ಗುಬ್ಬಚ್ಚಿಗೊಂದು ಗೂಡು ಕಟ್ಟಿ…!
ಮೈಸೂರು

ಗುಬ್ಬಚ್ಚಿಗೊಂದು ಗೂಡು ಕಟ್ಟಿ…!

May 13, 2019

ಮೈಸೂರು: ಸ್ವಚ್ಛಂದವಾಗಿ ನಿಮ್ಮ ಮನೆಯಂಗಳದಲ್ಲಿ ಗಿಜುಗುಟ್ಟುವ ಗುಬ್ಬಚ್ಚಿ ಗಳ ಚಿಲಿಪಿಲಿ ಕೇಳಬೇಕೇ? ಹಾಗಾದರೆ, ಗುಬ್ಬಚ್ಚಿ ಗೊಂದು ಗೂಡು ಕಟ್ಟಿ…! ಅವುಗಳ ಸದ್ದು ಕೇಳಲಿ ಕಿಚಿಕಿಚಿ…! ಹೌದು, ಗುಬ್ಬಚ್ಚಿ ಗೂಡು ಕಟ್ಟಲು ನೀವೇನು ಶ್ರಮಿಸಬೇಕಿಲ್ಲ. ರಟ್ಟಿನಲ್ಲಿ ಸಿದ್ಧಗೊಂಡ ಗೂಡುಗಳನ್ನು ಉಚಿತವಾಗಿ ನೀಡಲು ಇಲ್ಲೊಂದು ಸಂಘಟನೆ ಸಿದ್ಧವಿದ್ದು, ಒಂದಿಷ್ಟು ಕಾಳಜಿ ವಹಿಸಿ ದರೆ ಗುಬ್ಬಚ್ಚಿಗಳಿಗೆ ಆಶ್ರಯ ಕರುಣಿಸಿ, ಅವುಗಳ ಆಟಪಾಠಗಳನ್ನು ನೋಡಿ ಆನಂದಿಸಬಹುದು.

ಜೀವ್ ದಯಾ ಜೈನ್ ಚಾರಿಟಿ (ಜೆಡಿಜೆಸಿ) ಗುಬ್ಬಚ್ಚಿಗಳಿಗೆ ಆಶ್ರಯ ಕಲ್ಪಿಸಲು ಸಿದ್ಧಗೊಂಡ ಗುಬ್ಬಚ್ಚಿ ಗೂಡುಗಳನ್ನು ಆಸಕ್ತ ಸಾರ್ವಜನಿಕರಿಗೆ ಉಚಿತವಾಗಿ ಹಂಚುವ ಅಭಿಯಾನ ಆರಂಭಿ ಸಿದೆ. ಮಾತ್ರವಲ್ಲ, ಮೈಸೂರಿನ ಯಾವ ಪ್ರದೇಶ ದಲ್ಲಿ ಹೆಚ್ಚು ಗುಬ್ಬಚ್ಚಿಗಳು ನೆಲೆಸಿವೆ ಎಂದು ಶೋಧಿಸಿ ಅಂತಹ ಸ್ಥಳದಲ್ಲಿನ ನಿವಾಸಿಗಳ ಮನವೊಲಿಸಿ ಅವರ ಮನೆ ಆವರಣದಲ್ಲಿ ಗುಬ್ಬಚ್ಚಿಗೂಡುಗಳನ್ನು ಅಳವಡಿಸುವ ಮಹತ್ವ ಕಾರ್ಯಕ್ಕೂ ಕೈ ಹಾಕಿದೆ.
ಈ ಅಭಿಯಾನದ ಅಂಗವಾಗಿ ಭಾನುವಾರ ಮೈಸೂರಿನ ಕುಕ್ಕರಹಳ್ಳಿ ಕೆರೆ ಆವರಣದಲ್ಲಿ ಸಂಘ ಟನೆ ವತಿಯಿಂದ 200ಕ್ಕೂ ಹೆಚ್ಚು ರಟ್ಟಿನಿಂದ ಸಿದ್ಧ ಗೊಳಿಸಿದ ಗುಬ್ಬಚ್ಚಿ ಗೂಡುಗಳನ್ನು ಉಚಿತವಾಗಿ ವಿತರಿಸಲಾಯಿತು. ಅಲ್ಲದೆ, ಸುಮಾರು 80 ಫೀಡರ್ ಬಾಟಲ್‍ಗಳು ಹಾಗೂ 80ಕ್ಕೂ ಹೆಚ್ಚು ಕಾಳುಗಳ ಪ್ಯಾಕೆಟ್‍ಗಳನ್ನು ಉಚಿತವಾಗಿ ನೀಡಲಾಯಿತು.

ಇದೇ ವೇಳೆ `ಮೈಸೂರು ಮಿತ್ರ’ನೊಂದಿಗೆ ಮಾತ ನಾಡಿದ ಜೆಡಿಜೆಸಿ ಸಂಸ್ಥಾಪಕ ಅಧ್ಯಕ್ಷೆ ಕೋಕಿಲ ರಮೇಶ್ ಜೈನ್, ಕಳೆದ 15 ದಿನಗಳ ಹಿಂದೆಯೂ ಅಭಿಯಾನದ ಮೊದಲ ಕಾರ್ಯಕ್ರಮವಾಗಿ ಇದೇ ಕುಕ್ಕರಹಳ್ಳಿ ಕೆರೆ ಆವರಣದಲ್ಲಿ 170ಕ್ಕೂ ಹೆಚ್ಚು ಗುಬ್ಬಚ್ಚಿ ಗೂಡು ವಿತರಣೆ ಮಾಡಿದ್ದೇವೆ. ಜೊತೆಗೆ ಗುಬ್ಬಚ್ಚಿಗಳಿಗೆ ಕಾಳುಕಡ್ಡಿ ಶೇಖರಿಸಿಡುವ 50 ಫೀಡರ್ ಬಾಟಲ್, 70 ಕಾಳುಗಳ ಪ್ಯಾಕೆಟ್‍ಗಳನ್ನು ಹಂಚಿ ದ್ದೇವೆ. ಗೋಕುಲಂನಲ್ಲಿ 10ಕ್ಕೂ ಹೆಚ್ಚು ಮನೆ ಆವರಣ ದಲ್ಲಿ ಗುಬ್ಬಚ್ಚಿ ಗೂಡು ಅಳವಡಿಸಿದ್ದೇವೆ ಎಂದರು.

ಮುಂದಿನ ದಿನಗಳಲ್ಲಿ ಶ್ರೀರಾಂಪುರ, ಬೋಗಾದಿ ಹಾಗೂ ವಿಜಯನಗರ ಸೇರಿದಂತೆ ಹಲವು ಭಾಗ ಗಳಲ್ಲಿ ಗುಬ್ಬಚ್ಚಿ ಗೂಡು ಅಳವಡಿಸಲು ಉದ್ದೇಶಿಸ ಲಾಗಿದೆ. ಗುಬ್ಬಚ್ಚಿ ಪಕ್ಷಿ ಮಾನವನ ಸನಿಹದಲ್ಲಿ ವಾಸಿ ಸಲು ಅಪೇಕ್ಷಿಸುತ್ತದೆ. ಹೀಗಾಗಿ ಅವುಗಳು ನಮ್ಮ ಮನೆ ಆವರಣದಲ್ಲಿ ಗೂಡು ಕಟ್ಟಲು ಇಷ್ಟಪಡುತ್ತವೆ ಎಂದು ವಿವರಿಸಿದರು.

ಗುಬ್ಬಚ್ಚಿ ಗೂಡುಗಳನ್ನು ಉಚಿತವಾಗಿ ವಿತ ರಿಸುವ ಕಾರ್ಯಕ್ರಮ ಮುಂದಿನ ದಿನಗಳಲ್ಲೂ ಏರ್ಪಡಿಸಲಾಗುವುದು. ಆ ಸಂದರ್ಭದಲ್ಲಿ ನಮ್ಮಲ್ಲಿ ಲಭ್ಯವಿರುವಷ್ಟು ವಿತರಣೆ ಮಾಡಲಿದ್ದೇವೆ. ಜೊತೆಗೆ ಗುಬ್ಬಚ್ಚಿ ಕಂಡುಬರುವ ಪ್ರದೇಶದ ನಿವಾಸಿಗಳು ತಮ್ಮ ಮನೆ ಆವರಣದಲ್ಲಿ ಗೂಡು ಅಳವಡಿಸಿ ಕೊಳ್ಳಲು ಆಸಕ್ತಿ ವಹಿಸಿದರೆ ಸಾಧ್ಯವಿರುವಷ್ಟು ಅಳವಡಿಸಿಕೊಡಲಿದ್ದೇವೆ ಎಂದರು. ಜೆಡಿಜೆಸಿ ಉಪಾಧ್ಯಕ್ಷೆ ಕವಿತಾ ಜೀತೇಂದ್ರ ಪಲ್ರೀಚಾ, ಮಮತಾ ಪಲ್ರೀಚಾ, ಸಂತೋಷ್ ಜೀತೇಂದ್ರ ರಾಂಕ, ಪುಷ್ಪ ನಿರ್ಮಲ್ ಲೋಡಾ, ಲಕ್ಷ್ಮೀ ಅಶೋಕ ಪರ್ಲೇಚಾ, ದಿಲ್‍ಖುಷ್ ಕೋಟಾರಿ, ನಿಧಿ ಜೈನ್, ಕಾಂತ, ದೀಪ್ತಿ, ರಂಗೇಲಾ, ಮೀನಾ ಹಾಜರಿದ್ದರು.

 

Translate »