ಮೈಸೂರು: ಮೈಸೂರಿನ ಪರಂಪರೆ, ಸೌಂದರ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಒಂದೆಡೆ ಪ್ರಯತ್ನಗಳಾಗುತ್ತಿದ್ದರೆ, ಮತ್ತೊಂದೆಡೆ ನಗರದ ಅಂದಗೆಡಿಸುವ ಕೃತ್ಯ ಎಗ್ಗಿಲ್ಲದೆ ಸಾಗಿದೆ. ನಗರದ ಬಹುತೇಕ ಬಡಾವಣೆಯ ವಿದ್ಯುತ್ ಕಂಬಗಳಲ್ಲಿ ಹತ್ತಾರು ಕೇಬಲ್‍ಗಳನ್ನು ಅಳವಡಿಸಿ ರುವುದೇ ಇದಕ್ಕೊಂದು ಜ್ವಲಂತ ಸಾಕ್ಷಿ. ವಿದ್ಯುತ್ ತಂತಿಗಳ ಜೊತೆಗೆ ವಿವಿಧ ಟೆಲಿಕಾಂ ಕಂಪನಿಗಳ ನೆಟ್‍ವರ್ಕ್ ಕೇಬಲ್‍ಗಳು ಸೇರಿಕೊಂಡಿವೆ. ಪ್ರತಿ ಕಂಬದಲ್ಲೂ ಸುರುಳಿ ಸುತ್ತಿರುವ ಕೇಬಲ್ ಗೊಂಚಲು ಹಾಗೂ ಕನೆಕ್ಟಿಂಗ್ ಮೆಷಿನ್ ಬಾಕ್ಸ್‍ಗಳು ಜೋತು ಬಿದ್ದಿವೆ. ಹೇಳುವವರು, ಕೇಳುವವರು ಯಾರೂ ಇಲ್ಲ ಎಂಬಂತೆ ಎಲ್ಲೆಡೆ ಕೇಬಲ್ ಅಳವಡಿಸುವ…
ಗ್ರಾಮ ಪಂಚಾಯಿತಿ ಉಪಚುನಾವಣೆ: ಮದ್ಯ ಮಾರಾಟ ನಿಷೇಧ
May 14, 2019ಮೈಸೂರು: ಮೈಸೂರು ಜಿಲ್ಲೆಯ ಗ್ರಾಮಪಂಚಾಯಿತಿಗಳಲ್ಲಿ ತೆರವಾಗಿರುವ/ಖಾಲಿ ಉಳಿದಿರುವ ಒಟ್ಟು 13 ಗ್ರಾಮಪಂಚಾಯಿತಿಗಳ ಸದಸ್ಯ ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದೆ. ಚುನಾವಣೆ ನಡೆಯುವ ಗ್ರಾಮಪಂಚಾಯಿತಿ ಕ್ಷೇತ್ರ ಗಳ ವ್ಯಾಪ್ತಿಯಲ್ಲಿ ಕ್ಷೇತ್ರಗಳಿಗೆ ಒಳಪಡುವ ಗ್ರಾಮ ಗಳಲ್ಲಿ ಚುನಾವಣಾ ನೀತಿ ಸಂಹಿತೆಯು ಮೇ 13ರಿಂದ ಮೇ 31ರವರೆಗೆ ಜಾರಿಯಲ್ಲಿರುತ್ತದೆ. ಮೈಸೂರು ತಾಲೂಕಿನ ಹಿನಕಲ್, ಯಡಕೊಳ ಹಾಗೂ ಆನಂದೂರು, ನಂಜನ ಗೂಡು ತಾಲೂಕಿನ ಹದಿನಾರು ಹಾಗೂ ಸಿಂಧುವಳ್ಳಿ, ತಿ.ನರಸೀಪುರ ತಾಲೂಕಿನ ತುರಗನೂರು ಹಾಗೂ ಬೆನಕನಹಳ್ಳಿ, ಹುಣಸೂರು ತಾಲೂಕಿನ ಹನಗೂಡು, ಕೆ.ಆರ್. ನಗರ ತಾಲೂಕಿನ ಸಿದ್ದಾಪುರ,…
ಮೈಸೂರು ಕಾಫಿ ಸಂಸ್ಕರಣಾ ಸಹಕಾರ ಸಂಘದ ಭೂಮಿ ವಾಪಸ್ ನೀಡಲು ಆಗ್ರಹಿಸಿ ಪ್ರತಿಭಟನೆ
May 14, 2019ಮೈಸೂರು: `ನಮ್ಮ ಭೂಮಿ ನಮಗೆ ವಾಪಸು ನೀಡಿ’ ಎಂದು ಆಗ್ರಹಿಸಿ ಮೈಸೂರು ಕಾಫಿ ಸಂಸ್ಕರಣಾ ಸಹಕಾರ ಸಂಘದ ಹಿತರಕ್ಷಣಾ ಸಮಿತಿಯ ಸದಸ್ಯರು ಸೋಮವಾರ ಮೈಸೂರಿನ ಕೆಆರ್‍ಎಸ್ ರಸ್ತೆಯಲ್ಲಿರುವ ಮೈಸೂರು ಸಹಕಾರ ಸಂಘದ (ಎಂಸಿಪಿ ಸಿಎಸ್) ಆವರಣದಲ್ಲಿರುವ ಸಮಾಪನಾಧಿಕಾರಿ ಕಚೇರಿ ಎದುರು ಸಾಂಕೇತಿಕ ಪ್ರತಿಭಟನೆ ಮಾಡಿದರು. ಬಳಿಕ ಸಮಾಪನಾಧಿಕಾರಿ ಜೆ.ವಿಕ್ರಮ್‍ರಾಜೇ ಅರಸ್ ಅವರಿಗೆ ಮನವಿ ಸಲ್ಲಿಸಿದರು. ಮೈಸೂರು, ಕೊಡಗು, ಚಿಕ್ಕಮಗ ಳೂರು, ಹಾಸನದ ಕಾಫಿ ಬೆಳೆಗಾರರಿಗೆ ಸೇರಿದ ಭೂಮಿಯನ್ನು ಹಿಂತಿರುಗಿಸ ಬೇಕು ಎಂಬುದು ಪ್ರತಿಭಟನಾಕಾರ ಕಾಫಿ ಬೆಳೆಗಾರ ರೈತರ…
ಇಂದು ವಿದ್ಯುತ್ ವ್ಯತ್ಯಯ
May 14, 2019ಮೈಸೂರು: ತುರ್ತು ನಿರ್ವ ಹಣಾ ಕಾರ್ಯ ನಿಮಿತ್ತ ನಾಳೆ (ಮಂಗಳ ವಾರ) ಬೆಳಿಗ್ಗೆ 10ರಿಂದ ಸಂಜೆ 6 ಗಂಟೆ ವರೆಗೆ ಕುವೆಂಪುನಗರ ಎ ಮತ್ತು ಬಿ ಬ್ಲಾಕ್, ವಿಜಯ ಬ್ಯಾಂಕ್ ಸರ್ಕಲ್, ವಿಶ್ವ ಮಾನವ ಜೋಡಿ ರಸ್ತೆ, ಜಗದಾಂಬ ಪೆಟ್ರೋಲ್ ಬಂಕ್‍ನಿಂದ ನಳಪಾಕ ಹೋಟೆಲ್‍ವರೆಗೆ, ಮಾರುತಿ ದೇವಸ್ಥಾನ ರಸ್ತೆ, ಅಕ್ಷಯ ಭಂಡಾರ್ ರಸ್ತೆ, ಸರಸ್ವತಿ ಪುರಂ 11ನೇ ಮೇನ್, 15-16ನೇ ಕ್ರಾಸ್, ಸರಸ್ವತಿಪುರಂ 1ರಿಂದ 5 ಮೇನ್, ನ್ಯೂ ಕಾಂತರಾಜ ಅರಸ್ ರಸ್ತೆ, ಕೆ.ಜಿ.ಕೊಪ್ಪಲು ಮುಖ್ಯ ರಸ್ತೆ,…
ಮೈಸೂರು `ದೊಡ್ಡ ಗಡಿಯಾರ’ ದುರಸ್ತಿಕಾಮಗಾರಿಗೆ ತಜ್ಞರ ಸಭೆ ನಿರ್ಧಾರ
May 14, 2019ಮೈಸೂರು: ಬಿರುಕು ಬಿಟ್ಟಿರುವ ಮೈಸೂರಿನ ಪಾರಂ ಪರಿಕ ದೊಡ್ಡಗಡಿಯಾರ ದುರಸ್ತಿ ಕಾಮ ಗಾರಿ ನಡೆಸುವುದರೊಂದಿಗೆ ಎಲ್ಲಾ ಪಾರಂಪರಿಕ ಕಟ್ಟಡಗಳಲ್ಲಿ ಅಗ್ನಿ ದುರಂತ ತಡೆಗೆ ಉಪಕರಣ ಅಳವಡಿ ಕೆಗೆ ಸೂಚನೆ ನೀಡಲು ಸೋಮವಾರ ನಡೆದ ಪಾರಂಪರಿಕ ಪ್ರದೇಶ ಅಭಿವೃದ್ಧಿ ಮತ್ತು ಸಂರಕ್ಷಣೆಗಾಗಿ ರಚಿಸಲಾದ ತಜ್ಞರ ಸಮಿತಿ ಸಭೆಯಲ್ಲಿ ನಿರ್ಧರಿಸಲಾಯಿತು. ಮೈಸೂರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಬೆಳಿಗ್ಗೆ ನಡೆದ ಮೈಸೂರು ಪಾರಂಪರಿಕ ಪ್ರದೇಶ ಅಭಿ ವೃದ್ಧಿ ಮತ್ತು ಸಂರಕ್ಷಣೆಗಾಗಿ ರಚಿಸ ಲಾದ ತಜ್ಞರ ಸಮಿತಿ ಸಭೆಯಲ್ಲಿ ಸಮಿತಿ ಅಧ್ಯಕ್ಷರೂ…
ಅಶ್ವದಳದ ಅಧಿಕಾರಿ ಭುಜಂಗರಾವ್, ಅಂಚೆ ಬಸಪ್ಪ ಪ್ರತಿಮೆ ಯಶಸ್ವಿ ಸ್ಥಳಾಂತರ
May 13, 2019ಮೈಸೂರು: ಮೈಸೂರಿನ ರೇಸ್‍ಕೋರ್ಸ್ ರಸ್ತೆಯ ಕರ್ನಾಟಕ ಸಶಸ್ತ್ರ ಮೀಸಲು ಪೊಲೀಸ್‍ನ (ಕೆಎಆರ್‍ಪಿ) ಅಶ್ವಾರೋಹಿ ದಳದ ಆವರಣಕ್ಕೆ ಸುರಕ್ಷಿತವಾಗಿ ಸ್ಥಳಾಂತರಗೊಂಡಿದ್ದ ಅಂದಿನ ಮೈಸೂರು ಸಂಸ್ಥಾನದ ಅಶ್ವದಳದ ಅಧಿಕಾರಿ ಭುಜಂಗರಾವ್ ಹಾಗೂ ಅಂಚೆ ವಿತರಕ ಬಸಪ್ಪ ಪ್ರತಿಮೆಗಳ ಪ್ರತಿಷ್ಠಾಪಿಸುವ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಸುರಕ್ಷಿತ-ಸಾಂಪ್ರದಾಯಿಕ ವಿಧಾನದ ಮೂಲಕ ಎರಡೂ ಪ್ರತಿಮೆಗಳನ್ನು ಹೊಸ ಮಂಟಪಗಳಿಗೆ ಸ್ಥಳಾಂತರಗೊಳಿಸಲಾಗಿತ್ತು. ಇದೀಗ ಅವುಗಳನ್ನು ಕ್ರಮಬದ್ಧವಾಗಿ ನಿಲ್ಲಿಸುವ ಕಾರ್ಯ ಪೂರ್ಣಗೊಂಡು ನೋಡುಗರಲ್ಲಿ ಹೊಸ ಅನುಭವ ಉಂಟು ಮಾಡುತ್ತಿವೆ. ಪ್ರತಿಮೆಗಳಿಗೆ ಪೇಪರ್ ಹುಲ್ಲು, ಒಣಹುಲ್ಲು, ಥರ್ಮಾಕೋಲ್ ಹಾಗೂ ಗೋಣಿ…
ಗಾಯಗೊಂಡಿದ್ದ ಶಿವಸಿದ್ದಪ್ಪಗೆ ಶಸ್ತ್ರಚಿಕಿತ್ಸೆ
May 13, 2019ಮೈಸೂರು: ಕಳೆದ ಬುಧವಾರ ರಾತ್ರಿ ಮೈಸೂರಿನ ಲಿಂಗಾಂಬುದಿ ಪಾಳ್ಯ ಬಳಿ ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿ ತೀವ್ರವಾಗಿ ಗಾಯಗೊಂಡಿದ್ದ ಶಿವಸಿದ್ದಪ್ಪ ಅವರಿಗೆ ಕೆ.ಆರ್. ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ತಲೆ, ಬೆನ್ನು ಭಾಗಕ್ಕೆ ಮನಸ್ಸೋಇಚ್ಛೆ ಥಳಿಸಿ, ಕೆಳಕ್ಕೆ ಬಿದ್ದ ಶಿವಸಿದ್ದಪ್ಪ ಬಲಗಾಲಿನ ಮೇಲೆ ಕಲ್ಲು ಎತ್ತಿ ಹಾಕಿ ತೀವ್ರವಾಗಿ ಗಾಯಗೊಳಿಸಲಾಗಿತ್ತು. ಮೂಳೆ ಸಂಪೂರ್ಣ ವಾಗಿ ಮುರಿದಿದ್ದರಿಂದ ಶುಕ್ರವಾರ ಕೆ.ಆರ್. ಆಸ್ಪತ್ರೆ ವೈದ್ಯರು ಆತನನ್ನು ಶಸ್ತ್ರಚಿಕಿತ್ಸೆಗೊಳಪಡಿಸಿದ್ದಾರೆ. ಆಸ್ಪತ್ರೆಯ ಕಲ್ಲು ಕಟ್ಟಡದ 1ನೇ ವಾರ್ಡಿನಲ್ಲಿ ದಾಖಲಾ ಗಿರುವ ಶಿವಸಿದ್ದಪ್ಪ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅವರ ಸಹೋದರ…
ಗುಬ್ಬಚ್ಚಿಗೊಂದು ಗೂಡು ಕಟ್ಟಿ…!
May 13, 2019ಮೈಸೂರು: ಸ್ವಚ್ಛಂದವಾಗಿ ನಿಮ್ಮ ಮನೆಯಂಗಳದಲ್ಲಿ ಗಿಜುಗುಟ್ಟುವ ಗುಬ್ಬಚ್ಚಿ ಗಳ ಚಿಲಿಪಿಲಿ ಕೇಳಬೇಕೇ? ಹಾಗಾದರೆ, ಗುಬ್ಬಚ್ಚಿ ಗೊಂದು ಗೂಡು ಕಟ್ಟಿ…! ಅವುಗಳ ಸದ್ದು ಕೇಳಲಿ ಕಿಚಿಕಿಚಿ…! ಹೌದು, ಗುಬ್ಬಚ್ಚಿ ಗೂಡು ಕಟ್ಟಲು ನೀವೇನು ಶ್ರಮಿಸಬೇಕಿಲ್ಲ. ರಟ್ಟಿನಲ್ಲಿ ಸಿದ್ಧಗೊಂಡ ಗೂಡುಗಳನ್ನು ಉಚಿತವಾಗಿ ನೀಡಲು ಇಲ್ಲೊಂದು ಸಂಘಟನೆ ಸಿದ್ಧವಿದ್ದು, ಒಂದಿಷ್ಟು ಕಾಳಜಿ ವಹಿಸಿ ದರೆ ಗುಬ್ಬಚ್ಚಿಗಳಿಗೆ ಆಶ್ರಯ ಕರುಣಿಸಿ, ಅವುಗಳ ಆಟಪಾಠಗಳನ್ನು ನೋಡಿ ಆನಂದಿಸಬಹುದು. ಜೀವ್ ದಯಾ ಜೈನ್ ಚಾರಿಟಿ (ಜೆಡಿಜೆಸಿ) ಗುಬ್ಬಚ್ಚಿಗಳಿಗೆ ಆಶ್ರಯ ಕಲ್ಪಿಸಲು ಸಿದ್ಧಗೊಂಡ ಗುಬ್ಬಚ್ಚಿ ಗೂಡುಗಳನ್ನು ಆಸಕ್ತ…
ವಿವಿಧೆಡೆ ಅಪಘಾತ, ಅನಾಹುತ ಇಬ್ಬರು ಮಹಿಳೆಯರು ಸೇರಿ 8 ಮಂದಿ ದುರ್ಮರಣ
May 13, 2019ಮೈಸೂರು: ವಿವಿಧೆಡೆ ಇಂದು ನಡೆದ ಅಪಘಾತ ಮತ್ತು ಅನಾಹುತಗಳಲ್ಲಿ ಇಬ್ಬರು ಮಹಿಳೆಯರು ಸೇರಿ 8 ಮಂದಿ ದುರ್ಮರಣ ಹೊಂದಿದ್ದು, ಇಂದು ಕರಾಳ ಭಾನುವಾರವಾಗಿ ಪರಿಣಮಿಸಿದೆ. ಕೆ.ಆರ್.ಪೇಟೆಯಲ್ಲಿ ಬೈಕ್‍ಗೆ ಕೆಎಸ್ ಆರ್‍ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಹಿಳೆಯರು ಸೇರಿದಂತೆ ಒಂದೇ ಕುಟುಂಬದ ಮೂವರು ಬಲಿಯಾಗಿದ್ದಾರೆ. ಶ್ರೀರಂಗಪಟ್ಟಣ ತಾಲೂಕು ಬಲಮುರಿ ಯಲ್ಲಿ ಮೈಸೂರಿನ ಇಬ್ಬರು ಯುವಕರು ನೀರು ಪಾಲಾಗಿದ್ದಾರೆ. ಕೊಡಗಿನ ಚಿಕ್ಲಿ ಹೊಳೆ ಜಲಾಶಯದಲ್ಲಿ ಮುಳುಗಿ ಇಬ್ಬರು ಯುವಕರು ಸಾವನ್ನಪ್ಪಿದರೆ, ಚಾಮರಾಜ ನಗರದ ಸುವರ್ಣಾವತಿ ಜಲಾಶಯದಲ್ಲಿ ಯುವಕನೋರ್ವ…
ಲೋಕಸಭಾ ಚುನಾವಣೆ: 6ನೇ ಹಂತದಲ್ಲಿ ಶೇ.63.3 ಮತದಾನ
May 13, 2019ನವದೆಹಲಿ: ಲೋಕಸಭಾ ಚುನಾವಣೆಯ 6ನೇ ಹಂತದಲ್ಲಿ ಶೇ. 63.3 ರಷ್ಟು ಮತದಾನವಾಗಿದೆ. ದೇಶದ 7 ರಾಜ್ಯಗಳ 59 ಕ್ಷೇತ್ರಗಳಿಗೆ ಇಂದು ಮತದಾನ ನಡೆಯಿತು. ಉತ್ತರಪ್ರದೇಶದ 14, ಹರಿಯಾಣದ 10, ಪ.ಬಂಗಾಳ, ಬಿಹಾರ, ಮಧ್ಯ ಪ್ರದೇಶದ ತಲಾ 8 ಕ್ಷೇತ್ರ, ದೆಹಲಿಯ 7 ಮತ್ತು ಜಾರ್ಖಂಡ್‍ನ 4 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಬಿಹಾರದಲ್ಲಿ ಶೇ.59.29, ಹರಿಯಾಣದಲ್ಲಿ ಶೇ.68.17, ಮಧ್ಯಪ್ರದೇಶ ದಲ್ಲಿ ಶೇ.64.55, ಉತ್ತರ ಪ್ರದೇಶದಲ್ಲಿ ಶೇ. 54.72, ಪಶ್ಚಿಮ ಬಂಗಳಾದಲ್ಲಿ ಶೇ.80.35, ಜಾರ್ಖಂಡ್‍ನಲ್ಲಿ ಶೇ.64.50, ದೆಹಲಿಯಲ್ಲಿ ಶೇ.59.74ರಷ್ಟು ಮತದಾನ…