ಮೈಸೂರು: ಪುನರಾರಂಭ ವಾಗಿರುವ ಹುಣಸೂರು ರಸ್ತೆಯನ್ನು ನೇರ ಹಾಗೂ ಅಗಲೀಕರಣ ಮಾಡುವ ಕಾಮ ಗಾರಿಯನ್ನು ತಕ್ಷಣವೇ ನಿಲ್ಲಿಸದಿದ್ದರೆ ಲೋಕೋ ಪಯೋಗಿ ಇಲಾಖೆಯಿಂದ ನ್ಯಾಯಾ ಲಯಕ್ಕೆ ಬರೆದುಕೊಟ್ಟಿರುವ ಮುಚ್ಚಳಿಕೆ ಉಲ್ಲಂಘನೆಯಾಗುತ್ತದೆ ಎಂದು ಮೈಸೂರು ಗ್ರಾಹಕ ಪರಿಷತ್ (ಎಂಜಿಪಿ) ಎಚ್ಚರಿಸಿದೆ. ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿ ರುವ ಎಂಜಿಪಿಯ ಎಸ್.ಶೋಭನ ಮತ್ತು ನಿವೃತ್ತ ಮೇಜರ್ ಜನರಲ್ ಎಸ್.ಜಿ. ಒಂಬತ್ಕೆರೆ ಅವರುಗಳು, ಈ ರಸ್ತೆ ಕಾಮ ಗಾರಿಯ ಮೂಲ ಯೋಜನೆಯು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮೈಸೂರು ಮಹಾ ಯೋಜನೆ-2031ಕ್ಕೆ ವಿರುದ್ಧ…
‘ಸಿಂಹ’ ಘರ್ಜನೆ ಫಲ: ಮೈಸೂರು ಜಲದರ್ಶಿನಿ ಬಳಿ ಹುಣಸೂರು ರಸ್ತೆ ಭಾಗಶಃ ನೇರಗೊಳಿಸುವ ತ್ವರಿತ ಕಾಮಗಾರಿ ಆರಂಭ
June 24, 2018ಮೈಸೂರು: ಮೈಸೂರಿನ ಜಲದರ್ಶಿನಿ ಬಳಿ ಅಪಘಾತ ವಲಯ ಎನಿಸಿದ್ದ ಹುಣಸೂರು ರಸ್ತೆ ತಿರುವನ್ನು ಭಾಗಶಃ ನೇರಗೊಳಿಸುವ ತ್ವರಿತ ಕಾಮಗಾರಿ ಈಗ ಆರಂಭವಾಗಿದೆ. ತಿರುವನ್ನು ನೇರಗೊಳಿಸಿ ಅಪಘಾತಗಳನ್ನು ತಪ್ಪಿಸಬೇಕೆಂಬ ಉದ್ದೇಶದಿಂದ ರಾಷ್ಟ್ರೀಯ ಹೆದ್ದಾರಿ ಅಧಿಕಾರಿ ಗಳು 12 ಕೋಟಿ ರೂ. ಕೇಂದ್ರ ರಸ್ತೆ ನಿಧಿಯಡಿ ಯೋಜನೆ ರೂಪಿಸಿದ್ದ ರಾದರೂ, ಕಡೆಗೆ ಕೇವಲ ರಸ್ತೆ ಅಗಲೀಕರಣ ಗೊಳಿಸಿ, ಡಾಂಬ ರೀಕರಣ ಮಾಡಿ ಸುಮ್ಮನಾಗಿದ್ದರು. ರಸ್ತೆ ನೇರಗೊಳಿಸಿಲ್ಲ, ಇಕ್ಕೆಲಗಳಲ್ಲಿ ಪಾದಚಾರಿ ರಸ್ತೆಗೆ ಜಾಗವನ್ನೂ ಬಿಟ್ಟಿಲ್ಲ. ಇದರಿಂದ ಇಲ್ಲಿರುವ ಮಹಾರಾಣಿ ಕಾಮರ್ಸ್ ಕಾಲೇಜು…
ಮೈಸೂರು ಜಲದರ್ಶಿನಿ ಬಳಿ ಹುಣಸೂರು ರಸ್ತೆ ನೇರಗೊಳಿಸುವ ಕಾಮಗಾರಿಯಲ್ಲಿ ಭಾರೀ ಅಕ್ರಮ
June 22, 2018ಸಂಸದ ಪ್ರತಾಪ್‍ಸಿಂಹ ಆರೋಪ, ಸಮರ್ಪಕ ಕಾಮಗಾರಿಗೆ ವಾರದ ಗಡುವು ಸ್ಥಳ ಪರಿಶೀಲಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ತೀವ್ರ ತರಾಟೆ ಅವ್ಯವಹಾರದ ಬಗ್ಗೆ ತನಿಖೆಗೆ ಒತ್ತಾಯ, ತಪ್ಪಿದರೆ ಉಗ್ರ ಹೋರಾಟದ ಎಚ್ಚರಿಕೆ ಮೈಸೂರು: ಮೈಸೂರಿನ ಜಲದರ್ಶಿನಿ ಅತಿಥಿಗೃಹದ ಮುಂಭಾಗದಿಂದ ಪಡುವಾರಹಳ್ಳಿ ಸಿಗ್ನಲ್ ಜಂಕ್ಷನ್‍ವರೆಗಿನ ಹುಣಸೂರು ರಸ್ತೆ ನೇರ ಗೊಳಿಸುವ ಕಾಮಗಾರಿಯನ್ನು ಯೋಜನೆ ಅನುಸಾರ ಇನ್ನೊಂದು ವಾರದಲ್ಲಿ ಪೂರ್ಣ ಗೊಳಿಸುವಂತೆ ಅಧಿಕಾರಿಗಳಿಗೆ ಗಡುವು ನೀಡಿರುವ ಸಂಸದ ಪ್ರತಾಪ್ ಸಿಂಹ, ಕಾಮಗಾರಿಯಲ್ಲಿ ಅಕ್ರಮ ನಡೆದಿರುವ ಬಗ್ಗೆ ತನಿಖೆಗೆ ಒತ್ತಾಯಿಸುವುದಾಗಿ ತಿಳಿಸಿದ್ದಾರೆ….