ಸದ್ಯದಲ್ಲೇ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ
ಮೈಸೂರು

ಸದ್ಯದಲ್ಲೇ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ

July 26, 2019

ಮೈಸೂರು,ಜು.25(ವೈಡಿಎಸ್)-ಕಾನೂನು ತೊಡಕನ್ನು ನಿವಾರಿಸಿಕೊಂಡು ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚಿಸಿ, ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಶಾಸಕ ಎಲ್.ನಾಗೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.

ಚಾಮರಾಜಪುರಂನ ಬಿಜೆಪಿ ಕಚೇರಿ ಸಭಾಂಗಣದಲ್ಲಿ ಶಾಸಕ ಎಲ್.ನಾಗೇಂದ್ರ ನೇತೃತ್ವದಲ್ಲಿ ಆಯೋಜಿಸಿದ್ದ ಸದಸ್ಯತ್ವ ನೋಂದಣಿ ಅಭಿಯಾನದಲ್ಲಿ ಮಾತನಾಡಿದ ಅವರು, ಬಿಜೆಪಿ ಕಾರ್ಯಕರ್ತರು ಯಾವಾಗ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ಕಾತುರ ದಿಂದ ಕಾಯುತ್ತಿದ್ದಾರೆ. ಕೆಲವೇ ದಿನಗಳಲ್ಲಿ ಕಾನೂನು ತೊಡಕುಗಳನ್ನು ಬಗೆಹರಿಸಿ ಕೊಂಡು ಪಕ್ಷವು ಯಡಿಯೂರಪ್ಪ ಅವರ ನೇತೃತ್ವದಲ್ಲಿ ಅಧಿಕಾರ ವಹಿಸಿಕೊಳ್ಳಲಿದ್ದು, ಮುಂದಿನ 3 ವರ್ಷ 10 ತಿಂಗಳು ಒಳ್ಳೆಯ ಆಡಳಿತ ನೀಡಲಾಗುವುದು ಎಂದರು.

ಕೇಂದ್ರದಲ್ಲಿ ಬಿಜೆಪಿ 2030ರವರೆಗೂ ಅಧಿ ಕಾರ ನಡೆಸಲಿದ್ದು, ರಾಜ್ಯದಲ್ಲೂ ಯಡಿ ಯೂರಪ್ಪ ಅವರ ನೇತೃತ್ವದಲ್ಲಿ 2023ರ ಚುನಾ ವಣೆಯನ್ನು ಎದುರಿಸಿ ಬಹುಮತದೊಂ ದಿಗೆ ಗೆಲುವು ಸಾಧಿಸಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನಗರದಲ್ಲಿ ಲ್ಯಾನ್ಸ್‍ಡೌನ್ ಕಟ್ಟಡ ದುಸ್ಥಿತಿಗೆ ತಲುಪಿದ್ದು, ದೇವರಾಜ ಮಾರುಕಟ್ಟೆ ಬಿದ್ದು ಹೋಗಿದೆ. ಕೆ.ಆರ್.ಆಸ್ಪತ್ರೆ ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ. ಕುಡಿಯುವ ನೀರು, ಯುಜಿಡಿ ಹೀಗೆ ಅನೇಕ ಸಮಸ್ಯೆ ಗಳಿದ್ದು, ಬಗೆಹರಿಸಲು ಹೆಚ್ಚು ಒತ್ತು ನೀಡ ಲಾಗುವುದು. ಹಾಗೆಯೇ ಎಲ್ಲಾ ವಾರ್ಡ್‍ಗಳ ಉದ್ಯಾನವನಗಳ ಅಭಿವೃದ್ಧಿ, ರಸ್ತೆಗಳ ದುರ ಸ್ತಿಗೂ ಒತ್ತು ನೀಡುವ ಮೂಲಕ ಮೈಸೂ ರನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಹೆಚ್ಚಿನ ಅನುದಾನ ತರಲು ಶ್ರಮಿಸಲಾಗುವುದು. ಇದಕ್ಕೆ ನಿಮ್ಮೆಲ್ಲರ ಸಹಕಾರ ಅಗತ್ಯ ಎಂದರು.

ಶಾಸಕ ಮಾತ್ರವಲ್ಲ: ಚಾಮರಾಜನಗರ ಕ್ಷೇತ್ರದಿಂದ ಸದಸ್ಯತ್ವ ಮಾಡಲು 2050 ಬುಕ್‍ಗಳನ್ನು ನೀಡಿದ್ದು, ಹೊಸದಾಗಿ 50 ಸಾವಿರ ಯುವಕರು ಸೇರಿದಂತೆ ಒಟ್ಟು 1.25 ಲಕ್ಷ ಸದಸ್ಯತ್ವ ನೋಂದಣಿ ಮಾಡಿಸುವಂತೆ ರಾಷ್ಟ್ರೀಯ ಅಧ್ಯಕ್ಷರು ಸೂಚಿಸಿದ್ದಾರೆ. ಹಾಗಾಗಿ ನಾನು ಶಾಸಕ ಮಾತ್ರವಲ್ಲ. ಸದಸ್ಯತ್ವ ನೋಂದಣಿ ಅಭಿಯಾನ ವಿಭಾಗದ ಪ್ರಭಾರಿ ಯಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ನನ್ನ ವ್ಯಾಪ್ತಿಗೆ 31 ಕ್ಷೇತ್ರವಿದ್ದು, ಹೆಚ್ಚು ಸದಸ್ಯತ್ವ ಮಾಡಿಸುವ ಜವಾಬ್ದಾರಿ ನನ್ನ ಮೇಲಿದೆ. ಹಾಗಾಗಿ ಪ್ರತಿಯೊಬ್ಬರೂ ಮನೆ-ಮನೆಗೆ ತೆರಳಿ ಸದಸ್ಯತ್ವ ನೋಂದಣಿ ಮಾಡಿಸ ಬೇಕು ಎಂದು ಸಲಹೆ ನೀಡಿದರು.

ಆಸೆ ಈಡೇರಿದೆ: ಯಡಿಯೂರಪ್ಪ ಮುಖ್ಯ ಮಂತ್ರಿಯಾದಾಗ ನಾನು ಶಾಸಕನಾಗಿರ ಬೇಕೆಂಬ ಆಸೆ ಇತ್ತು. ಅದು ಕಾರ್ಯಕರ್ತರ ಶ್ರಮದಿಂದ ಈಡೇರಿದೆ. ಬಿಜೆಪಿ ಸರ್ಕಾರ ರಚನೆಯಾದ ಬಳಿಕ ನಾನು ಆಡಳಿತ ಪಕ್ಷದ ಶಾಸಕನಾಗುವ ಕಾರಣ ಜವಾಬ್ದಾರಿಗಳು ಮತ್ತಷ್ಟು ಹೆಚ್ಚಾಗಲಿವೆ. ಹಾಗಾಗಿ ನನ್ನ ಕಚೇರಿ ಯಿಂದ ಕಾರ್ಯಕರ್ತರಿಗೆ ಕರೆ ಮಾಡಿ ದಾಗ ನಾನೇ ಕರೆ ಮಾಡಿದ್ದೇನೆಂದು ತಿಳಿದು ಸ್ವೀಕರಿಸಬೇಕು ಎಂದು ಮನವಿ ಮಾಡಿದರು.

ಪಕ್ಷದ ಕಚೇರಿಯಲ್ಲೇ ಸಮಸ್ಯೆ ಆಲಿಕೆ: ಸರ್ಕಾರ ರಚನೆಯಾದ ಬಳಿಕ ವಾರದಲ್ಲಿ ಒಂದು ದಿನ ಪಕ್ಷದ ಕಚೇರಿಯಲ್ಲಿ ಇದ್ದು, ಜನರ ಸಮಸ್ಯೆಗಳನ್ನು ಆಲಿಸುತ್ತೇನೆ. ಜತೆಗೆ ಮುಂದಿನ ದಿನಗಳಲ್ಲಿ ಸಂಸದರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದು, ಈ ವೇಳೆ ಹೆಚ್ಚು ಸದಸ್ಯತ್ವ ನೋಂದಣಿ ಮಾಡಿಸಿದವ ರನ್ನು ಸನ್ಮಾನಿಸಲಾಗುವುದು ಎಂದರು.

ಸಂಘಟನಾ ಪ್ರಧಾನ ಕಾರ್ಯದರ್ಶಿ ಸುರೇಶ್‍ಬಾಬು, ಮೈಸೂರು ನಗರ ಪ್ರಧಾನ ಕಾರ್ಯದರ್ಶಿ ರಾಜೇಶ್, ಕ್ಷೇತ್ರದ ಅಧ್ಯಕ್ಷ ಶ್ರೀರಾಂ, ಪಾಲಿಕೆ ಸದಸ್ಯರಾದ ಪ್ರಮೀಳಾ, ವೇದಾವತಿ, ಮುಖಂಡರಾದ ಉಮೇಶ್, ಗಿರೀಶ್ ಪ್ರಸಾದ್, ಸೋಮಶೇಖರ್ ರಾಜ್, ಸುಬ್ಬಯ್ಯ, ದೇವರಾಜ್, ವಾಣಿ, ಕುಮಾರ್ ಪಾಪಣ್ಣ, ಜಯಪ್ರಕಾಶ್, ಗಿರೀಶ್, ರಂಗ ಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

Translate »