ಕುಮಾರಸ್ವಾಮಿ ಸಂಪರ್ಕಿಸಿದ ಬಿಜೆಪಿ ವರಿಷ್ಠರು
ಮೈಸೂರು

ಕುಮಾರಸ್ವಾಮಿ ಸಂಪರ್ಕಿಸಿದ ಬಿಜೆಪಿ ವರಿಷ್ಠರು

July 26, 2019

ಬೆಂಗಳೂರು: ಬಿ.ಎಸ್.ಯಡಿಯೂರಪ್ಪ ಸರ್ಕಾರ ರಚಿ ಸಲು ಬಿಕ್ಕಟ್ಟು ಎದುರಾಗುತ್ತಿದ್ದಂತೆಯೇ ಬಿಜೆಪಿ ವರಿಷ್ಠರು ಇದೀಗ ಹಂಗಾಮಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಸಂಪರ್ಕಿಸಿ, ನಮ್ಮ ಜೊತೆ ಕೈಜೋಡಿಸಿ ಎಂದು ಮನವಿ ಮಾಡಿದ್ದಾರೆ.

ಇಂದು ಬೆಳಿಗ್ಗೆ ಪಕ್ಷದ ರಾಷ್ಟ್ರೀಯ ಹಿರಿಯ ನಾಯಕರೊಬ್ಬರು ದೂರವಾಣಿ ಮೂಲಕ ಕುಮಾರಸ್ವಾಮಿ ಅವರನ್ನು ಸಂಪರ್ಕಿಸಿ, ಸದ್ಯದ ರಾಜಕೀಯ ಪರಿಸ್ಥಿತಿಯ ಬಗ್ಗೆ ಸುಮಾರು 12 ನಿಮಿಷಗಳ ಕಾಲ ಚರ್ಚೆ ನಡೆಸಿದ್ದರು. ನಿಮ್ಮ ಸರ್ಕಾರವನ್ನು ತೆಗೆಯ ಬೇಕೆಂಬ ಉದ್ದೇಶ ನಮ್ಮದಾಗಿರಲಿಲ್ಲ. ನಮಗೆ ಕಾಂಗ್ರೆಸ್ ಮುಖ್ಯ ಗುರಿಯಾಗಿತ್ತು. ಇದೀಗ ನಮ್ಮ ಗುರಿ ಮುಟ್ಟಿದ್ದೇವೆ. ಪರ್ಯಾಯ ಸರ್ಕಾರ ರಚನೆಗೆ ನಮ್ಮೊಂದಿಗೆ ಕೈ ಜೋಡಿಸಿ ಎಂದಿರುವ ಅಂಶ ಬೆಳಕಿಗೆ ಬಂದಿದೆ. ವಿಶ್ವಾಸಮತ ಯಾಚ ನೆಗೂ ಮುನ್ನವೇ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಕುಮಾರ ಸ್ವಾಮಿ ಅವರನ್ನು ಸಂಪರ್ಕಿಸಿ, ಸಮಾ ಲೋಚನೆ ನಡೆಸಿದ್ದರು. ಇಂದು ಮತ್ತು ಅಂದು ಅವರು ಹೇಳಿದ ಮಾತುಗಳನ್ನು ಕೇಳಿ ನಮ್ಮ ತಂದೆ ದೇವೇ ಗೌಡರು ನಿರ್ಧಾರ ಕೈಗೊಳ್ಳಬೇಕು. ಅವರ ಜೊತೆ ಚರ್ಚೆ ಮಾಡಿ, ನಿಮ್ಮನ್ನು ಸಂಪರ್ಕಿ ಸುತ್ತೇನೆ ಎಂದು ಹೇಳಿ ಕೈತೊಳೆದುಕೊಂಡಿ ದ್ದಾರೆ. ವಿಧಾನಸಭೆಯ ಶಾಸಕ ಬಲ 225 ಇರುವುದರಿಂದ ಸರ್ಕಾರ ರಚಿಸಲು 113 ಶಾಸಕರ ಬೆಂಬಲ ತಮಗಿದೆ ಎಂದು ರಾಜ್ಯ ಬಿಜೆಪಿ ರಾಜ್ಯಪಾಲರಿಗೆ ವಿವರಿಸಲೇಬೇಕು. ಮತ್ತದು ರಾಜ್ಯ ಪಾಲರಿಗೆ ಮನವರಿಕೆ ಯಾಗುವಂತಿರಬೇಕು. ಆದರೆ ಶಾಸಕರ ರಾಜೀನಾಮೆ ಪ್ರಕರಣ ಇತ್ಯರ್ಥವಾಗದೆ ಉಳಿದಿರುವುದರಿಂದ ರಾಜ್ಯಾಂಗ ಬಿಕ್ಕಟ್ಟು ಸೃಷ್ಟಿಯಾಗುವ ಲಕ್ಷಣಗಳು ಕಾಣುತ್ತಿವೆ. ಹೀಗಾಗಿ ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿ-ಜೆಡಿಎಸ್ ಪರಸ್ಪರ ಕೈಗೂಡಿಸಿ ಸಮ್ಮಿಶ್ರ ಸರ್ಕಾರ ರಚಿಸುವುದು ಒಳ್ಳೆಯದು ಎಂದು ಬಿಜೆಪಿ ವರಿಷ್ಠರು ಕುಮಾರ ಸ್ವಾಮಿ ಅವರಿಗೆ ಹೇಳಿದ್ದಾರೆ. ಉಳಿದ ಅವಧಿಯುದ್ದಕ್ಕೂ ನಮ್ಮವರೇ ಮುಖ್ಯಮಂತ್ರಿ ಆಗಿರಲಿ, ನಿಮ್ಮ ಪಕ್ಷಕ್ಕೆ ಉಪಮುಖ್ಯಮಂತ್ರಿ ಹುದ್ದೆ ಬಿಟ್ಟುಕೊಡುತ್ತೇವೆ.ಉಳಿದಂತೆ ಹಿಂದೆ ಮೈತ್ರಿ ಸರ್ಕಾರ ರಚಿಸಿ ಅನುಭವವಿರುವುದರಿಂದ ಮಾತುಕತೆಯ ಮೂಲಕ ಎಲ್ಲವನ್ನೂ ಬಗೆಹರಿಸಿಕೊಳ್ಳಬಹುದು ಎಂದು ಬಿಜೆಪಿ ವರಿಷ್ಠರು ವಿವರಿಸಿದ್ದಾರೆ. ಅತೃಪ್ತ ಶಾಸಕರು ಬಂದರೆ ತಮ್ಮ ಹಾದಿ ಸುಗಮ ಎಂದು ಭಾವಿಸಿದ್ದ ಬಿಜೆಪಿ ಇದೀಗ ಅತೃಪ್ತ ಶಾಸಕರ ಪಡೆ ತಮ್ಮ ಜತೆಯಲ್ಲಿದ್ದರೂ ಸಾಂವಿಧಾನಿಕವಾಗಿ ಮುಂದಡಿ ಇಡಲಾಗುತ್ತಿಲ್ಲ.

ಬಿಜೆಪಿ ವರಿಷ್ಠರು ಜೆಡಿಎಸ್ ನಾಯಕರೊಂದಿಗೆ ಮಾತನಾಡುತ್ತಿದ್ದ ವಿವರ ತಿಳಿಯುತ್ತಿ ದ್ದಂತೆಯೇ ಅತೃಪ್ತ ಶಾಸಕರ ಪೈಕಿ ಹಲವರು ನಾವು ನಮ್ಮ ನಮ್ಮ ಪಕ್ಷಗಳಿಗೆ ಮರಳುತ್ತೇವೆ ಎನ್ನತೊಡಗಿದ್ದಾರೆ ಎಂದು ಮೂಲಗಳು ಹೇಳಿವೆ.

ಕಾಂಗ್ರೆಸ್-ಜೆಡಿಎಸ್ ಸರ್ಕಾರ ಬೇಡ ಎಂದು ಇಲ್ಲಿಗೆ ಬಂದರೆ ನೀವು ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಸರ್ಕಾರ ರಚಿಸುವುದಾದರೆ ನಾವು ಮರಳಿ ಮನೆಗೆ ಹೋಗು ತ್ತೇವೆ. ನಮ್ಮ ರಾಜೀನಾಮೆಯನ್ನು ಹಿಂಪಡೆಯುತ್ತೇವೆ ಎಂದು ಈಗಾಗಲೇ ಹಲವು ಶಾಸಕರು ಬಿಜೆಪಿ ನಾಯಕರ ಬಳಿ ವರಾತ ಎತ್ತಿದ್ದಾರೆ. ಪರಿಣಾಮವಾಗಿ ರಾಜ್ಯ ಬಿಜೆಪಿ ನಾಯಕರು ಒಂದು ಬಗೆಯ ಸಂಕಟದಲ್ಲಿದ್ದರೆ ರಾಷ್ಟ್ರೀಯ ಬಿಜೆಪಿ ನಾಯಕರು ಕಡ್ಡಿ ಮುರಿದಂತೆ ಮಾತನಾಡತೊಡಗಿದ್ದು, ಅವರ ಮಾತಿನ ಧಾಟಿ ಹೇಗಿದೆ ಎಂದರೆ ತಮ್ಮ ಪಕ್ಷದ ನಾಯಕರ ಮಾತು ಕೇಳಿ ರಾಜೀನಾಮೆ ನೀಡಿದವರ ಹಿತವನ್ನು ಅವರು ಪರಿಗಣಿಸುತ್ತಿಲ್ಲ. ಇದು ಗಾಬರಿಯ ವಿಷಯ ಎಂದು ರಾಜೀನಾಮೆ ನೀಡಿರುವ ಶಾಸಕರೊಬ್ಬರು ಪತ್ರಿಕೆಗೆ ತಿಳಿಸಿದರು. ಈ ಮಧ್ಯೆ ಅತೃಪ್ತ ಶಾಸಕರ ಪೈಕಿ ಕೆಲವರು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಫೋನ್ ಮಾಡಿ, ನಮ್ಮನ್ನು ಬಲವಂತದಿಂದ ಇಲ್ಲಿರಿಸಲಾಗಿದೆ.ನಾವು ರಾಜೀನಾಮೆ ನೀಡಿರುವುದು ತಪ್ಪು.ಆದರೂ ನಮ್ಮನ್ನು ರಕ್ಷಿಸಿ, ಕೈಬಿಡಬೇಡಿ ಎಂದು ಮನವಿ ಮಾಡಿಕೊಂಡಿರುವುದಾಗಿ ಮೂಲಗಳು ಹೇಳಿವೆ.

Translate »