ವ್ಯಕ್ತಿ ಆತ್ಮಹತ್ಯೆ
ಕೊಡಗು

ವ್ಯಕ್ತಿ ಆತ್ಮಹತ್ಯೆ

March 3, 2019

ಕುಶಾಲನಗರ: ವ್ಯಕ್ತಿಯೊ ಬ್ಬರು ತಮ್ಮ ಮನೆಯಲ್ಲೇ ಗುಂಡು ಹೊಡೆ ದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುಶಾಲನಗರದಲ್ಲಿ ನಡೆದಿದೆ.

ಪಟ್ಟಣದ ಬಸವೇಶ್ವರ ಬಡಾವಣೆಯ 3ನೇ ಬ್ಲಾಕ್ ನಿವಾಸಿ ಸಹಕಾರಿ ಇಲಾಖೆಯ ಲೆಕ್ಕ ಪರಿಶೋಧಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿ.ಎಂ.ಯೋಗೇಶ್ (57) ಆತ್ಮಹತ್ಯೆ ಮಾಡಿಕೊಂಡವರು.

ಕಳೆದ ಎರಡು ವರ್ಷಗಳಿಂದ ಅನಾ ರೋಗ್ಯ ಪೀಡಿತರಾಗಿ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯೋಗೇಶ್ ಅವರು ಶುಕ್ರ ವಾರ ಸಂಜೆ ಆತ್ಮಹತ್ಯೆಗೆ ಶರಣಾಗಿ ದ್ದಾರೆ. ಇದಕ್ಕೂ ಮುನ್ನ ತನ್ನ ಸಾವಿಗೆ ತಾನೇ ಕಾರಣ ಎಂದು ಪತ್ರದಲ್ಲಿ ಬರೆದಿದ್ದು, ಅನಾರೋಗ್ಯದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಬರೆದಿದ್ದಾರೆ.ಮೃತರು ಓರ್ವ ಪುತ್ರ ಹಾಗೂ ಪತ್ನಿ ಯನ್ನು ಅಗಲಿದ್ದು, ಘಟನೆಗೆ ಸಂಬಂಧಿ ಸಿದಂತೆ ಕುಶಾಲನಗರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Translate »