ರೈಲು ರಸ್ತೆ ಹೆರಿಟೇಜ್ ಗ್ಯಾಲರಿ ಉದ್ಘಾಟನೆ
ಮೈಸೂರು

ರೈಲು ರಸ್ತೆ ಹೆರಿಟೇಜ್ ಗ್ಯಾಲರಿ ಉದ್ಘಾಟನೆ

July 28, 2019

ಮೈಸೂರು,ಜು.27(ಆರ್‍ಕೆ)-ರೈಲ್ವೇ ಸಂಚಾರದ ಇತಿಹಾಸ, ಹಿನ್ನೆಲೆಯನ್ನು ಚಿತ್ರಿಸುವ ರೈಲು ರಸ್ತೆ ಹೆರಿಟೇಜ್ ಗ್ಯಾಲರಿಯನ್ನು ಮೈಸೂರಿನ ರೈಲು ನಿಲ್ದಾಣದ 1ನೇ ಪ್ಲಾಟ್‍ಫಾರಂನಲ್ಲಿ ಸಂಸದ ಪ್ರತಾಪ್‍ಸಿಂಹ ಅವರು ಇಂದು ಟೇಪು ಕತ್ತರಿಸುವ ಮೂಲಕ ಉದ್ಘಾಟಿಸಿದರು.

ಮೈಸೂರು ಪ್ರಾಂತದ ರೈಲ್ವೇ ನಿಲ್ದಾಣ ಗಳು ನಡೆದು ಬಂದ ದಾರಿ, ಬೆಳ ವಣಿಗೆ, ಬದಲಾವಣೆಯನ್ನು ಕಣ್ಣಿಗೆ ಕಟ್ಟು ವಂತಹ ಗ್ಯಾಲರಿಯಲ್ಲಿ ಅಪರೂಪದ ಹಳೇ ಫೋಟೋಗಳು, 1822 ರಿಂದ 1950ರವರೆಗಿನ ರೈಲು ನಿಲ್ದಾಣದ ಘಟ ನಾವಳಿ ದೃಶ್ಯಗಳು, ಮಹಾತ್ಮಗಾಂಧಿ, ಮಾಜಿ ರಾಷ್ಟ್ರಪತಿ ಡಾ.ಎಸ್.ರಾಧಾ ಕೃಷ್ಣನ್, ಭಾರತದ ಪ್ರಥಮ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು ಮತ್ತು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯಾತಿಗಣ್ಯರು ಮೈಸೂರು ರೈಲು ನಿಲ್ದಾಣಕ್ಕೆ ಭೇಟಿ ನೀಡಿದ್ದ ಕ್ಷಣಗಳ ದೃಶ್ಯಾವಳಿಗಳ ಫೋಟೋಗಳನ್ನು ಗ್ಯಾಲರಿಯಲ್ಲಿ ಪ್ರದರ್ಶಿಸಲಾಗಿದೆ.

ರೈಲು ಪ್ರಯಾಣಿಕರು ಉಚಿತವಾಗಿ ರೈಲು ನಿಲ್ದಾಣದ ಗ್ಯಾಲರಿಯನ್ನು ವೀಕ್ಷಿಸಿ ನಿಲ್ದಾಣದ ಇತಿಹಾಸ, ಹಿನ್ನೆಲೆಯನ್ನು ನೋಡಿ, ಅಲ್ಲಿನ ಮಾಹಿತಿಯನ್ನು ಓದಿ ತಿಳಿದುಕೊಳ್ಳಬಹುದಾಗಿದೆ. ಬಾಲಿವುಡ್ ನಟರಾದ ದೇವಾನಂದ, ಅಮಿತಾಬ್ ಬಚನ್, ಶಾರುಖ್‍ಖಾನ್ ಅವರು ನಟಿಸಿರುವ ಚಿತ್ರಗಳಲ್ಲಿ ಬಳಸಿಕೊಂಡಿ ರುವ ರೈಲುಗಳ ದೃಶ್ಯಾವಳಿಯನ್ನು ಗ್ಯಾಲರಿಯಲ್ಲಿ ಇರಿಸಲಾಗಿದೆ.

ರೈಲು ಬೋಗಿಗಳು, ಇಂಜಿನ್, ರೈಲ್ವೇ ಟ್ರ್ಯಾಕ್, ಮೈಸೂರಿನ ಪ್ರವಾಸಿ ತಾಣ ಗಳಿಂದ ಚಾಮುಂಡಿ ಬೆಟ್ಟ, ಕ್ಲಾಕ್ ಟವರ್, ಮಹಾರಾಜರ ಅರಮನೆಗಳ ಚಿತ್ರಗಳು, ರೈಲು ಮಾರ್ಗ ಸುರಂಗ ಮಾರ್ಗಗಳ ಮಾದರಿಯನ್ನು ಪ್ರದರ್ಶಿಸಲಾಗಿದೆ.

ಭಾರತೀಯ ರೈಲ್ವೇ ಸಂಪದ್ಭರಿತ ಪಾರಂಪರಿಕತೆಯ ಶೋಕೇಸ್, ಅಪರೂಪದ ರೈಲು ವಿಡಿಯೋ ಮತ್ತು ಡಾಕ್ಯುಮೆಂಟರಿ, ವಿಂಟೇಜ್ ಫೋಟೋ ಗ್ರಾಫ್‍ಗಳು ಸೇರಿದಂತೆ ರೈಲ್ವೇ ಇಲಾ ಖೆಯ ಸಂಪೂರ್ಣ ಮಾಹಿತಿಯನ್ನು ರೈಲು ಬಳಕೆದಾರರಿಗಾಗಿ ರೈಲ್ ರೋಡ್ ಹೆರಿಟೇಜ್ ಗ್ಯಾಲರಿಯಲ್ಲಿ ಪೂರೈಸಲಾಗಿದೆ.

ಮೇಯರ್ ಪುಷ್ಪಲತಾ ಜಗನ್ನಾಥ್, ಶಾಸಕ ಎಲ್.ನಾಗೇಂದ್ರ, ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ, ಡಿಆರ್‍ಎಂ ಅಪರ್ಣ ಗರ್ಗ್, ಜನರಲ್ ಮ್ಯಾನೇಜರ್ ಅಜಯ್‍ಕುಮಾರ್‍ಸಿಂಗ್, ಗಿರಿಧರ್ ಸೇರಿ ದಂತೆ ಹಲವರು ಇಂದು ಗ್ಯಾಲರಿಯನ್ನು ವೀಕ್ಷಿಸಿ, ಮಾಹಿತಿ ಪಡೆದುಕೊಂಡರು.

Translate »