ವಾಟಾಳು ಮಠದ ಶ್ರೀಗಳಿಗೆ ಸನ್ಮಾನ
ಮೈಸೂರು

ವಾಟಾಳು ಮಠದ ಶ್ರೀಗಳಿಗೆ ಸನ್ಮಾನ

July 22, 2018

ಮೈಸೂರು:  ಗೌರವ ಡಾಕ್ಟರೇಟ್ ಪದವಿ ಪಡೆದಿರುವ ತಿ.ನರಸೀಪುರ ತಾಲೂಕಿನ ವಾಟಾಳು ಸೂರ್ಯ ಸಿಂಹಾಸನ ಮಠದ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಅವರಿಗೆ ಕರ್ನಾಟಕ ಇತಿಹಾಸ್ ಸಾಂಸ್ಕೃತಿಕ ಕಲಾ ಸಂಸ್ಥೆಯು ಶನಿವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸನ್ಮಾನಿಸಿತು.

ಈ ಸಂದರ್ಭಧಲ್ಲಿ ಮಾತನಾಡಿದ ಶ್ರೀಗಳು, ಸಂಸ್ಥೆಯು, ಮಠದ ಸಂಪ್ರದಾಯ, ಪರಂಪರೆಯಂತೆ ಜಾತಿ, ಮತ, ಬೇಧವಿಲ್ಲದೆ ಎಲ್ಲರನ್ನೂ ಸಮ ಭಾವನೆಯಿಂದ ಪೋಷಿಸುತ್ತಿದೆ. ನೊಂದವರು ಮತ್ತು ಅಬಲರಿಗೆ ಊಟ, ವಸತಿ ವಿದ್ಯಾಭ್ಯಾಸ ನೀಡಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಮಠ ನೀಡಿರುವ ಸೇವೆಯನ್ನು ಪರಿಗಣಿಸಿ ಧಾರವಾಡದ ಇಂಡಿಯನ್ ವಚ್ರ್ಯೂಯಲ್ ಅಕಾಡೆಮಿ ಫಾರ್ ಪೀಸ್ ಅಂಡ್ ಎಜುಕೇಷನ್ ಸಂಸ್ಥೆ ನೀಡಿದ ಗೌರವ ಡಾಕ್ಟರೇಟ್ ಅನ್ನು ಸ್ವೀಕರಿಸಲು ಮೊದಲು ನಿರಾಕರಿಸಿದ್ದ ಶ್ರೀಗಳು ಜೆಎಸ್‍ಎಸ್ ಸ್ವಾಮೀಜಿ ಅವರ ಸಲಹೆ ಬಳಿಕ ಸ್ವೀಕರಿಸಿದ್ದಾಗಿ ತಿಳಿಸಿದರು.

ಸನ್ಮಾನ ಸಮಾರಂಭದಲ್ಲಿ ಸಹಕಾರ ಇಲಾಖೆಯ ನಿವೃತ್ತ ಉಪ ನಿರ್ದೆಶಕ ಸಿ.ಮಹದೇವಯ್ಯ, ಆಹಾರ ಇಲಾಖೆ ನಿವೃತ್ತ ಉಪ ನಿರ್ದೇಶಕ ಡಾ.ಎಸ್.ಇ.ಮಹದೇವಪ್ಪ, ಕೆಪಿಸಿಸಿ ರಾಜ್ಯ ಸಂಚಾಲಕ ಕಾಳಯ್ಯ ಇನ್ನಿತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Translate »