Tag: Gangothri Public School

ಗಂಗೋತ್ರಿ ಕಾಲೇಜಿನಲ್ಲಿ ಗುರುವಂದನಾ ಕಾರ್ಯಕ್ರಮ
ಮೈಸೂರು

ಗಂಗೋತ್ರಿ ಕಾಲೇಜಿನಲ್ಲಿ ಗುರುವಂದನಾ ಕಾರ್ಯಕ್ರಮ

July 29, 2018

ಮೈಸೂರು: ನಗರದ ಬೋಗಾದಿ ಮುಖ್ಯ ರಸ್ತೆಯಲ್ಲಿರುವ ಗಂಗೋತ್ರಿ ಪಬ್ಲಿಕ್ ಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನಲ್ಲಿ ಬೆಳಗಿನ ತಂಪಾದ ವಾತಾವರಣದಲ್ಲಿ ಭಕ್ತಿಭಾವದ ಗುರುಪೂರ್ಣಿಮೆಯ ಪ್ರಯುಕ್ತ ಗುರುವಂದನಾ ಕಾರ್ಯಕ್ರಮವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು. ಶಾಲಾ ಕಾಲೇಜಿನ ಆವರಣದಲ್ಲಿ ಶ್ರೀ ಆದಿಗುರು ಶಂಕರಾಚಾರ್ಯರಿಗೆ ಪೂಜೆ ಸಲ್ಲಿಸುತ್ತಾ ಕಾರ್ಯಕ್ರಮವನ್ನು ಪ್ರಾರಂಭ ಮಾಡಲಾಯಿತು. ಮೊದಲಿಗೆ ಕಾಲೇಜಿನ ವಿದ್ಯಾರ್ಥಿನಿಯಾದ ಕುಮಾರಿ ಸುರವಿ ತನ್ನ ಸುಮಧುರವಾದ ಕಂಠದಿಂದ ಪ್ರಾರ್ಥನೆ ಮಾಡಿದರು. ಆಂಗ್ಲ ಪ್ರಾಧ್ಯಾಪಕರಾದ ಲಕ್ಷ್ಮಿ ಚೌಧರಿರವರ ರಚನೆಯ ಗುರುಭಕ್ತಿಯನ್ನು ಬಿಂಬಿಸುವ ಗೀತೆಯನ್ನು ಕಾಲೇಜಿನ ವಿದ್ಯಾರ್ಥಿಗಳು ಸುಶ್ರಾವ್ಯವಾಗಿ ಹಾಡಿದರು….

ಗಂಗೋತ್ರಿ ಪಬ್ಲಿಕ್ ಶಾಲಾ ವಿದ್ಯಾರ್ಥಿಗಳಿಂದ ಸಾಧನೆ
ಮೈಸೂರು

ಗಂಗೋತ್ರಿ ಪಬ್ಲಿಕ್ ಶಾಲಾ ವಿದ್ಯಾರ್ಥಿಗಳಿಂದ ಸಾಧನೆ

July 22, 2018

ಕರಾಟೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆ, ಚದುರಂಗದಲ್ಲಿ ತೃತೀಯ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆ ಮೈಸೂರು:  ಸಾರ್ವಜನಿಕ ಶಿಕ್ಷಣ ಇಲಾಖಾ ವತಿಯಿಂದ ಇತ್ತೀಚೆಗೆ ಮೈಸೂರಿನ ಗುರುಭವನದಲ್ಲಿ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಆ ಸ್ಪರ್ಧೆಯಲ್ಲಿ ವಿವಿಧ ಶಾಲೆಗಳಿಂದ 14 ರಿಂದ 17ನೇ ವಯೋಮಿತಿಯ ಬಾಲಕ ಮತ್ತು ಬಾಲಕಿಯರು ಭಾಗವಹಿಸಿದ್ದರು. ಈ ಸ್ಪರ್ಧೆಯಲ್ಲಿ ನಗರದ ಬೋಗಾದಿ ಮುಖ್ಯ ರಸ್ತೆ, ಚರ್ಚ್ ಅಡ್ಡರಸ್ತೆ, ಮಾನಸ ಗಂಗೋತ್ರಿಯಲ್ಲಿರುವ ಗಂಗೋತ್ರಿ ಪ್ರೌಢಶಾಲೆ ಇಬ್ಬರು ವಿದ್ಯಾರ್ಥಿನಿಯರಾದ ದರ್ಶಿನಿ…

ಗಂಗೋತ್ರಿ ಪಬ್ಲಿಕ್ ಶಾಲೆಯಲ್ಲಿ ಹಸಿರು ದಿನ ಆಚರಣೆ
ಮೈಸೂರು

ಗಂಗೋತ್ರಿ ಪಬ್ಲಿಕ್ ಶಾಲೆಯಲ್ಲಿ ಹಸಿರು ದಿನ ಆಚರಣೆ

July 12, 2018

ಮೈಸೂರು: ನಗರದ ಬೋಗಾದಿ ಮುಖ್ಯ ರಸ್ತೆಯಲ್ಲಿರುವ ಗಂಗೋತ್ರಿ ಪಬ್ಲಿಕ್ ಶಾಲೆಯಲ್ಲಿ ಸುಂದರವಾದ ಹಸಿರು ವಾತಾವರಣದಲ್ಲಿ ವನಮಹೋತ್ಸವದ ಪ್ರಯುಕ್ತ ಹಸಿರು ದಿನ ಆಚರಿಸಲಾಯಿತು. ಮಕ್ಕಳಿಗೆ ಗಿಡಗಳ ಮಹತ್ವ, ಗಿಡಗಳಿಂದಾಗುವ ಉಪಯೋಗ, ಗಿಡಗಳಿಂದ ನಮಗೆ ಸಿಗುವಂತಹ ತರಕಾರಿ, ಹಣ್ಣು ಹಂಪಲು, ಹೂಗಳ ಬಗ್ಗೆ ತಿಳುವಳಿಕೆ ನೀಡಲಾಯಿತು. ಹಾಗೆಯೇ ಶಾಲೆಯಲ್ಲಿರುವ ವಿವಿಧ ಜಾತಿಯ ಹಣ್ಣು, ಹೂವಿನ ಗಿಡಗಳು, ಮರಗಳನ್ನು ಪರಿಚಯಿಸಲಾಯಿತು. ಔಷಧೀಯ ಗುಣಗಳಿರುವ ಗಿಡಗಳು, ಅವುಗಳನ್ನು ಯಾವಾಗ ಉಪಯೋಗಿಸುತ್ತಾರೆ ಎಂಬುದರ ಬಗ್ಗೆ ಅರಿವು ಮೂಡಿಸಲಾಯಿತು. ಮಕ್ಕಳು ಗಿಡಗಳ ಸುಂದರತೆ, ಅದರ ಉಪಯೋಗವನ್ನು…

Translate »