ಮೈಸೂರು,ಜು.28(ವೈಡಿಎಸ್)-ಹರಿಯಾಣದ ಮಹರ್ಷಿ ದಯಾನಂದ ವಿಶ್ವ ವಿದ್ಯಾನಿಲಯದಲ್ಲಿ ನಡೆದ ವಾಕೋ ಇಂಡಿಯಾ ಸೀನಿಯರ್ ನ್ಯಾಷನಲ್ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್‍ನಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದ ಮೈಸೂರಿನ 8 ಮಂದಿ ಬಾಕ್ಸರ್‍ಗಳು ಗೆಲುವು ಸಾಧಿಸಿ, 2ಚಿನ್ನ, 1ಬೆಳ್ಳಿ ಮತ್ತು 5ಕಂಚಿನ ಪದಕ ಮುಡಿಗೇರಿಸಿಕೊಂಡಿದ್ದಾರೆ. 2019ರ ಜು.18ರಿಂದ 21ರವರೆಗೆ ಹರಿ ಯಾಣದ ರೋತಕ್‍ನ ಮಹರ್ಷಿ ದಯಾನಂದ ವಿವಿಯ ಕ್ರೀಡಾ ಸಂಕೀರ್ಣ ದಲ್ಲಿ ನಡೆದ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್‍ನಲ್ಲಿ ಭಾಗವಹಿಸಿದ್ದ 11 ಮಂದಿಯಲ್ಲಿ 8 ಮಂದಿ ವಿವಿಧ ವಿಭಾಗದಲ್ಲಿ ಗೆಲುವು ಸಾಧಿಸುವ ಮೂಲಕ…
ಪುರೋಹಿತರು-ಜ್ಯೋತಿಷಿಗಳ ಕ್ರಿಕೆಟ್ ಪಂದ್ಯಾವಳಿಗೆ ಮಾಜಿ ಕ್ರಿಕೆಟ್ ತಾರೆ ಜಾವಗಲ್ ಶ್ರೀನಾಥ್ ಚಾಲನೆ
July 28, 2019ಮೈಸೂರು, ಜು.27(ಪಿಎಂ)- ಕರ್ನಾ ಟಕ ರಾಜ್ಯ ಪುರೋಹಿತರ ಹಾಗೂ ಜ್ಯೋತಿಷಿ ಗಳ ಕ್ರಿಕೆಟ್ ಅಸೋಸಿಯೇಷನ್ (ಕೆಎಎ ಸಿಎ) ವತಿಯಿಂದ ಹಮ್ಮಿಕೊಂಡಿರುವ ರಾಜ್ಯ ಮಟ್ಟದ ಪುರೋಹಿತರ ಹಾಗೂ ಜ್ಯೋತಿಷಿ ಗಳ ಕ್ರಿಕೆಟ್ ಪಂದ್ಯಾವಳಿಗೆ ಭಾರತೀಯ ಹಿರಿಯ ಕ್ರಿಕೆಟ್‍ಪಟು ಜಾವಗಲ್ ಶ್ರೀನಾಥ್ ಶನಿವಾರ ಚಾಲನೆ ನೀಡಿದರು. ಮೈಸೂರಿನ ಮಾನಂದವಾಡಿ ರಸ್ತೆಯ ರೈಲ್ವೆ ವರ್ಕ್‍ಶಾಪ್ ಮೈದಾನದಲ್ಲಿ ಆಯೋ ಜಿಸಿರುವ ಕ್ರಿಕೆಟ್ ಪಂದ್ಯಾವಳಿಗೆ ಪಾರಿ ವಾಳ ಹಾರಿ ಬಿಟ್ಟು ಬ್ಯಾಟ್ ಮಾಡುವ ಮೂಲಕ ಚಾಲನೆ ನೀಡಿದ ಜಾವಗಲ್ ಶ್ರೀನಾಥ್, ಪುರೋಹಿತರು ಹಾಗೂ ಜ್ಯೋತಿಷಿಗಳು…
ಪ್ರವೇಶ ಶುಲ್ಕದಿಂದ ಒಟ್ಟು 1.50 ಕೋಟಿ ಸಂಗ್ರಹ
July 28, 2019ಮೈಸೂರು, ಜು.27(ಆರ್‍ಕೆಬಿ)- ಈ ವರ್ಷದ ಆಷಾಢ ಶುಕ್ರವಾರಗಳು ಹಾಗೂ ಚಾಮುಂಡೇಶ್ವರಿ ವರ್ಧಂತಿ ಮಹೋ ತ್ಸವ ಸಂದರ್ಭದಲ್ಲಿ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನದ ಪ್ರವೇಶ ಶುಲ್ಕದಿಂದ ಒಟ್ಟು 1.50 ಕೋಟಿ ರೂ. ಆದಾಯ ಸಂಗ್ರಹವಾಗಿದೆ. 4 ಆಷಾಢ ಶುಕ್ರವಾರಗಳು ಹಾಗೂ ವರ್ಧಂತಿ ಮಹೋ ತ್ಸವ ಸೇರಿ ಒಟ್ಟು ರೂ.1,50,15,870-00 ಸಂಗ್ರಹವಾಗಿದೆ. ಇದು ಕಳೆದ ವರ್ಷದ ಆಷಾಢ ಮಾಸದ ಆದಾಯಕ್ಕೆ ಹೋಲಿ ಸಿದರೆ 48,98,670-00 ರೂ.ಗಳಷ್ಟು ಹೆಚ್ಚಳ ವಾಗಿದೆ. ಕಳೆದ ವರ್ಷ 2018ರಲ್ಲಿ ರೂ. 1,02,17,200-00 ಸಂಗ್ರಹವಾಗಿತ್ತು. 2017 ರಲ್ಲಿ 1,03,83,030-00…
ಮೆಮು ರೈಲು ಸಂಚಾರ ವಿಸ್ತರಣೆ: ಸಂಸದ ಪ್ರತಾಪ್‍ಸಿಂಹ ಚಾಲನೆ
July 28, 2019ಮೈಸೂರು,ಜು.27(ಆರ್‍ಕೆ)-ವಾರಕ್ಕೆ ನಾಲ್ಕು ದಿನದ ಬದಲಾಗಿ 6 ದಿನಗಳಿಗೆ ಸಂಚರಿಸಲು ವಿಸ್ತರಣೆಗೊಂಡಿರುವ ಮೈಸೂರು-ಬೆಂಗಳೂರು ಮೆಮು ರೈಲು ಸಂಚಾರಕ್ಕೆ ಸಂಸದ ಪ್ರತಾಪ್‍ಸಿಂಹ ಅವರು ಇಂದು ಮೈಸೂರಿನ ರೈಲು ನಿಲ್ದಾಣ ದಲ್ಲಿ ಹಸಿರು ನಿಶಾನೆ ತೋರಿದರು. ಅತ್ಯಾಧುನಿಕ ಆಸನಗಳು, ಪ್ರಯಾಣಿಕ ಸ್ನೇಹಿ ಸೌಲಭ್ಯಗಳುಳ್ಳ 8 ಬೋಗಿಗಳ ಮೆಮು ರೈಲು ಸಂಚಾರವು ಜುಲೈ 29ರ ನಂತರ (ಸೋಮವಾರದಿಂದ ಶನಿವಾರ ದವರೆಗೆ) ಪ್ರತೀ ದಿನ ಮೈಸೂರು-ಬೆಂಗ ಳೂರು ನಡುವೆ ಸಂಚರಿಸಲಿದೆ. ಮೈಸೂರು ರೈಲು ನಿಲ್ದಾಣದಲ್ಲಿ ಶನಿ ವಾರ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು…
ಲಿಂಗಾಯತ ಧರ್ಮ ಸ್ವತಂತ್ರ ಧರ್ಮ: ಮಾಜಿ ಸಿಎಂ ಸಿದ್ದರಾಮಯ್ಯ
July 28, 2019ಬೆಂಗಳೂರು,ಜು.27- ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರದಲ್ಲಿ ತಮ್ಮನ್ನು ಖಳನಾಯಕನನ್ನಾಗಿ ಮಾಡ ಲಾಯಿತು ಎಂದು ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು. ಬೆಂಗಳೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಲಿಂಗಾಯತ ಧರ್ಮವು ಜೈನ, ಬೌದ್ಧ ಧರ್ಮ ಗಳಂತೆಯೇ ಸ್ವತಂತ್ರವಾದದ್ದು. ಇದು ತಮ್ಮ ವೈಯ ಕ್ತಿಕ ಅಭಿಪ್ರಾಯ ಎಂದರು. ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ಹೋರಾಟ ಆರಂಭವಾದಾಗ ಅವರೇ ಧರ್ಮದ ಮಾನ್ಯತೆಗಾಗಿ ಆಗ್ರಹಿಸಿದ್ದರು. ಈ ವಿಚಾರ ವಾಗಿ ತಮ್ಮದೇನೂ ತಪ್ಪಿಲ್ಲ. ಆದರೆ, ತಮ್ಮನ್ನೇ ಖಳನಾಯಕನನ್ನಾಗಿ ಮಾಡಲಾಯಿತು ಎಂದರು. ‘ಲಿಂಗಾಯತ ಸ್ವತಂತ್ರ ಧರ್ಮಕ್ಕೆ…
ಮಾಜಿ ಸಚಿವ ಹೆಚ್.ಡಿ. ರೇವಣ್ಣರಿಂದ ಕೆಎಂಎಫ್ ಅಧ್ಯಕ್ಷಗಾದಿಗೆ ಕಾಂಗ್ರೆಸ್ ನಿರ್ದೇಶಕರ ಹೈಜಾಕ್?
July 28, 2019ಬೆಂಗಳೂರು, ಜು. 27- ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೇ ರಲು ಮಾಜಿ ಸಚಿವ ಹೆಚ್.ಡಿ.ರೇವಣ್ಣ ನಾಲ್ವರು ಕಾಂಗ್ರೆಸ್ ನಿರ್ದೇಶಕರನ್ನು ಹೈಜಾಕ್ ಮಾಡಿ, ಹೈದರಾಬಾದ್‍ನ ರೆಸಾರ್ಟ್‍ಗೆ ಕರೆದೊಯ್ದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕೆಎಂಎಫ್‍ನಲ್ಲಿ ಕಾಂಗ್ರೆಸ್ ಬಹು ಮತ ಹೊಂದಿದೆ. ಕಾಂಗ್ರೆಸ್‍ನ ಒಂಭತ್ತು ನಿರ್ದೇಶಕರಿದ್ದರೆ, ಜೆಡಿಎಸ್‍ನ ಕೇವಲ ಮೂವರು ನಿರ್ದೇಶಕರು ಮಾತ್ರ ಇದ್ದಾರೆ. ಸಹಜವಾಗಿಯೇ ಬಹುಮತ ಹೊಂದಿರುವ ಕಾಂಗ್ರೆಸ್‍ನಿಂದ ಕೆಎಂಎಫ್ ಅಧ್ಯಕ್ಷಗಾದಿ ಹಿಡಿಯಲು ಶಾಸಕ ಭೀಮಾ ನಾಯ್ಕ್ ಲಾಬಿ ನಡೆಸುತ್ತಿದ್ದರು. ಕಾಂಗ್ರೆಸ್ ಮುಖಂಡರು ಕೂಡ ಭೀಮಾನಾಯ್ಕ್ ಅವರಿಗೆ ಬೆಂಬಲ ಸೂಚಿಸಿದ್ದರು ಎನ್ನಲಾಗಿದೆ….
ವಿದ್ಯುತ್ ಚಾಲಿತ ವಾಹನಗಳ ಮೇಲಿನ ತೆರಿಗೆ ದರ ಶೇ.5ಕ್ಕೆ ಇಳಿಸಿದ ಜಿಎಸ್‍ಟಿ ಮಂಡಳಿ
July 28, 2019ನವದೆಹಲಿ: ವಿದ್ಯುತ್ ಚಾಲಿತ ವಾಹನಗಳ ಮೇಲಿನ ತೆರಿಗೆ ದರವನ್ನು ಶೇ.12ರಿಂದ ಶೇ.5ಕ್ಕೆ ತಗ್ಗಿಸಲು ಸರಕು ಮತ್ತು ಸೇವಾ ತೆರಿಗೆ ಮಂಡಳಿ ನಿರ್ಧರಿಸಿದೆ. ನೂತನ ತೆರಿಗೆ ದರ ಆ.1ರಿಂದ ಜಾರಿಗೆ ಬರಲಿದೆ. ವಿದ್ಯುತ್ ಚಾಲಿತ ಚಾರ್ಜರ್‍ಗಳ ಮೇಲಿನ ಜಿಎಸ್ಟಿ ದರವನ್ನು ಶೇ.18ರಿಂದ ಶೇ.5ಕ್ಕೆ ತಗ್ಗಿಸಲು ಮಂಡಳಿ ನಿರ್ಧರಿಸಿದೆ. ದೆಹಲಿಯಲ್ಲಿ ನಡೆದ ಜಿಎಸ್ಟಿ ಮಂಡಳಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ವಿಡಿಯೊ ಕಾನ್ಫರೆನ್ಸ್ ನಡೆಯಿತು. ಸ್ಥಳೀಯ ಅಧಿಕಾರಿಗಳಿಂದ ಎಲೆಕ್ಟ್ರಿಕ್ ಬಸ್ಸುಗಳನ್ನು ಖರೀದಿಸುವವರಿಗೆ ಜಿಎಸ್‍ಟಿ…
ರೈಲು ರಸ್ತೆ ಹೆರಿಟೇಜ್ ಗ್ಯಾಲರಿ ಉದ್ಘಾಟನೆ
July 28, 2019ಮೈಸೂರು,ಜು.27(ಆರ್‍ಕೆ)-ರೈಲ್ವೇ ಸಂಚಾರದ ಇತಿಹಾಸ, ಹಿನ್ನೆಲೆಯನ್ನು ಚಿತ್ರಿಸುವ ರೈಲು ರಸ್ತೆ ಹೆರಿಟೇಜ್ ಗ್ಯಾಲರಿಯನ್ನು ಮೈಸೂರಿನ ರೈಲು ನಿಲ್ದಾಣದ 1ನೇ ಪ್ಲಾಟ್‍ಫಾರಂನಲ್ಲಿ ಸಂಸದ ಪ್ರತಾಪ್‍ಸಿಂಹ ಅವರು ಇಂದು ಟೇಪು ಕತ್ತರಿಸುವ ಮೂಲಕ ಉದ್ಘಾಟಿಸಿದರು. ಮೈಸೂರು ಪ್ರಾಂತದ ರೈಲ್ವೇ ನಿಲ್ದಾಣ ಗಳು ನಡೆದು ಬಂದ ದಾರಿ, ಬೆಳ ವಣಿಗೆ, ಬದಲಾವಣೆಯನ್ನು ಕಣ್ಣಿಗೆ ಕಟ್ಟು ವಂತಹ ಗ್ಯಾಲರಿಯಲ್ಲಿ ಅಪರೂಪದ ಹಳೇ ಫೋಟೋಗಳು, 1822 ರಿಂದ 1950ರವರೆಗಿನ ರೈಲು ನಿಲ್ದಾಣದ ಘಟ ನಾವಳಿ ದೃಶ್ಯಗಳು, ಮಹಾತ್ಮಗಾಂಧಿ, ಮಾಜಿ ರಾಷ್ಟ್ರಪತಿ ಡಾ.ಎಸ್.ರಾಧಾ ಕೃಷ್ಣನ್, ಭಾರತದ ಪ್ರಥಮ…
ಜು.30 ರಿಂದ ತಿಂಗಳ ಕಾಲ ಶಿಕ್ಷಕರ ವರ್ಗಾವರ್ಗಿ
July 28, 2019ಮೈಸೂರು: ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವೃಂದವರ ಘಟಕ ದೊಳಗೆ ಮತ್ತು ಹೊರಗಿನ ವರ್ಗಾವಣೆ ಕೌನ್ಸಿಲಿಂಗ್ ಜು.30 ರಿಂದ ಆ.31ರವರೆಗೂ ನಡೆಯಲಿದೆ. ಪ್ರಾಥಮಿಕ ಶಾಲಾ ಶಿಕ್ಷಕರ ಘಟಕದೊಳಗಿನ ಕೋರಿಕೆ ವರ್ಗಾವಣೆ ಕೌನ್ಸಿಲಿಂಗ್ ಜು.30 ರಿಂದ ಆರಂಭವಾಗಿ ಆ.5 ರೊಳಗೆ ಮುಗಿಯಲಿದೆ. ಆ.5 ರಿಂದ ಆ.7ರವರೆಗೆ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರು, ಹಿರಿಯ ಮುಖ್ಯ ಶಿಕ್ಷಕರು, ವಿಶೇಷ ಶಿಕ್ಷಕರ ವೃಂದವರ ಘಟಕದೊಳಗಿನ ಕೋರಿಕೆ ವರ್ಗಾವಣೆ ಗಳ ಕೌನ್ಸಿಲಿಂಗ್ ನಡೆಯಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ(ಆಡಳಿತ) ಡಾ. ಪಾಂಡುರಂಗ…
ಗುಣಮಟ್ಟದಲ್ಲಿ ತೀರಾ ಕೆಳಮಟ್ಟದಲ್ಲಿರುವ ದೇಶದ ಉನ್ನತ ಶಿಕ್ಷಣ ಸಂಸ್ಥೆಗಳು
July 28, 2019ಮೈಸೂರು,ಜು.27(ಆರ್‍ಕೆಬಿ)- ಕೋಟ್ಯಾಂತರ ರೂಪಾಯಿ ಧನಸಹಾ ಯದ ಹೊರತಾಗಿಯೂ, ವಿದೇಶದಲ್ಲಿ ರುವ ತಮ್ಮ ಕಿರಿಯ ಸಹವರ್ತಿಗ ಳೊಂದಿಗೆ ಹೋಲಿಸಿದರೆ ದೇಶದಲ್ಲಿನ ಶ್ರೇಷ್ಠ ಸಂಸ್ಥೆಗಳು ಸೇರಿದಂತೆ ಬಹುತೇಕ ಸಂಸ್ಥೆಗಳು ಗುಣಮಟ್ಟದಲ್ಲಿ ತೀರಾ ಕೆಳ ಮಟ್ಟದಲ್ಲಿವೆ ಎಂದು ಚೆನ್ನೈ ಅಣ್ಣಾ ವಿಶ್ವ ವಿದ್ಯಾನಿಲಯದ ಕುಲಪತಿ ಪ್ರೊ.ಎಂ.ಕೆ. ಸೂರಪ್ಪ ಇಂದಿಲ್ಲಿ ಅಭಿಪ್ರಾಯಪಟ್ಟರು. ಮೈಸೂರು ವಿಶ್ವ ವಿದ್ಯಾನಿಲಯದ ಕ್ರಾಫರ್ಡ್ ಭವನದಲ್ಲಿ ಮೈಸೂರು ವಿವಿ ಸಂಸ್ಥಾಪನಾ ದಿನಾಚರಣೆಯಲ್ಲಿ `ಭಾರತ ದಲ್ಲಿ ಉನ್ನತ ಶಿಕ್ಷಣ ಮತ್ತು ಸಂಶೋಧನೆ: ಮಿಥ್ಯ ಮತ್ತು ವಾಸ್ತವ’ ಕುರಿತು ಉಪ ನ್ಯಾಸ ನೀಡಿದರು….










