಿವ ಆರ್.ಶಂಕರ್ ತಿಳಿಸಿದರು. ಉಪಟಳ ನೀಡುವ ಕಾಡಾನೆಗಳನ್ನು ಸೆರೆಹಿಡಿದು ಬೇರೆಡೆಗೆ ಸ್ಥಳಾಂತರಿಸಲು ಕೂಡ ಕ್ರಮಕೈ ಗೊಳ್ಳವು ದಾಗಿ ಸಚಿವರು ತಿಳಿಸಿದರು. ಸಭೆಯಲ್ಲಿ ಡಿಎಫ್‍ಓಗಳಾದ ಮಂಜುನಾಥ್, ಜಯಾ, ಮರಿಯಾ ಕ್ರಿಷ್ಟರಾಜ್, ಜಿಲ್ಲಾಧಿಕಾರಿ ಪಿ.ಐ.ಶ್ರೀ ವಿದ್ಯಾ ಉಪಸ್ಥಿತರಿದ್ದರು.

Translate »