Tag: Kodagu

ಜನರಲ್ ತಿಮ್ಮಯ್ಯ ಸ್ಮಾರಕಕ್ಕೆ ಬಂದಿಳಿದ ಸೇನಾ ಶಸ್ತ್ರಾಸ್ತ್ರಗಳು
ಕೊಡಗು

ಜನರಲ್ ತಿಮ್ಮಯ್ಯ ಸ್ಮಾರಕಕ್ಕೆ ಬಂದಿಳಿದ ಸೇನಾ ಶಸ್ತ್ರಾಸ್ತ್ರಗಳು

March 4, 2019

ಮಡಿಕೇರಿ: ವೀರ ಯೋಧ ಜನರಲ್ ತಿಮ್ಮಯ್ಯ ಅವರು ಹುಟ್ಟಿ ಬೆಳೆದ ಸನ್ನಿಸೈಡ್ ನಿವಾಸವನ್ನು ‘ಜನರಲ್ ತಿಮ್ಮಯ್ಯ ವಾರ್ ಮೆಮೋರಿಯಲ್’ ಆಗಿ ಪರಿವರ್ತಿಸಲಾಗಿದ್ದು, ದೇಶದ ವಿವಿಧ ಸೇನಾ ಶಸ್ತ್ರಾಸ್ತ್ರಗಳ ಡಿಪೋಗಳಿಂದ ಸಂಗ್ರಹಿಸಲಾದ 25ಕ್ಕೂ ಹೆಚ್ಚು ಆಯುಧಗಳನ್ನು ಮಡಿಕೇರಿಗೆ ತರಲಾಗಿದೆ. ಲೈಟ್ ಮಿಷಿನ್ ಗನ್ ಗಳು, ಮೀಡಿಯಂ ಮಿಷಿನ್ ಗನ್‍ಗಳು, ಸೆಲ್ಫ್ ಲೋಡಿಂಗ್ ರೈಫಲ್‍ಗಳು, 7.62 ಮತ್ತು 303 ಬೋರ್ ರೈಫಲ್‍ಗಳು, ಸೆಮಿಮಿಷಿನ್ ಕಾರ್ಬೈನ್ ಗನ್, ಪಾಯಿಂಟ್ 38 ಎಂ.ಎಂ. ರೈಫಲ್, ಬಝೂಕಾ ರಾಕೇಟ್ ಲಾಂಚರ್‍ಗಳು ಸೇರಿ ದಂತೆ ಹಲವು…

ಹೊಗೆ ಮುಕ್ತ ದೇಶವನ್ನಾಗಿಸಲು ಉಚಿತ ಗ್ಯಾಸ್ ವಿತರಣೆ
ಕೊಡಗು

ಹೊಗೆ ಮುಕ್ತ ದೇಶವನ್ನಾಗಿಸಲು ಉಚಿತ ಗ್ಯಾಸ್ ವಿತರಣೆ

March 4, 2019

ವಿರಾಜಪೇಟೆ: ದೇಶ ಅಭಿವೃದ್ಧಿ ಹೊಂದಲು ಹಾಗೂ ಹೊಗೆ ಮುಕ್ತ ದೇಶವನ್ನಾಗಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮಹತ್ವದ ಯೋಜನೆಯಿಂದ ದೇಶದ 16 ಕೋಟಿ ಬಡ ಕುಟುಂಬಳಿಗೆ ಉಚಿತ ಗ್ಯಾಸ್ ಸಿಲಿಂಡರ್ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವು ದಾಗಿ ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಹೇಳಿದರು. ಕೇಂದ್ರ ಸರ್ಕಾರದ ಉಜ್ವಾಲ್ ಯೋಜನೆ ವತಿಯಿಂದ ವಿರಾಜಪೇಟೆ ಸಮೀಪದ ತೋರ ಗ್ರಾಮದ ಸಮು ದಾಯ ಭವನದಲ್ಲಿ ಆಯೋಜಿಸಲಾಗಿದ್ದ 24 ಬಡ ಕುಟುಂಬಗಳಿಗೆ ಉಚಿತ ಗ್ಯಾಸ್ ಸಿಲಿಂಡರ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶವನ್ನು…

ಹೆಚ್ಚು ಅನುದಾನ ತರುವಲ್ಲಿ ನಾನೇ ನಂ.1 ಸಂಸದ ಪ್ರತಾಪಸಿಂಹ ಪ್ರತಿಪಾದನೆ
ಕೊಡಗು

ಹೆಚ್ಚು ಅನುದಾನ ತರುವಲ್ಲಿ ನಾನೇ ನಂ.1 ಸಂಸದ ಪ್ರತಾಪಸಿಂಹ ಪ್ರತಿಪಾದನೆ

March 4, 2019

ಮಡಿಕೇರಿ: ರಾಜ್ಯದಿಂದ ಲೋಕ ಸಭೆ ಮತ್ತು ರಾಜ್ಯಸಭೆಯನ್ನು ಪ್ರತಿನಿಧಿ ಸುವ ಒಟ್ಟು 39 ಸಂಸದರಿದ್ದು, ಇಂದಿನವ ರೆಗೂ ಕೇಂದ್ರ ಸರಕಾರದಿಂದ ನನ್ನಷ್ಟು ಅನುದಾನವನ್ನು ಯಾವ ಸಂಸದರೂ ತರಲಿಲ್ಲ ಎಂದು ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ ಸಮರ್ಥಿಸಿಕೊಂಡಿದ್ದಾರೆ. ನಗರದ ಬಾಲ ಭವನದಲ್ಲಿ ಬುಧವಾರ ನಡೆದ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸಭೆ ಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೇಂದ್ರ ಸರಕಾರ ಭೂ ಕುಸಿತ ಮತ್ತು ಪ್ರವಾಹ ಪರಿಸ್ಥಿತಿ ನಷ್ಟಕ್ಕೆಂದು 525 ಕೋಟಿ ರೂ. ಗಳನ್ನು ಬಿಡುಗಡೆ ಮಾಡಿದೆ. ಆದರೆ ರಾಜ್ಯ…

ಕೊಲೆ ಆರೋಪ ಸಾಬೀತು: ಅಪರಾಧಿಗೆ ಶಿಕ್ಷೆ
ಕೊಡಗು

ಕೊಲೆ ಆರೋಪ ಸಾಬೀತು: ಅಪರಾಧಿಗೆ ಶಿಕ್ಷೆ

March 4, 2019

ಮಡಿಕೇರಿ: ಕೊಲೆ ಪ್ರಕರಣ ಸಾಬೀತಾದ ಹಿನ್ನಲೆ ಯಲ್ಲಿ ಆರೋಪಿಗೆ ವಿರಾಜಪೇಟೆ 2ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿಕ್ಷೆ ಮತ್ತು ದಂಡ ವಿಧಿಸಿ ತೀರ್ಪು ನೀಡಿದೆ. ಕುಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ಮಂಚಳ್ಳಿ ಗ್ರಾಮದ ಕಾಫಿ ತೋಟದ ಲೈನ್ ಮನೆಯೊಂದರಲ್ಲಿ ವಾಸವಿದ್ದ ಪಣಿ ಎರವರ ಚುಂಡೆ ಎಂಬಾಕೆಯೇ ಶಿಕ್ಷೆಗೆ ಒಳಗಾದ ಅಪರಾಧಿ. ಪ್ರಕರಣ ಹಿನ್ನಲೆ: ಕುಟ್ಟ ಸಮೀಪದ ಮಂಚಳ್ಳಿ ಗ್ರಾಮದ ಕಾಫಿ ತೋಟ ಒಂದರಲ್ಲಿ ಚುಂಡೆ ತನ್ನ ಮಗಳಾದ ಶೋಭಾ ಎಂಬಾಕೆಯೊಂದಿಗೆ ವಾಸವಿದ್ದಳು. ಈ ನಡುವೆ ಗೌರಿ…

ನಾಳೆಯಿಂದ ಮತದಾರರ ನೋಂದಣಿ, ಜಾಗೃತಿ ಅಭಿಯಾನ
ಕೊಡಗು

ನಾಳೆಯಿಂದ ಮತದಾರರ ನೋಂದಣಿ, ಜಾಗೃತಿ ಅಭಿಯಾನ

March 4, 2019

ಮಡಿಕೇರಿ: ಲೋಕಸಭಾ ಚುನಾ ಚಣೆಗೆ ಸದ್ಯದಲ್ಲಿಯೇ ದಿನಾಂಕ ಪ್ರಕಟವಾಗ ಲಿದ್ದು, ಚುನಾವಣೆಯಲ್ಲಿ ಮತದಾರರು ಕಡ್ಡಾಯವಾಗಿ ಭಾಗವಹಿಸುವುದರಿಂದ ಉತ್ತಮ ಹಾಗೂ ಬಲಿಷ್ಠ ಪ್ರಜಾಪ್ರಭುತ್ವ ನಿರ್ಮಾಣ ಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಮತದಾರರು ಕಡ್ಡಾಯ ವಾಗಿ ಮತದಾನ ಮಾಡಲು ಹಾಗೂ ಮತ ದಾನದ ಮಹತ್ವದ ಕುರಿತು ವಿಶೇಷ ಜಾಗೃತಿ ಮೂಡಿಸಲು ಮತದಾರರ ನೋಂದಣಿ ಅಭಿಯಾನ ಹಾಗೂ ಮತದಾನ ಜಾಗೃತಿ ಜಾಥ ವಿಶೇಷ ಅಭಿಯಾನವು ಮಾ.5 ರಿಂದ 12 ರವರೆಗೆ ನಡೆಯಲಿದೆ ಎಂದು ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ ಅಧ್ಯಕ್ಷೆ ಕೆ.ಲಕ್ಷ್ಮಿಪ್ರಿಯ…

ಪಾಲಿಬೆಟ್ಟದಲ್ಲಿ ಔಷಧಿ ಕಿಟ್ ವಿತರಣೆ
ಕೊಡಗು

ಪಾಲಿಬೆಟ್ಟದಲ್ಲಿ ಔಷಧಿ ಕಿಟ್ ವಿತರಣೆ

March 4, 2019

ಗೋಣಿಕೊಪ್ಪಲು: ಅಲೋಪತಿ ವೈದ್ಯರುಗಳು ಬರಲು ನಿರಾಕರಿಸುತ್ತಿದ್ದು, ಹೆಚ್ಚಿನ ಭಾಗದಲ್ಲಿ ಆಯುಷ್ ವೈದ್ಯ ರುಗಳು ಕಾರ್ಯನಿರ್ವಹಿಸುತ್ತಿರುವುದ ರಿಂದ ಸರ್ಕಾರಿ ಆಸ್ಪತ್ರೆಗಳಲ್ಲೂ ಆಯುಷ್ ಔಷಧಿ ವಿತರಣೆ ಮಾಡಿದರೆ ಉತ್ತಮ ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ.ಯತಿರಾಜ್ ಅಭಿಪ್ರಾಯಪಟ್ಟರು. ಸಮೀಪದ ಪಾಲಿಬೆಟ್ಟ ಸಮುದಾಯ ಭವನದಲ್ಲಿ ಮೈಸೂರು ಸರ್ಕಾರಿ ಅಯು ರ್ವೇದ ಕಾಲೇಜು, ಆಸ್ಪತ್ರೆ ಹಾಗೂ ಪಾಲಿ ಬೆಟ್ಟ ಗ್ರಾಪಂ ಸಂಯುಕ್ತ ಆಶ್ರಯದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಔಷಧಿ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಆಯುಷ್ ವೈದ್ಯರು…

ಕೊಡಗು ನೆರೆ ನಿರಾಶ್ರಿತರಿಗೆ ಮಳೆಗಾಲ ಆರಂಭಕ್ಕೂ ಮುನ್ನ ಮನೆಗಳ ಹಸ್ತಾಂತರ ಜಿಲ್ಲಾಧಿಕಾರಿಗಳ ಭರವಸೆ
ಕೊಡಗು

ಕೊಡಗು ನೆರೆ ನಿರಾಶ್ರಿತರಿಗೆ ಮಳೆಗಾಲ ಆರಂಭಕ್ಕೂ ಮುನ್ನ ಮನೆಗಳ ಹಸ್ತಾಂತರ ಜಿಲ್ಲಾಧಿಕಾರಿಗಳ ಭರವಸೆ

March 3, 2019

ಮಡಿಕೇರಿ: ಪ್ರಕೃತಿ ವಿಕೋಪ ಸಂತ್ರಸ್ತರಿಗೆ ಮಳೆಗಾಲ ಆರಂಭಕ್ಕೆ ಮೊದಲು ಮನೆ ಗಳನ್ನು ಹಸ್ತಾಂತರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಭರವಸೆ ನೀಡಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಮನೆ ಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ಮದೆ ಮತ್ತು ಕರ್ಣಂಗೇರಿಯಲ್ಲಿ 55 ಮನೆಗಳ ಕಾಮಗಾರಿ ಮೇಲ್ಛಾವಣಿ ಹಂತ ತಲುಪಿದೆ. ಪ್ರಥಮ ಹಂತದಲ್ಲಿ 840 ನಿರಾಶ್ರಿತ ರನ್ನು ಗುರುತಿಸಲಾಗಿತ್ತು, ಬಳಿಕ ಕೆಲವರ ಹೆಸರು ಕೈಬಿಟ್ಟಿದೆ ಎಂಬ ದೂರುಗಳು ಕೇಳಿ ಬಂದ…

ವ್ಯಕ್ತಿ ಆತ್ಮಹತ್ಯೆ
ಕೊಡಗು

ವ್ಯಕ್ತಿ ಆತ್ಮಹತ್ಯೆ

March 3, 2019

ಕುಶಾಲನಗರ: ವ್ಯಕ್ತಿಯೊ ಬ್ಬರು ತಮ್ಮ ಮನೆಯಲ್ಲೇ ಗುಂಡು ಹೊಡೆ ದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುಶಾಲನಗರದಲ್ಲಿ ನಡೆದಿದೆ. ಪಟ್ಟಣದ ಬಸವೇಶ್ವರ ಬಡಾವಣೆಯ 3ನೇ ಬ್ಲಾಕ್ ನಿವಾಸಿ ಸಹಕಾರಿ ಇಲಾಖೆಯ ಲೆಕ್ಕ ಪರಿಶೋಧಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿ.ಎಂ.ಯೋಗೇಶ್ (57) ಆತ್ಮಹತ್ಯೆ ಮಾಡಿಕೊಂಡವರು. ಕಳೆದ ಎರಡು ವರ್ಷಗಳಿಂದ ಅನಾ ರೋಗ್ಯ ಪೀಡಿತರಾಗಿ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯೋಗೇಶ್ ಅವರು ಶುಕ್ರ ವಾರ ಸಂಜೆ ಆತ್ಮಹತ್ಯೆಗೆ ಶರಣಾಗಿ ದ್ದಾರೆ. ಇದಕ್ಕೂ ಮುನ್ನ ತನ್ನ ಸಾವಿಗೆ ತಾನೇ ಕಾರಣ ಎಂದು ಪತ್ರದಲ್ಲಿ ಬರೆದಿದ್ದು,…

ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಇಂದು ‘ಮಿಂಚಿನ ನೋಂದಣಿ’ ವಿಶೇಷ ಅಭಿಯಾನ
ಕೊಡಗು

ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಇಂದು ‘ಮಿಂಚಿನ ನೋಂದಣಿ’ ವಿಶೇಷ ಅಭಿಯಾನ

March 3, 2019

ಮಡಿಕೇರಿ: ಜಿಲ್ಲೆಯ ಬೂತ್ ಮಟ್ಟದ ಮತಗಟ್ಟೆಗಳಲ್ಲಿ ಎರಡನೇ ಹಂತದಲ್ಲಿ ನಾಳೆ ಮತದಾರರ ವಿಶೇಷ ನೋಂದಣಿ ಅಭಿಯಾನ ನಡೆಯಲಿದ್ದು, ಅರ್ಹರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳುವಂತೆ ಜಿಪಂ ಸಿಇಒ ಕೆ.ಲಕ್ಷ್ಮಿಪ್ರಿಯಾ ಕೋರಿದ್ದಾರೆ. ಜಿಲ್ಲೆಯಲ್ಲಿ 18 ರಿಂದ 19 ವರ್ಷದೊಳಗಿನ ಯುವ ಮತದಾರರ ಸಂಖ್ಯೆ ಕಡಿಮೆ ಇದ್ದು, ಅವರು ಹೆಚ್ಚಿನ ಸಂಖ್ಯೆಯಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡುವಂತಾಗಬೇಕು. ಇವಿಎಂ ಮತ್ತು ವಿವಿಪ್ಯಾಟ್ ಮತಯಂತ್ರಗಳಿಗೆ ಸಂಬಂಧಿಸಿದಂತೆ ಜಿಲ್ಲೆಯ ಎಲ್ಲಾ ಮತಗಟ್ಟೆ ಕೇಂದ್ರಗಳಲ್ಲಿ ಮಾಹಿತಿ ನೀಡಲಾಗುತ್ತಿದೆ ಎಂದು ತಿಳಿಸಿದರು. ಜನವರಿ 1,…

ಮಾ.6, ಪುರಾತತ್ಪ ಆಧಾರ ಕುರಿತ ವಿಚಾರಗೋಷ್ಠಿ
ಕೊಡಗು

ಮಾ.6, ಪುರಾತತ್ಪ ಆಧಾರ ಕುರಿತ ವಿಚಾರಗೋಷ್ಠಿ

March 3, 2019

ವಿರಾಜಪೇಟೆ: ವಿರಾಜಪೇಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ವತಿಯಿಂದ ಮಾ.6 ರಂದು ವಿಶ್ವವಿದ್ಯಾನಿಲಯ ಮಟ್ಟದ ಕೊಡಗಿನ ಇತಿಹಾಸ ಅಧ್ಯಯನದಲ್ಲಿ ಪುರಾತತ್ಪ ಆಧಾರಗಳ ಮಹತ್ವ ವಿಷಯದ ಬಗ್ಗೆ ಒಂದು ದಿನದ ವಿಚಾರ ಗೋಷ್ಠಿಯನ್ನು ಆಯೋಜಿಸಲಾಗಿದೆ. ಗೋಷ್ಠಿ ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ.ಸುಮನ್ ಡಿ.ಪೆನ್ನೆಕರ್ ನೆರವೇರಿಸಲಿದ್ದು, ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಮಂಗಳೂರು ವಿಶ್ವವಿದ್ಯಾ ನಿಲಯ ಕಾಲೇಜಿನ ಪ್ರೊ. ಡಾ.ಗಣಪತಿ ಗೌಡ ಆಗಮಿಸಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಟಿ.ಕೆ.ಬೋಪಯ್ಯ ವಹಿಸಲಿದ್ದಾರೆ. ನಂತರ ನಡೆಯುವ ಕಾರ್ಯಕ್ರಮದಲ್ಲಿ…

1 26 27 28 29 30 84
Translate »