ಕಾವೇರಿ ಕೊಡಗು ಮಹಿಳಾ ಸಂಘದಿಂದ ಉಚಿತ ವೈದ್ಯಕೀಯ ತಪಾಸಣಾ ಶಿಬಿರ
ಮೈಸೂರು

ಕಾವೇರಿ ಕೊಡಗು ಮಹಿಳಾ ಸಂಘದಿಂದ ಉಚಿತ ವೈದ್ಯಕೀಯ ತಪಾಸಣಾ ಶಿಬಿರ

July 12, 2018

ಮೈಸೂರು: ಮೈಸೂರಿನ ಶ್ರೀ ಕಾವೇರಿ ಕೊಡಗು ಮಹಿಳಾ ಸಂಘದ ವತಿ ಯಿಂದ ಶ್ರೀರಾಂಪುರ 2ನೇ ಹಂತ, ಎಲ್‍ಐಸಿ ಕಾಲೋನಿ, ಸಿ.ಎ. ನಂ.4ರಲ್ಲಿರುವ ಮಹಾವೀರ ವಿದ್ಯಾಮಂದಿರದಲ್ಲಿ ಜು.15 (ಭಾನುವಾರ) ರಂದು ಬೆಳಿಗ್ಗೆ 10.30ರಿಂದ ಸಂಜೆ 4 ಗಂಟೆವರೆಗೆ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ. ಶಿಬಿರವನ್ನು ಡಾ. ಮಾತಂಡ ಅಯ್ಯಪ್ಪ ಉದ್ಘಾಟಿಸಲಿದ್ದು, ಸಂಘದ ಅಧ್ಯಕ್ಷರಾದ ಜೆರ್ರಿ ಪೊನ್ನಪ್ಪ ಅಧ್ಯಕ್ಷತೆ ವಹಿಸುವರು.

ಫಿಜಿಷಿಯನ್ ಡಾ.ಲತಾ ಮುತ್ತಣ್ಣ, ಮೂಳೆ ರೋಗ ತಜ್ಞ ಡಾ.ದೇವಯ್ಯ, ಚರ್ಮ ರೋಗ ತಜ್ಞರಾದ ಡಾ.ಪಿ.ಎ.ಕುಶಾಲಪ್ಪ, ಡಾ. ಪೂವಮ್ಮ, ಮೂತ್ರ ರೋಗ ತಜ್ಞರಾದ ಡಾ.ಮಾದಪ್ಪ, ಮೂತ್ರ ರೋಗ ತಜ್ಞ ಡಾ.ಸೋಮಣ್ಣ, ಮಕ್ಕಳ ತಜ್ಞರಾದ ಡಾ. ರಾಜೇಶ್ವರಿ ಮಾದಪ್ಪ, ಡಾ.ಅಯ್ಯಪ್ಪ (ಜನರಲ್ ಮೆಡಿಸಿನ್), ಡಾ.ಅಯ್ಯಣ್ಣ, ಸ್ತ್ರೀ ರೋಗ ತಜ್ಞರಾದ ಡಾ.ಪೂವಮ್ಮ, ಡಾ.ಸೋನಿಯಾ ಮಂದಪ್ಪ, ಡಾ. ಪದ್ಮಿನಿ ಕಾವೇರಪ್ಪ ಮತ್ತು ದಂತ ವೈದ್ಯರಾದ ಡಾ.ಶೃತಿ ಸೋಮಯ್ಯ ಅವರು ಸಿಗ್ಮಾ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ನೇತ್ರಧಾಮ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯ ಪ್ರತಿನಿಧಿಗಳೊಂದಿಗೆ ಭಾಗವಹಿಸುವರು.
ಹೆಚ್ಚಿನ ಮಾಹಿತಿಗೆ ಅಧ್ಯಕ್ಷರಾದ ಜೆರ್ರಿ ಪೊನ್ನಪ್ಪ, ಮೊ. 9901536733 ಅಥವಾ ಕಾರ್ಯದರ್ಶಿ ಕಾವ್ಯ ಕುಟ್ಟಪ್ಪ, ಮೊ. 99642-36284 ಅನ್ನು ಸಂಪರ್ಕಿಸಬಹುದು. ಸಾರ್ವಜನಿಕರು ಶಿಬಿರದಲ್ಲಿ ಭಾಗವಹಿಸಲು ತಮ್ಮ ಹಳೆಯ ವೈದ್ಯಕೀಯ ದಾಖಲೆ ಗಳನ್ನು ಕಡ್ಡಾಯವಾಗಿ ತರಬೇಕಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Translate »