ಬೆಂಗಳೂರು: ಬಿ.ಎಸ್.ಯಡಿಯೂರಪ್ಪ ಸರ್ಕಾರ ರಚಿ ಸಲು ಬಿಕ್ಕಟ್ಟು ಎದುರಾಗುತ್ತಿದ್ದಂತೆಯೇ ಬಿಜೆಪಿ ವರಿಷ್ಠರು ಇದೀಗ ಹಂಗಾಮಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಸಂಪರ್ಕಿಸಿ, ನಮ್ಮ ಜೊತೆ ಕೈಜೋಡಿಸಿ ಎಂದು ಮನವಿ ಮಾಡಿದ್ದಾರೆ. ಇಂದು ಬೆಳಿಗ್ಗೆ ಪಕ್ಷದ ರಾಷ್ಟ್ರೀಯ ಹಿರಿಯ ನಾಯಕರೊಬ್ಬರು ದೂರವಾಣಿ ಮೂಲಕ ಕುಮಾರಸ್ವಾಮಿ ಅವರನ್ನು ಸಂಪರ್ಕಿಸಿ, ಸದ್ಯದ ರಾಜಕೀಯ ಪರಿಸ್ಥಿತಿಯ ಬಗ್ಗೆ ಸುಮಾರು 12 ನಿಮಿಷಗಳ ಕಾಲ ಚರ್ಚೆ ನಡೆಸಿದ್ದರು. ನಿಮ್ಮ ಸರ್ಕಾರವನ್ನು ತೆಗೆಯ ಬೇಕೆಂಬ ಉದ್ದೇಶ ನಮ್ಮದಾಗಿರಲಿಲ್ಲ. ನಮಗೆ ಕಾಂಗ್ರೆಸ್ ಮುಖ್ಯ ಗುರಿಯಾಗಿತ್ತು. ಇದೀಗ ನಮ್ಮ ಗುರಿ…
ಜುಲೈ 31ರ ನಂತರ ಸರ್ಕಾರ ಸ್ತಬ್ಧ
July 26, 2019ಬೆಂಗಳೂರು, ಜು.25(ಕೆಎಂಶಿ)-ಧನ ವಿನಿಯೋಗ ಮಸೂದೆ ಇದೇ 31ರೊಳಗಾಗಿ ಅಂಗೀಕಾರಗೊಳ್ಳದೆ ಇದ್ದರೆ, ಸರ್ಕಾರ ಸ್ತಬ್ಧಗೊಳ್ಳುತ್ತದೆ ಎಂಬ ಆತಂಕವನ್ನು ವಿಧಾನಸಭಾ ಧ್ಯಕ್ಷ ರಮೇಶ್‍ಕುಮಾರ್ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧನ ವಿನಿಯೋಗ ಮಸೂದೆ ಅಂಗೀಕಾರಗೊಳ್ಳದೆ ಇದ್ದರೆ, ಸರ್ಕಾರಿ ನೌಕರರಿಗೆ ವೇತನ ನೀಡುವುದು ಸೇರಿದಂತೆ ಹಲವಾರು ಕಾರ್ಯಗಳಿಗೆ ಅಡೆತಡೆ ಉಂಟಾಗುತ್ತದೆ. ಯಾವುದೇ ಸರ್ಕಾರ ಬಂದರೂ ಸರಿ ಮೊದಲು ಅಧಿವೇಶನ ಕರೆದು ಧನವಿನಿಯೋಗ ಮಸೂದೆಯನ್ನು ಪಾಸ್ ಮಾಡಿ ಕೊಳ್ಳಬೇಕು ಎಂದು ನಾನು ಸಲಹೆ ನೀಡಿದ್ದೇನೆ. ಈ ರೀತಿಯ ಅನಿವಾರ್ಯ ಪರಿಸ್ಥಿತಿ ಬಂದೊದಗಿರುವುದು ವಿಷಾದನೀಯ…
ಕೆಆರ್‍ಎಸ್ ಅಣೆಕಟ್ಟೆಗೆ ಟೆಲಿಮೆಟ್ರಿಕ್ವಾಟರ್ ಗೇಜ್ ಅಳವಡಿಕೆ
July 26, 2019ಮೈಸೂರು, ಜು.25(ಆರ್‍ಕೆ)- ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ ಅಣೆಕಟ್ಟೆಗೆ ಟೆಲಿಮೆಟ್ರಿಕ್ ವಾಟರ್ ಗೇಜ್ ಉಪಕರಣ ಅಳವಡಿಸಲಾಗಿದೆ. ಜಲಾಶಯಗಳ ನೀರಿನ ಸಂಗ್ರಹ ಪ್ರಮಾಣ, ಒಳಹರಿವು ಮತ್ತು ಹೊರ ಹರಿವಿನ ನಿಖರ ಮಾಹಿತಿಯನ್ನು ಅಧಿಕಾರಿ ಗಳು ನವದೆಹಲಿಯಲ್ಲೇ ಕುಳಿತು ಈ ಟೆಲಿ ಮೆಟ್ರಿಕ್ ವಾಟರ್ ಗೇಜ್ ಉಪಕರಣದಿಂದ ಆನ್‍ಲೈನ್ ಮೂಲಕ ತಿಳಿಯಬಹುದಾಗಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA)ದ ಆಂತರಿಕ ಸಮಿತಿ ಸದಸ್ಯರ ನಿಯೋಗವು ಅಣೆಕಟ್ಟೆಗಳಿಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಒಂದು ವಾರದಲ್ಲಿ ಕೆಆರ್‍ಎಸ್ ಮತ್ತು ಹಾರಂಗಿ ಜಲಾಶಯ ಗಳ…
ಕ್ಷಯ ಮುಕ್ತ ಜಿಲ್ಲೆ ನಿರ್ಮಾಣ; ಆರೋಗ್ಯ ಇಲಾಖೆ ಪಣ
July 26, 2019ಮೈಸೂರು,ಜು.25- ಪರಿಷ್ಕೃತ ರಾಷ್ಟ್ರೀಯ ಕ್ಷಯ ನಿಯಂತ್ರಣ (ಆರ್‍ಎನ್‍ಟಿಸಿಪಿ) ಕಾರ್ಯಕ್ರಮದಡಿ 2035ರ ವೇಳೆಗೆ ಮೈಸೂರು ಜಿಲ್ಲೆಯನ್ನು `ಕ್ಷಯ ಮುಕ್ತ’ ಮಾಡಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮುಂದಾ ಗಿದ್ದು, 628 ತಂಡಗಳು ಮನೆ ಮನೆಗೆ ತೆರಳಿ ಮಾಹಿತಿ ಕಲೆ ಹಾಕುತ್ತಿವೆ. ಇತ್ತೀಚಿನ ದಿನಗಳಲ್ಲಿ ಮಾಹಿತಿ ಕೊರತೆ ಯಿಂದಾಗಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಲು ಜನರು ನಿರ್ಲಕ್ಷಿಸುತ್ತಿದ್ದಾರೆ. ಪರಿಣಾಮ ವರ್ಷದಿಂದ ವರ್ಷಕ್ಕೆ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿ ರುವ ಆರೋಗ್ಯ ಇಲಾಖೆ ಆರಂಭಿಕ ಹಂತ ದಲ್ಲಿಯೇ…
ಸಂತ ಫಿಲೋಮಿನಾ ಕಾಲೇಜಿಗೆ ನ್ಯಾಕ್ ಸಮಿತಿ ಸದಸ್ಯರ ಭೇಟಿ
July 26, 2019ಮೈಸೂರು,ಜೂ.25(ಎಂಟಿವೈ)- ಮೈಸೂರಿನ ಸಂತ ಫಿಲೋಮಿನಾ ಕಾಲೇಜಿಗೆ ನ್ಯಾಕ್ ಸಮಿತಿ ಸದಸ್ಯರು ಭೇಟಿ ನೀಡಿ ಮಾಹಿತಿ ಕಲೆ ಹಾಕಿದರು. ಕಾಲೇಜಿಗೆ ಆಗಮಿಸಿದ ನ್ಯಾಕ್ ಸಮಿತಿಯ ಅಧ್ಯಕ್ಷೆ ಮುಂಗರ್ ವಿಶ್ವ ವಿದ್ಯಾನಿಲ ಯದ ಉಪ ಕುಲಪತಿ ಪ್ರೊ.ಕುಸುಮ ಕುಮಾರಿ, ಸಮಿತಿಯ ಸಂಯೋಜಕಿ ಡೂನ್ ವಿಶ್ವವಿದ್ಯಾನಿಲಯದ ಪ್ರೊ.ಕುಸುಮ ಅರುಣಾಚಲಂ ಮತ್ತು ಸಮಿತಿಯ ಸದಸ್ಯ ಕೇರಳಾದ ಕೋಜಿಕೊಡ್‍ನ ಫರೂಕ್ ಕಾಲೇಜಿನ ಪ್ರಾಂಶುಪಾಲ ಇ.ಪಿ.ಇಂಬಿಚ್ಚಿಕೋಯ್ ಅವರಿಗೆ ಕಾಲೇಜಿನ ಆಡಳಿತ ಮಂಡಳಿ ಆತ್ಮೀಯವಾಗಿ ಬರಮಾಡಿಕೊಂಡಿತು. ಎರಡು ದಿನಗಳ ಕಾಲ ಕಾಲೇಜಿಗೆ ಭೇಟಿ ನೀಡಿದ್ದ ನ್ಯಾಕ್ ಸಮಿತಿ…
ಸದ್ಯದಲ್ಲೇ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ
July 26, 2019ಮೈಸೂರು,ಜು.25(ವೈಡಿಎಸ್)-ಕಾನೂನು ತೊಡಕನ್ನು ನಿವಾರಿಸಿಕೊಂಡು ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚಿಸಿ, ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಶಾಸಕ ಎಲ್.ನಾಗೇಂದ್ರ ವಿಶ್ವಾಸ ವ್ಯಕ್ತಪಡಿಸಿದರು. ಚಾಮರಾಜಪುರಂನ ಬಿಜೆಪಿ ಕಚೇರಿ ಸಭಾಂಗಣದಲ್ಲಿ ಶಾಸಕ ಎಲ್.ನಾಗೇಂದ್ರ ನೇತೃತ್ವದಲ್ಲಿ ಆಯೋಜಿಸಿದ್ದ ಸದಸ್ಯತ್ವ ನೋಂದಣಿ ಅಭಿಯಾನದಲ್ಲಿ ಮಾತನಾಡಿದ ಅವರು, ಬಿಜೆಪಿ ಕಾರ್ಯಕರ್ತರು ಯಾವಾಗ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ಕಾತುರ ದಿಂದ ಕಾಯುತ್ತಿದ್ದಾರೆ. ಕೆಲವೇ ದಿನಗಳಲ್ಲಿ ಕಾನೂನು ತೊಡಕುಗಳನ್ನು ಬಗೆಹರಿಸಿ ಕೊಂಡು ಪಕ್ಷವು ಯಡಿಯೂರಪ್ಪ ಅವರ ನೇತೃತ್ವದಲ್ಲಿ ಅಧಿಕಾರ ವಹಿಸಿಕೊಳ್ಳಲಿದ್ದು, ಮುಂದಿನ 3 ವರ್ಷ 10 ತಿಂಗಳು…
ಸೆಸ್ಕ್ ಹೊರಗುತ್ತಿಗೆ ಕಾರ್ಮಿಕರ ಪ್ರತಿಭಟನೆ
July 26, 2019ಮೈಸೂರು, ಜು.25(ಪಿಎಂ)- ಗುತ್ತಿಗೆ ಕಾರ್ಮಿಕರನ್ನು ಖಾಯಂಗೊಳಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆ ಗಳ ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ವಿದ್ಯುತ್ ಕಾರ್ಮಿಕರ ಫೆಡರೇಷನ್ (ಸಿಐಟಿಯು) ಆಶ್ರಯದಲ್ಲಿ ಸೆಸ್ಕ್ ಹೊರ ಗುತ್ತಿಗೆ ಕಾರ್ಮಿಕರು ಗುರುವಾರ ಪ್ರತಿ ಭಟನೆ ನಡೆಸಿದರು. ಮೈಸೂರಿನ ವಿಜಯನಗರದ ಚಾಮುಂ ಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ (ಸೆಸ್ಕ್) ಕಾರ್ಯಾಲಯದ ಎದುರು ಜಮಾಯಿಸಿದ ಪ್ರತಿಭಟನಾಕಾ ರರು, ಎಲ್ಲಾ ಗುತ್ತಿಗೆ ಕಾರ್ಮಿಕರನ್ನು ಖಾಯಂ ಮಾಡಬೇಕು. ಸುಪ್ರಿಂ ಕೋರ್ಟ್ ತೀರ್ಪಿ ನಂತೆ ಗುತ್ತಿಗೆ ಕಾರ್ಮಿಕರಿಗೆ ಸಮಾನ ಕೆಲಸಕ್ಕೆ ಸಮಾನ…
ರೇಷ್ಮೆ ಸೀರೆಗಳ ಮಾರಾಟ ಮೇಳ
July 26, 2019ಮೈಸೂರು, ಜು.25(ಎಂಕೆ)- ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಕುವೆಂಪುನಗರದ ಜಯಮ್ಮ ಗೋವಿಂದೇಗೌಡ ಕಲ್ಯಾಣ ಮಂಟಪದಲ್ಲಿ 6 ದಿನಗಳ ಕಾಲ ಆಯೋಜಿಸಿರುವ ‘ವೀವರ್ ಆಫ್ ಸಿಲ್ಕ್ ಇಂಡಿಯಾ-2019’ ಮೇಳಕ್ಕೆ ಗುರುವಾರ ಚಾಲನೆ ನೀಡ ಲಾಯಿತು. ಸಿಲ್ಕ್ ಕಾಟನ್ ಫ್ಯಾಬ್ ವತಿ ಯಿಂದ ಜು.24ರಿಂದ 29ರವರೆಗೆ ಆಯೋಜಿಸಿರುವ ಈ ಮೇಳದಲ್ಲಿ 30 ಮಳಿಗೆಗಳನ್ನು ತೆರೆಯಲಾಗಿದ್ದು, 12 ರಾಜ್ಯಗಳ ಕುಶಲಕರ್ಮಿಗಳು ತಾವೇ ತಯಾರಿಸಿದ ಬಗೆ-ಬಗೆಯ ಸೀರೆಗಳ ಪ್ರದರ್ಶನ ಮತ್ತು ಮಾರಾಟ ಮಾಡಲಿ ದ್ದಾರೆ. ಮೇಳದಲ್ಲಿ ಕಾಶ್ಮೀರಿ ಸೀರೆಗಳು, ವಿವಿಧ ಸಿಲ್ಕ್ ಕಾಟನ್ ಸೀರೆಗಳು,…
ಹಳೇ ಸಂತೇಪೇಟೆಯಲ್ಲಿ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವಂತೆ ವರ್ತಕರ ಮನವಿ
July 26, 2019ಮೈಸೂರು, ಜು.25(ಪಿಎಂ)- ಮೈಸೂರಿನ ಹಳೇ ಸಂತೇಪೇಟೆಯಲ್ಲಿ ವಾಹನ ನಿಲುಗಡೆಗೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ಇಲ್ಲಿನ ನೂರಾರು ವರ್ತಕರು ಶಿವರಾಂಪೇಟೆಯಲ್ಲಿರುವ ಸಂಚಾರ ವಿಭಾಗದ ಎಸಿಪಿ ಕಚೇರಿಗೆ ಗುರುವಾರ ತೆರಳಿ, ಎಸಿಪಿ ಜಿ.ಎನ್. ಮೋಹನ್ ಅವರಿಗೆ ಮನವಿ ಸಲ್ಲಿಸಿದರು. ಇಂದು ಬೆಳಿಗ್ಗೆ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿ ವಹಿವಾಟು ಸ್ಥಗಿತಗೊಳಿಸಿದ ವರ್ತಕರು, ನೂರಾರು ಸಂಖ್ಯೆಯಲ್ಲಿ ಎಸಿಪಿ ಜಿ.ಎನ್.ಮೋಹನ್ ಅವರನ್ನು ಭೇಟಿ ಮಾಡಿದರು. ಹಳೇ ಸಂತೇಪೇಟೆಯಲ್ಲಿ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ಸ್ಥಳ ಪರಿಶೀಲಿಸಿ ಪಾರ್ಕಿಂಗ್ ಸೌಲಭ್ಯ ಕಲ್ಪಿಸಿ ಕೊಡಬೇಕೆಂದು ಕೋರಿದರು….
ನಾಳೆಯಿಂದ 29ರವರೆಗೆ ಪುರೋಹಿತರು-ಜ್ಯೋತಿಷಿಗಳ ಕ್ರಿಕೆಟ್ ಪಂದ್ಯಾವಳಿ
July 26, 2019ಮೈಸೂರು,ಜು.25(ಪಿಎಂ)-ಕರ್ನಾಟಕ ರಾಜ್ಯ ಪುರೋಹಿತರ ಹಾಗೂ ಜ್ಯೋತಿಷಿಗಳ ಕ್ರಿಕೆಟ್ ಅಸೋಸಿಯೇಷನ್ (ಕೆಎಎಸಿಎ) ವತಿಯಿಂದ ರಾಜ್ಯ ಮಟ್ಟದ ಪುರೋಹಿತರ ಹಾಗೂ ಜ್ಯೋತಿಷಿ ಗಳ ಕ್ರಿಕೆಟ್ ಪಂದ್ಯಾವಳಿ ಮೈಸೂರಿನಲ್ಲಿ ಜು.27ರಿಂದ 29ರವರೆಗೆ ನಡೆಯಲಿದೆ ಎಂದು ಅಸೋಸಿಯೇಷನ್ ಅಧ್ಯಕ್ಷ ಡಾ. ಮೂಗೂರು ಮಧುದೀಕ್ಷಿತ್ ಗುರೂಜಿ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರಿನ ರೈಲ್ವೆ ವರ್ಕ್‍ಶಾಪ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯಾವಳಿಗೆ ಜು.27ರಂದು ಬೆಳಿಗ್ಗೆ 10ಕ್ಕೆ ಹಿರಿಯ ಭಾರತೀಯ ಕ್ರಿಕೆಟ್ ಪಟು ಜಾವಗಲ್ ಶ್ರೀನಾಥ್ ಚಾಲನೆ ನೀಡಲಿದ್ದಾರೆ…










