ಸಂತ ಫಿಲೋಮಿನಾ ಕಾಲೇಜಿಗೆ ನ್ಯಾಕ್ ಸಮಿತಿ ಸದಸ್ಯರ ಭೇಟಿ
ಮೈಸೂರು

ಸಂತ ಫಿಲೋಮಿನಾ ಕಾಲೇಜಿಗೆ ನ್ಯಾಕ್ ಸಮಿತಿ ಸದಸ್ಯರ ಭೇಟಿ

July 26, 2019

ಮೈಸೂರು,ಜೂ.25(ಎಂಟಿವೈ)- ಮೈಸೂರಿನ ಸಂತ ಫಿಲೋಮಿನಾ ಕಾಲೇಜಿಗೆ ನ್ಯಾಕ್ ಸಮಿತಿ ಸದಸ್ಯರು ಭೇಟಿ ನೀಡಿ ಮಾಹಿತಿ ಕಲೆ ಹಾಕಿದರು. ಕಾಲೇಜಿಗೆ ಆಗಮಿಸಿದ ನ್ಯಾಕ್ ಸಮಿತಿಯ ಅಧ್ಯಕ್ಷೆ ಮುಂಗರ್ ವಿಶ್ವ ವಿದ್ಯಾನಿಲ ಯದ ಉಪ ಕುಲಪತಿ ಪ್ರೊ.ಕುಸುಮ ಕುಮಾರಿ, ಸಮಿತಿಯ ಸಂಯೋಜಕಿ ಡೂನ್ ವಿಶ್ವವಿದ್ಯಾನಿಲಯದ ಪ್ರೊ.ಕುಸುಮ ಅರುಣಾಚಲಂ ಮತ್ತು ಸಮಿತಿಯ ಸದಸ್ಯ ಕೇರಳಾದ ಕೋಜಿಕೊಡ್‍ನ ಫರೂಕ್ ಕಾಲೇಜಿನ ಪ್ರಾಂಶುಪಾಲ ಇ.ಪಿ.ಇಂಬಿಚ್ಚಿಕೋಯ್ ಅವರಿಗೆ ಕಾಲೇಜಿನ ಆಡಳಿತ ಮಂಡಳಿ ಆತ್ಮೀಯವಾಗಿ ಬರಮಾಡಿಕೊಂಡಿತು.

ಎರಡು ದಿನಗಳ ಕಾಲ ಕಾಲೇಜಿಗೆ ಭೇಟಿ ನೀಡಿದ್ದ ನ್ಯಾಕ್ ಸಮಿತಿ ಸದಸ್ಯರು ಕಾಲೇಜಿನ ಎಲ್ಲಾ ವಿಭಾಗ ಗಳಿಗೂ ಭೇಟಿ ನೀಡಿ, ವಿಭಾಗದ ಮುಖ್ಯಸ್ಥರಿಂದ ಮಾಹಿತಿ ಪಡೆದರು. ಅಲ್ಲದೆ, ಕಾಲೇಜು ಆವರಣದಲ್ಲಿರುವ ಬಟಾ ನಿಕಲ್ ಗಾರ್ಡನ್, ಮಳೆ ನೀರು ಕೊಯ್ಲು ಪದ್ಧತಿ ಯನ್ನು ವೀಕ್ಷಿಸಿದರು. ಬಳಿಕ ವಿದ್ಯಾರ್ಥಿನಿಲಯ, ಗ್ರಂಥಾ ಲಯ, ಪಿಜಿ ಸೆಂಟರ್‍ಗೆ ಭೇಟಿ ನೀಡಿ ಪರಿಶೀಲಿಸಿದರು.  ಕಾಲೇಜಿನಲ್ಲಿ ವಿದ್ಯಾರ್ಥಿಗಳ ಅಧ್ಯಯನ ಇರುವ ಪೂರಕ ಅಂಶಗಳ ಬಗ್ಗೆ ಮಾಹಿತಿ ಸಂಗ್ರಹಿಸಿದರು. ಅಲ್ಲದೆ ಕಾಲೇಜಿನ ಮುಖ್ಯಸ್ಥರು, ವಿವಿಧ ವಿಭಾಗಗಳ ಮುಖ್ಯಸ್ಥರೊಂದಿಗೆ ಚರ್ಚಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಮುಖ್ಯಸ್ಥ ರೆವರೆಂಟ್ ಡಾ. ಬರ್ನಾಡ್ ಪ್ರಕಾಶ್ ಬಾರ್ನಿಸ್, ರೆವರೆಂಟ್ ಮರಿಯಾ ಜೇóವಿ ಯರ್, ಪ್ರಾಂಶುಪಾಲ ಡಾ.ರೂತ್ ಶಾಂತಕುಮಾರಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

 

Translate »