ಗಂಗೋತ್ರಿ ಪಬ್ಲಿಕ್ ಶಾಲೆಯಲ್ಲಿ ಹಸಿರು ದಿನ ಆಚರಣೆ
ಮೈಸೂರು

ಗಂಗೋತ್ರಿ ಪಬ್ಲಿಕ್ ಶಾಲೆಯಲ್ಲಿ ಹಸಿರು ದಿನ ಆಚರಣೆ

July 12, 2018

ಮೈಸೂರು: ನಗರದ ಬೋಗಾದಿ ಮುಖ್ಯ ರಸ್ತೆಯಲ್ಲಿರುವ ಗಂಗೋತ್ರಿ ಪಬ್ಲಿಕ್ ಶಾಲೆಯಲ್ಲಿ ಸುಂದರವಾದ ಹಸಿರು ವಾತಾವರಣದಲ್ಲಿ ವನಮಹೋತ್ಸವದ ಪ್ರಯುಕ್ತ ಹಸಿರು ದಿನ ಆಚರಿಸಲಾಯಿತು.

ಮಕ್ಕಳಿಗೆ ಗಿಡಗಳ ಮಹತ್ವ, ಗಿಡಗಳಿಂದಾಗುವ ಉಪಯೋಗ, ಗಿಡಗಳಿಂದ ನಮಗೆ ಸಿಗುವಂತಹ ತರಕಾರಿ, ಹಣ್ಣು ಹಂಪಲು, ಹೂಗಳ ಬಗ್ಗೆ ತಿಳುವಳಿಕೆ ನೀಡಲಾಯಿತು. ಹಾಗೆಯೇ ಶಾಲೆಯಲ್ಲಿರುವ ವಿವಿಧ ಜಾತಿಯ ಹಣ್ಣು, ಹೂವಿನ ಗಿಡಗಳು, ಮರಗಳನ್ನು ಪರಿಚಯಿಸಲಾಯಿತು. ಔಷಧೀಯ ಗುಣಗಳಿರುವ ಗಿಡಗಳು, ಅವುಗಳನ್ನು ಯಾವಾಗ ಉಪಯೋಗಿಸುತ್ತಾರೆ ಎಂಬುದರ ಬಗ್ಗೆ ಅರಿವು ಮೂಡಿಸಲಾಯಿತು. ಮಕ್ಕಳು ಗಿಡಗಳ ಸುಂದರತೆ, ಅದರ ಉಪಯೋಗವನ್ನು ಹಾಡು ಹಾಗೂ ನೃತ್ಯದ ಮೂಲಕ ತೋರಿಸಿದರು. ತಮ್ಮ ತಮ್ಮ ಮನೆಗಳಿಂದ ತಂದಂತಹ ವಿವಿಧ ತರಕಾರಿ ಹಾಗೂ ಅವುಗಳ ಉಪಯೋಗ ಕುರಿತು ಹೇಳಿದರು. ತಾವು ಪ್ರತಿದಿನ ತರಕಾರಿ ಹಾಗೂ ಹಣ್ಣುಗಳನ್ನು ತಿನ್ನುತ್ತೇವೆ ಎಂದು ಹೇಳಿದರು. ವಿವಿಧ ಹಣ್ಣುಗಳ ಚಿತ್ರ ಬರೆದು ಬಣ್ಣ ಹಾಕಿ ಅವುಗಳು ನಮ್ಮ ಆರೋಗ್ಯಕ್ಕೆ ಹೇಗೆ ಸಹಕಾರಿಯಾಗುತ್ತವೆ ಎಂದು ಪ್ರದರ್ಶಿಸಿದರು. ಪ್ರತಿಯೊಬ್ಬ ವಿದ್ಯಾರ್ಥಿಗೂ ತಮ್ಮ ಮನೆಯಲ್ಲಿ ಗಿಡಗಳನ್ನು ಬೆಳೆಸುವಂತೆ ತಿಳಿಸಲಾಯಿತು. ಹಾಗೆ ಗಿಡಗಳನ್ನು ಕೀಳಬಾರದು ಮತ್ತು ಅದನ್ನು ಸಂರಕ್ಷಿಸಬೇಕು ಎಂದು ತಿಳಿಸಲಾಯಿತು.

ಮೈಸೂರಿನ ಬೋಗಾದಿ ಮುಖ್ಯ ರಸ್ತೆಯಲ್ಲಿರುವ ಗಂಗೋತ್ರಿ ಪಬ್ಲಿಕ್ ಶಾಲೆಯಲ್ಲಿ ವನಮಹೋತ್ಸವದ ಪ್ರಯುಕ್ತ ಹಸಿರು ದಿನ ಆಚರಿಸಲಾಯಿತು. ಶಾಲೆಯ ಸಂಯೋಜನಾಧಿಕಾರಿ ಶ್ರೀಮತಿ ಕಾಂತಿ ನಾಯಕ್, ಮುಖ್ಯ ಶಿಕ್ಷಕಿ ಶ್ರೀಮತಿ ಝರೀನಾ ಬಾಬುಲ್, ಸಹ ಶಿಕ್ಷಕಿಯರಾದ ಎಸ್.ವಿಜಯಲಕ್ಷ್ಮಿ, ಶಿಕ್ಷಕಿಯರಾದ ಸುನೀತ, ಪವಿತ್ರ, ಅಭಿಲಾಷ, ಮಹಾಲಕ್ಷ್ಮಿ ಮತ್ತಿತರರು ಹಾಜರಿದ್ದರು.

Translate »