ಗಂಗೋತ್ರಿ ಪಬ್ಲಿಕ್ ಶಾಲಾ ವಿದ್ಯಾರ್ಥಿಗಳಿಂದ ಸಾಧನೆ
ಮೈಸೂರು

ಗಂಗೋತ್ರಿ ಪಬ್ಲಿಕ್ ಶಾಲಾ ವಿದ್ಯಾರ್ಥಿಗಳಿಂದ ಸಾಧನೆ

July 22, 2018
  • ಕರಾಟೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆ, ಚದುರಂಗದಲ್ಲಿ ತೃತೀಯ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಮೈಸೂರು:  ಸಾರ್ವಜನಿಕ ಶಿಕ್ಷಣ ಇಲಾಖಾ ವತಿಯಿಂದ ಇತ್ತೀಚೆಗೆ ಮೈಸೂರಿನ ಗುರುಭವನದಲ್ಲಿ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಆ ಸ್ಪರ್ಧೆಯಲ್ಲಿ ವಿವಿಧ ಶಾಲೆಗಳಿಂದ 14 ರಿಂದ 17ನೇ ವಯೋಮಿತಿಯ ಬಾಲಕ ಮತ್ತು ಬಾಲಕಿಯರು ಭಾಗವಹಿಸಿದ್ದರು. ಈ ಸ್ಪರ್ಧೆಯಲ್ಲಿ ನಗರದ ಬೋಗಾದಿ ಮುಖ್ಯ ರಸ್ತೆ, ಚರ್ಚ್ ಅಡ್ಡರಸ್ತೆ, ಮಾನಸ ಗಂಗೋತ್ರಿಯಲ್ಲಿರುವ ಗಂಗೋತ್ರಿ ಪ್ರೌಢಶಾಲೆ ಇಬ್ಬರು ವಿದ್ಯಾರ್ಥಿನಿಯರಾದ ದರ್ಶಿನಿ ಸಿ.ಎಸ್., 58 ಕೆ.ಜಿಯ ಗುಂಪಿನಲ್ಲಿ ಭಾಗವಹಿಸಿ ಪ್ರಥಮ ಸ್ಥಾನವನ್ನು ಹಾಗೂ ಪ್ರಿಯಾ ಬಿ.ಎಸ್., 69 ಕೆಜಿಯ ಗುಂಪಿನಲ್ಲಿ ಭಾಗವಹಿಸಿ ಪ್ರಥಮ ಸ್ಥಾನವನ್ನು ಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆ ಆಗಿ ಶಾಲೆಗೆ ಕೀರ್ತಿ ತಂದಿದ್ದಾರೆ.

ಕ್ಷೇತ್ರ ಶಿಕ್ಷಣ ಇಲಾಖಾ ವತಿಯಿಂದ ಇತ್ತೀಚೆಗೆ ಮೈಸೂರಿನ ಜೆಎಸ್‍ಎಸ್ ಫ್ರೌಢಶಾಲೆಯಲ್ಲಿ ತಾಲೂಕು ಮಟ್ಟದ ಚದುರಂಗ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಆ ಸ್ಪರ್ಧೆಯಲ್ಲಿ ವಿವಿಧ ಶಾಲೆಗಳಿಂದ 14 ರಿಂದ 17ನೇ ವಯೋಮಿತಿಯ ಬಾಲಕ ಮತ್ತು ಬಾಲಕಿಯರು ಭಾಗವಹಿಸಿದ್ದರು. ಈ ಸ್ಪರ್ಧೆಯಲ್ಲಿ ನಗರದ ಬೋಗಾದಿ ಮುಖ್ಯರಸ್ತೆ, ಚರ್ಚ್ ಅಡ್ಡ ರಸ್ತೆ, ಮಾನಸ ಗಂಗೋತ್ರಿಯಲ್ಲಿರುವ ಗಂಗೋತ್ರಿ ಪ್ರೌಢಶಾಲಾ ವಿದ್ಯಾರ್ಥಿಯಾದ ಹರೀಶ್ ಎಸ್. ಭಾಗವಹಿಸಿ ತೃತೀಯ ಸ್ಥಾನವನ್ನು ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆ ಆಗಿ ಶಾಲೆಗೆ ಕೀರ್ತಿ ತಂದಿದ್ದಾರೆ.

ಈ ಮೂವರು ವಿದ್ಯಾರ್ಥಿಗಳನ್ನು ಶಾಲೆಯ ಅಧ್ಯಕ್ಷ ಟಿ.ರಂಗಪ್ಪ, ಆಡಳಿತಾಧಿಕಾರಿ ಶ್ರೀಮತಿ ಕಾಂತಿನಾಯಕ್ ಹಾಗೂ ದೈಹಿಕ ಶಿಕ್ಷಕಿಯರಾದ ಕುಮಾರಿ ಮಂಜುಳ, ಕುಮಾರಿ ರಶ್ಮಿ ಮತ್ತಿತರರು ಅಭಿನಂದಿಸಿದರು.

ಮೈಸೂರಿನ ಗಂಗೋತ್ರಿ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಇತ್ತೀಚೆಗೆ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾಗಿ ರಾಜ್ಯ ಮಟ್ಟಕ್ಕೆ ದರ್ಶಿನಿ ಸಿ.ಎಸ್. ಹಾಗೂ ಪ್ರಿಯಾ ಬಿ.ಎಸ್. ಪ್ರಥಮ ಸ್ಥಾನ ಆಯ್ಕೆಯಾಗಿದ್ದಾರೆ. ಹಾಗೆಯೇ ತಾಲೂಕು ಮಟ್ಟದ ಚದುರಂಗ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾಗಿ ಜಿಲ್ಲಾ ಮಟ್ಟಕ್ಕೆ ಹರೀಶ್ ಎಸ್. ತೃತೀಯ ಆಯ್ಕೆಯಾಗಿದ್ದಾರೆ. ವಿಜೇತರೊಂದಿಗೆ ಶಾಲಾ ಅಧ್ಯಕ್ಷ ಟಿ.ರಂಗಪ್ಪ ಹಾಗೂ ಆಡಳಿತಾಧಿಕಾರಿ ಶ್ರೀಮತಿ ಕಾಂತಿನಾಯಕ್ ಅವರು ಇದ್ದಾರೆ.

Translate »