Tag: Ganesh Festival

ಮೈಸೂರಲ್ಲಿ ಗಣೇಶ ಮೂರ್ತಿಗಳ ಸಾಮೂಹಿಕ ವಿಸರ್ಜನೆ
ಮೈಸೂರು

ಮೈಸೂರಲ್ಲಿ ಗಣೇಶ ಮೂರ್ತಿಗಳ ಸಾಮೂಹಿಕ ವಿಸರ್ಜನೆ

September 17, 2018

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ವಿವಿಧ ಬಡಾವಣೆಗಳಲ್ಲಿ ಕೂರಿಸಲಾಗಿದ್ದ ಗಣೇಶ ಮೂರ್ತಿಗಳ ಸಾಮೂಹಿಕ ವಿಸರ್ಜನಾ ಮೆರವಣಿಗೆಯು ಭಾನುವಾರ ವಿಜೃಂಭಣೆಯಿಂದ ನೆರವೇರಿತು. ಮೈಸೂರು ನಗರ ಸಾಮೂಹಿಕ ವಿನಾ ಯಕ ವಿಸರ್ಜನಾ ಮಂಡಳಿ ವತಿಯಿಂದ ಭಾನುವಾರ ಆಯೋಜಿಸಿದ್ದ 15ನೇ ವರ್ಷದ ಭವ್ಯ ಮೆರವಣಿಗೆಯಲ್ಲಿ ನಗರದ ವೀರನಗೆರೆ, ಎನ್.ಆರ್.ಮೊಹಲ್ಲಾ, ತಿಲಕ್‍ನಗರ, ಕೆಸರೆ, ಕ್ಯಾತಮಾರನಹಳ್ಳಿ, ಉದಯಗಿರಿ, ಕಲ್ಯಾಣಗಿರಿ, ಕುವೆಂಪು ನಗರ, ರಾಮಕೃಷ್ಣನಗರ, ನಾಯ್ಡುನಗರ ಮತ್ತಿತರೆ ಬಡಾವಣೆಗಳಲ್ಲಿ ಕೂರಿಸಲಾಗಿದ್ದ 30ಕ್ಕೂ ಹೆಚ್ಚು ಗಣಪತಿ ವಿಗ್ರಹಗ ಳೊಂದಿಗೆ ವಾಹನಗಳಲ್ಲಿ ಆಗಮಿಸಿದ್ದ ಭಕ್ತರು ಹಾಗೂ ಯುವಜನರು ಮೆರವಣಿಗೆಯಲ್ಲಿ…

ಕಟ್ಟುನಿಟ್ಟಿನ ಕ್ರಮ: ಪರಿಸರ ಸ್ನೇಹಿ ಗಣಪನ ಪೂಜೆಗೆ ವಿನಾಯಕ ಭಕ್ತರ ಆಸಕ್ತಿ
ಮೈಸೂರು

ಕಟ್ಟುನಿಟ್ಟಿನ ಕ್ರಮ: ಪರಿಸರ ಸ್ನೇಹಿ ಗಣಪನ ಪೂಜೆಗೆ ವಿನಾಯಕ ಭಕ್ತರ ಆಸಕ್ತಿ

September 6, 2018

ಮೈಸೂರು: ಪರಿಸರಕ್ಕೆ ಹಾನಿ ಉಂಟು ಮಾಡುವ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಓಪಿ), ರಸಾಯನಿಕ ಬಣ್ಣಲೇಪಿತ ಹಾಗೂ ಪೇಪರ್ ಮೌಲ್ಡೆಡ್ ಗಣೇಶ ವಿಗ್ರಹಗಳ ಬಳಕೆ ತಡೆಯುವ ನಿಟ್ಟಿನಲ್ಲಿ ಮೈಸೂರು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಪರಿಸರಕ್ಕೆ ಕುಂದುತರುವ ಪಿಓಪಿ-ರಸಾಯನಿಕ ಬಣ್ಣಲೇಪಿತ ಗಣೇಶ ವಿಗ್ರಹ ತಯಾರಿಕೆ ಹಾಗೂ ಅವುಗಳ ಹಾರಾಟಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಆಡಳಿತ ವರ್ಗ ಹಲವು ಕ್ರಮಗಳನ್ನು ಕೈಗೊಳ್ಳುವುದನ್ನು ಅನೇಕ ವರ್ಷಗಳ ಹಿಂದೆಯೇ ಪ್ರಾರಂಭಿಸಿದೆ. ಈ ಹಿನ್ನೆಲೆಯಲ್ಲಿ ವರ್ಷದಿಂದ ವರ್ಷಕ್ಕೆ ವಿಘ್ನೇಶನ ಭಕ್ತರು, ಮೂರ್ತಿಗಳ ತಯಾರಕರು ಮತ್ತು ವ್ಯಾಪಾರಸ್ಥರಲ್ಲಿ…

ಪ್ಲಾಸ್ಟರ್ ಆಫ್ ಪ್ಯಾರಿಸ್, ರಟ್ಟಿನ ಗಣಪನ ಮಾರಾಟ ನಿಷೇಧ
ಮೈಸೂರು

ಪ್ಲಾಸ್ಟರ್ ಆಫ್ ಪ್ಯಾರಿಸ್, ರಟ್ಟಿನ ಗಣಪನ ಮಾರಾಟ ನಿಷೇಧ

July 31, 2018

ಪರಿಸರ ಸ್ನೇಹಿ ಮಣ್ಣಿನ ಗಣಪನ ತಯಾರಿಕೆ, ಬಳಕೆಗೆ ಅವಕಾಶ  4 ಅಡಿಗಿಂತ ಹೆಚ್ಚಿನ ಎತ್ತರದ ಗಣಪನ ಪ್ರತಿಷ್ಠಾಪನೆಗೆ ಅನುಮತಿ ನಕಾರ ರಸ್ತೆ ಬದಿ ಮಾರಾಟ ನಿಷೇಧ, ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮದ ಎಚ್ಚರಿಕೆ ಮೈಸೂರು: ಮೈಸೂರು ನಗರದಲ್ಲಿ ಪರಿಸರಕ್ಕೆ ಮಾರಕವಾದ ಪ್ಲಾಸ್ಟರ್ ಆಫ್ ಪ್ಯಾರಿಸ್ ಮತ್ತು ಪೇಪರ್ ಮೋಲ್ಡ್‍ನಿಂದ ತಯಾರಿಸಿರುವ ಬಣ್ಣದ ಗಣಪತಿ ಮೂರ್ತಿಯ ಮಾರಾಟವನ್ನು ಕಡ್ಡಾಯವಾಗಿ ನಿಷೇಧಿಸಲಾಗಿದ್ದು, ನಾಲ್ಕು ಅಡಿಗಿಂತ ಅಧಿಕ ಎತ್ತರದ ಗಣಪತಿ ಮೂರ್ತಿ ತಯಾರಿಸದಂತೆ ಮೈಸೂರು ನಗರ ಪಾಲಿಕೆ ಕಟ್ಟುನಿಟ್ಟಿನ ಸೂಚನೆ ನೀಡಿದೆ….

Translate »