ಹುಣಸೂರು ರಸ್ತೆ ನೇರ, ಅಗಲೀಕರಣ ಕಾಮಗಾರಿ ಮುಂದುವರೆಸಿದರೆ ಕೋರ್ಟ್ ಆದೇಶ ಉಲ್ಲಂಘನೆ: ಎಂಜಿಪಿ ಎಚ್ಚರಿಕೆ
ಮೈಸೂರು

ಹುಣಸೂರು ರಸ್ತೆ ನೇರ, ಅಗಲೀಕರಣ ಕಾಮಗಾರಿ ಮುಂದುವರೆಸಿದರೆ ಕೋರ್ಟ್ ಆದೇಶ ಉಲ್ಲಂಘನೆ: ಎಂಜಿಪಿ ಎಚ್ಚರಿಕೆ

June 27, 2018

ಮೈಸೂರು: ಪುನರಾರಂಭ ವಾಗಿರುವ ಹುಣಸೂರು ರಸ್ತೆಯನ್ನು ನೇರ ಹಾಗೂ ಅಗಲೀಕರಣ ಮಾಡುವ ಕಾಮ ಗಾರಿಯನ್ನು ತಕ್ಷಣವೇ ನಿಲ್ಲಿಸದಿದ್ದರೆ ಲೋಕೋ ಪಯೋಗಿ ಇಲಾಖೆಯಿಂದ ನ್ಯಾಯಾ ಲಯಕ್ಕೆ ಬರೆದುಕೊಟ್ಟಿರುವ ಮುಚ್ಚಳಿಕೆ ಉಲ್ಲಂಘನೆಯಾಗುತ್ತದೆ ಎಂದು ಮೈಸೂರು ಗ್ರಾಹಕ ಪರಿಷತ್ (ಎಂಜಿಪಿ) ಎಚ್ಚರಿಸಿದೆ.

ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿ ರುವ ಎಂಜಿಪಿಯ ಎಸ್.ಶೋಭನ ಮತ್ತು ನಿವೃತ್ತ ಮೇಜರ್ ಜನರಲ್ ಎಸ್.ಜಿ. ಒಂಬತ್ಕೆರೆ ಅವರುಗಳು, ಈ ರಸ್ತೆ ಕಾಮ ಗಾರಿಯ ಮೂಲ ಯೋಜನೆಯು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮೈಸೂರು ಮಹಾ ಯೋಜನೆ-2031ಕ್ಕೆ ವಿರುದ್ಧ ವಾಗಿತ್ತು. ಆದ್ದರಿಂದ ಈ ಕಾಮಗಾರಿ ವಿರುದ್ಧ ಎಂಜಿಪಿ ಮೈಸೂರಿನ 2ನೇ ಹೆಚ್ಚು ವರಿ ಪ್ರಥಮ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿತ್ತು ಎಂದಿದ್ದಾರೆ.

ಅದರನುಸಾರ ನ್ಯಾಯಾಲಯವು ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (ಲೋಕೋಪಯೋಗಿ ಇಲಾಖೆ ಎಇಇ) ನೋಟೀಸ್ ಜಾರಿ ಮಾಡಿತ್ತು. ಆಗ ಲೋಕೋ ಪಯೋಗಿ ಇಲಾಖೆಯ ಎಇಇ ಅವರೇ ಕೆಲವೇ ಮರಗಳನ್ನು ಕತ್ತರಿಸುವ, ಜಲ ದರ್ಶಿನಿಯ ಪಾರಂಪರಿಕ ಕಾಂಪೌಂಡ್ ಅನ್ನು ಉಳಿಸುವ ಹಾಗೂ ಕಾಂಪೌಂಡ್‍ನ ಒಳಗಿರುವ ಎಲ್ಲಾ ಮರಗಳನ್ನು ಉಳಿ ಸುವ ಪರಿಷ್ಕøತ ಯೋಜನೆಯನ್ನು ಸಿದ್ಧ ಪಡಿಸಿದ್ದರು. ಅದನ್ನು ಒಪ್ಪಿದ ಮೇಲೆ ಎಇಇ ಅವರು ಪರಿಷ್ಕøತ ಯೋಜನೆಯಂತೆಯೇ ಕಾಮಗಾರಿ ನಡೆಸಲಾಗುತ್ತದೆ ಎಂದು ನ್ಯಾಯಾ ಲಯಕ್ಕೆ ಮುಚ್ಚಳಿಕೆ ಬರೆದುಕೊಟ್ಟು, ಕಾಮ ಗಾರಿ ಆರಂಭಿಸಿದ್ದರು ಎಂದು ಎಂಜಿಪಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಆದರೆ ಈಗ ಕಾಮಗಾರಿಯನ್ನು ಪುನರಾರಂಭಿಸಿದ್ದು, ಈ ರಸ್ತೆಯ ಕುಕ್ಕರ ಹಳ್ಳಿ ಪಾಶ್ರ್ವದಲ್ಲಿ ಅನೇಕ ಮರಗಳನ್ನು ಕಡಿಯಲಾಗಿದೆ ಹಾಗೂ ಜಲದರ್ಶಿನಿಯ ಪಾರಂಪರಿಕ ಕಾಂಪೌಂಡ್‍ನ ಭಾಗವನ್ನು ಒಡೆದಿರುವುದು ಕಂಡು ಬಂದಿದೆ. ಮೈಸೂರು ಮಹಾ ಯೋಜನೆ-2031ರಲ್ಲಿ ಉಲ್ಲೇಖವಾಗಿರುವ ಹುಣಸೂರು ರಸ್ತೆಯ ಪಾರಂಪರಿಕ ಮೌಲ್ಯವನ್ನು ನಾಶ ಮಾಡಿರುವುದಲ್ಲದೇ, ನ್ಯಾಯಾಲಯಕ್ಕೆ ಲೋಕೋಪಯೋಗಿ ಇಲಾಖೆ ಎಇಇ ನೀಡಿ ರುವ ಮುಚ್ಚಳಿಕೆಯ ಸ್ಪಷ್ಟ ಉಲ್ಲಂಘನೆ ಯಾಗಿದೆ. ತಕ್ಷಣವೇ ಈ ಕಾಮಗಾರಿಯನ್ನು ನಿಲ್ಲಿಸುವುದು ಒಳಿತು. ಮುಚ್ಚಳಿಕೆ ಉಲ್ಲಂಘನೆ ಯಾಗಿರುವುದರಿಂದ ಲೋಕೋಪಯೋಗಿ ಇಲಾಖೆಯ ಎಇಇ ಕಾನೂನು ಕ್ರಮಕ್ಕೆ ಒಳಗಾಗಬಹುದು ಎಂದು ಎಂಜಿಪಿ ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಲಾಗಿದೆ.

Translate »