ಜು.30 ರಿಂದ ತಿಂಗಳ ಕಾಲ ಶಿಕ್ಷಕರ ವರ್ಗಾವರ್ಗಿ
ಮೈಸೂರು

ಜು.30 ರಿಂದ ತಿಂಗಳ ಕಾಲ ಶಿಕ್ಷಕರ ವರ್ಗಾವರ್ಗಿ

July 28, 2019

ಮೈಸೂರು: ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವೃಂದವರ ಘಟಕ ದೊಳಗೆ ಮತ್ತು ಹೊರಗಿನ ವರ್ಗಾವಣೆ ಕೌನ್ಸಿಲಿಂಗ್ ಜು.30 ರಿಂದ ಆ.31ರವರೆಗೂ ನಡೆಯಲಿದೆ.

ಪ್ರಾಥಮಿಕ ಶಾಲಾ ಶಿಕ್ಷಕರ ಘಟಕದೊಳಗಿನ ಕೋರಿಕೆ ವರ್ಗಾವಣೆ ಕೌನ್ಸಿಲಿಂಗ್ ಜು.30 ರಿಂದ ಆರಂಭವಾಗಿ ಆ.5 ರೊಳಗೆ ಮುಗಿಯಲಿದೆ. ಆ.5 ರಿಂದ ಆ.7ರವರೆಗೆ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರು, ಹಿರಿಯ ಮುಖ್ಯ ಶಿಕ್ಷಕರು, ವಿಶೇಷ ಶಿಕ್ಷಕರ ವೃಂದವರ ಘಟಕದೊಳಗಿನ ಕೋರಿಕೆ ವರ್ಗಾವಣೆ ಗಳ ಕೌನ್ಸಿಲಿಂಗ್ ನಡೆಯಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ(ಆಡಳಿತ) ಡಾ. ಪಾಂಡುರಂಗ `ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ.

ಕಡ್ಡಾಯ ವರ್ಗಾವಣೆ(ನಿಯಮ 21(4)ರಂತೆ) ಯಲ್ಲಿ ವಿಶೇಷ ವರ್ಗೀಕರಣದ ಹುದ್ದೆಗಳಲ್ಲಿ 3 ಮತ್ತು 5 ವರ್ಷ ಅವಧಿ ಪೂರೈಸಿರುವ ಹಾಗೂ `ಎ’ ವಲಯದಲ್ಲಿ ನಿರಂತರ 10 ವರ್ಷ ಸೇವೆ ಸಲ್ಲಿರುವ ಶಿಕ್ಷಕರನ್ನು `ಸಿ’ ವಲಯ ಹುದ್ದೆಗೆ (ಶೇ.20 ಕ್ಕಿಂತ ಹೆಚ್ಚು ಖಾಲಿ ಇರುವ ಹುದ್ದೆ ಖಾಲಿ ಇರುವ ತಾಲೂಕಿಗೆ) ವರ್ಗಾವಣೆ ಮತ್ತು ಆ.8 ಮತ್ತು ಆ.9 ರಂದು ಕಡ್ಡಾಯ ವರ್ಗಾವಣೆ(ಸೆಕ್ಷನ್ 3ಎ(1)(2) ರಂತೆ) ಪ್ರಕ್ರಿಯೆ ಮುಂದುವರೆಯಲಿದೆ.

ಆ.13 ರಂದು ಘಟಕದೊಳಗಿನ ಪರಸ್ಪರ ವರ್ಗಾ ವಣೆ, ಆ.14ರಿಂದ ಆ.24 ರವರೆಗೆ ಘಟಕದ ಹೊರಗಿನ ಕೋರಿಕೆ ವರ್ಗಾವಣೆ, ಆ.26ರಿಂದ ಆ.28 ರವರೆಗೆ ವಿಶೇಷ ಶಿಕ್ಷಕರ ಘಟಕದ ಹೊರಗಿನ ಕೋರಿಕೆ ವರ್ಗಾವಣೆ, ಆ.29 ರಿಂದ ಆ.31 ರವರೆಗೆ ಘಟಕದ ಹೊರಗಿನ ಪರಸ್ಪರ ವರ್ಗಾವಣೆ (1ನೇ ಹಂತದಲ್ಲಿ ವಿಭಾಗದೊಳಗೆ, 2ನೇ ಹಂತದ ದಲ್ಲಿ ವಿಭಾಗದ ಹೊರಗೆ) ಕೌನ್ಸಿಲಿಂಗ್ ವೇಳಾಪಟ್ಟಿ ನಿಗದಿಯಂತೆ ನಡೆಯಲಿದೆ.

ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ: ಪ್ರೌಢಶಾಲಾ ಶಿಕ್ಷಕ ವೃಂದವರ ಕೋರಿಕೆ ಮತ್ತು ಪರಸ್ಪರ ವರ್ಗಾ ವಣೆಗೆ ಸಂಬಂಧಿಸಿದಂತೆ ಘಟಕದ ಹೊರಗಿನ ಅಂತಿಮ ಆದ್ಯತಾ ಪಟ್ಟಿ ಆ.2 ರಂದು ಬಿಡುಗಡೆಯಾಗಲಿದ್ದು, ಆ.5 ರಿಂದ ಆ.8 ರವರೆಗೆ ಘಟಕ ದೊಳಗಿನ ಕೋರಿಕೆ ವರ್ಗಾವಣೆ ಕೌನ್ಸಿಲಿಂಗ್ ನಡೆಯಲಿದ್ದು, ಇದರ ನೇತೃತ್ವ ವನ್ನು ವಿಭಾಗೀಯ ಸಹ ನಿರ್ದೇಶಕರು ವಹಿಸಲಿದ್ದಾರೆ.

ಆ.13 ಮತ್ತು ಆ.14 ರಂದು ಪ್ರೌಢಶಾಲಾ ದೈಹಿಕ ಶಿಕ್ಷಕರು/ ವಿಶೇಷ ಶಿಕ್ಷಕರು ಹಾಗೂ ಆ.16 ರಂದು ಪ್ರೌಢಶಾಲಾ ಶಿಕ್ಷಕರ ಘಟಕದೊಳಗಿನ ಕೋರಿಕೆ ವರ್ಗಾ ವಣೆ, ಆ.19 ರಂದು ವಿಶೇಷ ವರ್ಗೀಕರಣ ಹುದ್ದೆಗಳಲ್ಲಿ 5 ವರ್ಷ ಪೂರೈಸಿರುವ ಹಾಗೂ 10 ವರ್ಷ ಸೇವೆ ಸಲ್ಲಿಸಿರುವ ಶಿಕ್ಷಕರನ್ನು `ಎ’ಯಿಂದ `ಸಿ’ಗೆ ಕಡ್ಡಾಯ ವರ್ಗಾವಣೆ ಕೌನ್ಸಿಲಿಂಗ್(ಶೇ.20ಕ್ಕಿಂತಲೂ ಹೆಚ್ಚಿನ ಹುದ್ದೆಗಳು ಖಾಲಿ ಇರುವ ಘಟಕಕ್ಕೆ ಮೊದಲ ಆದ್ಯತೆ) ನಡೆಯಲಿದ್ದು, ಆ.21 ಮತ್ತು ಆ.22 ರಂದು ಕಡ್ಡಾಯ ವರ್ಗಾವಣೆ ಪ್ರಕ್ರಿಯೆ ಮುಂದುವರೆಯಲಿದೆ.

ಆ.23 ರಿಂದ ಆ.27 ರವರೆಗೆ ಪ್ರೌಢಶಾಲಾ ಶಿಕ್ಷಕರ ಘಟಕದ ಹೊರಗಿನ ಕೋರಿಕೆ ವರ್ಗಾವಣೆ, ಆ.29 ರಂದು ಘಟಕದ ಹೊರಗಿನ ಕೋರಿಕೆ ವರ್ಗಾವಣೆ(ದೈಹಿಕ ಶಿಕ್ಷಕರು ಮತ್ತು ವಿಶೇಷ ಶಿಕ್ಷಕರು) ಹಾಗೂ ಆ.31 ರಂದು ಘಟಕದ ಹೊರಗಿನ ಪರಸ್ಪರ ವರ್ಗಾವಣೆ ಕೌನ್ಸಿಲಿಂಗ್ ನಡೆಯಲಿದೆ.

Translate »