ಕೆಆರ್‍ಎಸ್ ಅಣೆಕಟ್ಟೆಗೆ ಟೆಲಿಮೆಟ್ರಿಕ್ವಾಟರ್ ಗೇಜ್ ಅಳವಡಿಕೆ
ಮೈಸೂರು

ಕೆಆರ್‍ಎಸ್ ಅಣೆಕಟ್ಟೆಗೆ ಟೆಲಿಮೆಟ್ರಿಕ್ವಾಟರ್ ಗೇಜ್ ಅಳವಡಿಕೆ

July 26, 2019

ಮೈಸೂರು, ಜು.25(ಆರ್‍ಕೆ)- ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ ಅಣೆಕಟ್ಟೆಗೆ ಟೆಲಿಮೆಟ್ರಿಕ್ ವಾಟರ್ ಗೇಜ್ ಉಪಕರಣ ಅಳವಡಿಸಲಾಗಿದೆ. ಜಲಾಶಯಗಳ ನೀರಿನ ಸಂಗ್ರಹ ಪ್ರಮಾಣ, ಒಳಹರಿವು ಮತ್ತು ಹೊರ ಹರಿವಿನ ನಿಖರ ಮಾಹಿತಿಯನ್ನು ಅಧಿಕಾರಿ ಗಳು ನವದೆಹಲಿಯಲ್ಲೇ ಕುಳಿತು ಈ ಟೆಲಿ ಮೆಟ್ರಿಕ್ ವಾಟರ್ ಗೇಜ್ ಉಪಕರಣದಿಂದ ಆನ್‍ಲೈನ್ ಮೂಲಕ ತಿಳಿಯಬಹುದಾಗಿದೆ.

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA)ದ ಆಂತರಿಕ ಸಮಿತಿ ಸದಸ್ಯರ ನಿಯೋಗವು ಅಣೆಕಟ್ಟೆಗಳಿಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಒಂದು ವಾರದಲ್ಲಿ ಕೆಆರ್‍ಎಸ್ ಮತ್ತು ಹಾರಂಗಿ ಜಲಾಶಯ ಗಳ ಅಣೆಕಟ್ಟೆಗೆ ನೀರಿನ ಗೇಜ್ ಉಪಕರಣ ವನ್ನು ಅಳವಡಿಸಲಾಗಿದೆ. ಕರ್ನಾಟಕ, ತಮಿಳು ನಾಡು, ಪಾಂಡಿಚೇರಿ ಹಾಗೂ ಕೇರಳ ರಾಜ್ಯ ಗಳಿಗೆ ಭೇಟಿ ನೀಡಿ ಅಲ್ಲಿನ ಜಲಾಶಯ ಗಳ ನೀರಿನ ಸಂಗ್ರಹ ಅಳತೆಗೆ ಅಳವಡಿಸಿ ರುವ ವಿಧಾನ ಕುರಿತು ಅಧ್ಯಯನ ನಡೆಸಿದ ಸಮಿತಿ ಸದಸ್ಯರು ಅಲ್ಲಿ ಮ್ಯಾನ್ಯುಯಲ್ ಗೇಜಿಂಗ್ ಸಿಸ್ಟಂ ಅನುಸರಿಸಲಾಗುತ್ತಿದೆ ಎಂಬು ದನ್ನು ತಿಳಿದು ಆನ್‍ಲೈನ್ ಮಾನಿಟರಿಂಗ್ ಸಿಸ್ಟಂ ಅನ್ನು ಜಾರಿಗೆ ತರಲು ನಿರ್ಧರಿಸಿದರು.

ಕಾವೇರಿ ಕಣಿವೆಯಲ್ಲಿನ ಎಲ್ಲಾ ಜಲಾ ಶಯಗಳ ಟೆಲಿಮೆಟ್ರಿಕ್ ಆಧಾರಿತ ರಿಯಲ್ ಟೈಂ ಡೇಟಾ ಅಕ್ಯೂಸಿಷನ್ ಅಂಡ್ ಟ್ರಾನ್ಸ್ ಮಿಷನ್ ಮೂಲಕ ನೀರಿನ ನಿಖರ ಮಾಹಿತಿ ಪಡೆಯಲು ನಿರ್ಧರಿಸಲಾಗಿದ್ದು, ಮೊದಲ ಹಂತದಲ್ಲಿ ಕೆಆರ್‍ಎಸ್ ಮತ್ತು ಹಾರಂಗಿ ಅಣೆಕಟ್ಟೆಗಳಿಗೆ ಜುಲೈ ಮೊದಲ ವಾರ ಗೇಜ್ ಅಳವಡಿಸಲಾಗಿದೆ. ಈ ಉಪಕರಣವು ನವ ದೆಹಲಿಯ ಕೇಂದ್ರ ಜಲಸಂಪನ್ಮೂಲ ಇಲಾಖೆ, ನೀರಾವರಿ ಇಲಾಖೆ ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳಿಗೆ ಜಲಾಶಯದಲ್ಲಿ ಲಭ್ಯವಿರುವ ನೀರಿನ ಪ್ರಮಾಣ, ಒಳಹರಿವು, ಹೊರಹರಿವಿನ ಬಗ್ಗೆ ನಿಖರ ಮಾಹಿತಿಯನ್ನು ಒದಗಿಸುತ್ತದೆ. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಕೇಂದ್ರ ಸರ್ಕಾ ರವು ಕಾವೇರಿ ನೀರು ನಿರ್ವಹಣಾ ಪ್ರಾಧಿ ಕಾರ(CWMA) ಮತ್ತು ಕಾವೇರಿ ನೀರು ನಿಯಂತ್ರಣ ಸಮಿತಿ(CWRC)ಗಳನ್ನು ರಚಿ ಸಿತ್ತು. ಅದರಲ್ಲಿರುವ ತಜ್ಞರನ್ನೊಳಗೊಂಡ ಸಮಿತಿ ಸದಸ್ಯರೇ ಜೂನ್ ಮೊದಲ ವಾರ ದಲ್ಲಿ ಕರ್ನಾಟಕ, ತಮಿಳುನಾಡು, ಪಾಂಡಿ ಚೇರಿ ಹಾಗೂ ಕೇರಳ ರಾಜ್ಯಗಳ ಜಲಾ ಶಯಗಳಿಗೆ ಭೇಟಿ ನೀಡಿ ನೀರಿನ ನಿರ್ವ ಹಣೆಯನ್ನು ಅಧ್ಯಯನ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಕಾವೇರಿ ಕಣಿವೆಯ ಎಲ್ಲಾ ಜಲಾಶಯ ಗಳ ಅಣೆಕಟ್ಟೆಗಳಲ್ಲೂ ತಿಂಗಳೊಳಗಾಗಿ ಈ ಉಪಕರಣ ಅಳವಡಿಕೆ ಆಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Translate »