ಹುಲ್ಲಹಳ್ಳಿಯಲ್ಲಿ ನಾಳೆ ಬೀಜ ನೆಡುವ ಹಬ್ಬ
ಮೈಸೂರು

ಹುಲ್ಲಹಳ್ಳಿಯಲ್ಲಿ ನಾಳೆ ಬೀಜ ನೆಡುವ ಹಬ್ಬ

July 22, 2018

ಮೈಸೂರು:  ಕೋಟಿ ವೃಕ್ಷ ಪ್ರತಿಷ್ಠಾನದ ವತಿಯಿಂದ ಜು.22ರಂದು ನಂಜನಗೂಡಿನ ಹುಲ್ಲಹಳ್ಳಿ ಗ್ರಾಮದಲ್ಲಿ ಬೀಜ ನೆಡುವ ಹಬ್ಬ ಹಮ್ಮಿಕೊಳ್ಳಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಶ್ರೀಕಾಂತ್ ಭಟ್ ತಿಳಿಸಿದರು.

ಹುಲ್ಲಹಳ್ಳಿಯಲ್ಲಿ ಸಾವಿರ ಗಿಡ ನೆಡುವ ಕಾರ್ಯಕ್ರಮಕ್ಕೆ ಅಂದು ಮಧ್ಯಾಹ್ನ 2.30ಕ್ಕೆ ಚಾಲನೆ ನೀಡಲಾಗುವುದು. ಮುಂದಿನ ದಿನಗಳಲ್ಲಿ ಕೋಟಿ ಗಿಡ ನೆಡುವ ಗುರಿ ಹೊಂದಲಾಗಿದೆ. ಪ್ರತಿಷ್ಠಾನದ ವತಿಯಿಂದ ಪ್ರತಿ ಭಾನುವಾರ ಸಸ್ಯ ಬೆಳೆಸುವ ಚಟುವಟಿಕೆ ನಡೆಯುತ್ತಿದ್ದು, ಸಂಸ್ಥೆಯಿಂದ ಉತ್ಪಾದಿಸಿದ ಗಿಡಗಳನ್ನು ಬೇಡಿಕೆ ಬಂದಲ್ಲಿ ಉಚಿತವಾಗಿ ವಿತರಿಸಲಾಗುವುದು. ಈಗಾಗಲೇ 3 ಸಾವಿರ ಗಿಡಗಳನ್ನು ವಿತರಿಸಲಾಗಿದೆ ಎಂದು ಶನಿವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಹಸು ಮತ್ತು ಇತರೆ ಪ್ರಾಣಿಗಳು ತಿನ್ನದ ಬೇವು, ಹಲಸು, ಮಾವು, ಹೊಂಗೆ, ಬನ್ನಿ ಇತರೆ ಸುಮಾರು 15 ವಿಧದ ಸಸ್ಯಗಳನ್ನು ಉತ್ಪಾದಿಸಲಾಗುತ್ತಿದೆ. ಈ ಗಿಡಗಳನ್ನು ತಾಲೂಕಿನಾದ್ಯಂತ ಹಂತ ಹಂತವಾಗಿ ನೆಡÀಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ವೆಂಕಟೇಶ್, ಪುರುಷೋತ್ತಮ್, ನಾಲ್ವಡಿ ಕೃಷ್ಣರಾಜ ಒಡೆಯರ್ ಕಾನೂನು ಸಂಶೋಧನೆ ಹಾಗೂ ಅಧ್ಯಯನ ಸಂಸ್ಥೆ ಅಧ್ಯಕ್ಷÀ ಭಾಸ್ಕರ್, ಲಯನ್ಸ್ ಸಂಸ್ಥೆಯ ಅರುಣ್‍ಕುಮಾರ್, ರಾಮಚಂದ್ರ ಭಟ್, ಉತ್ತರ ಕರ್ನಾಟಕ ಸಾಂಸ್ಕøತಿಕ ಸಂಘದ ಡಾ.ರಾಮ್‍ಪ್ರಕಾಶ್, ಎನ್‍ಐಇ ಕಾಲೆಜಿನ ಡಾ.ಅನ್ನಪೂರ್ಣ ಉಪಸ್ಥಿತರಿದ್ದರು.

Translate »