Tag: Mysuru

ನಕಲಿ ಐಪಿಎಸ್ ಅಧಿಕಾರಿ ಜೈಲಿಗೆ
ಮೈಸೂರು

ನಕಲಿ ಐಪಿಎಸ್ ಅಧಿಕಾರಿ ಜೈಲಿಗೆ

April 22, 2019

ಮೈಸೂರು: ಇನ್ಸ್‍ಪೆಕ್ಟರ್ ಯಾಮಾರಿಸಲು ಮುಂದಾಗಿದ್ದ ಮೈಸೂರಿನ ನಕಲಿ ಐಪಿಎಸ್ ಅಧಿಕಾರಿಯನ್ನು ಕೆ.ಆರ್. ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಮೈಸೂರಿನ ವಿಜಯನಗರ 3ನೇ ಹಂತ, 3ನೇ ಮೇನ್, ಎ-ಬ್ಲಾಕ್ ನಿವಾಸಿ ಲೇಟ್ ನಿಜಲಿಂಗಪ್ಪ ಅವರ ಮಗ ಸಿ.ಎನ್. ದಿಲೀಪ್ (35) ಎಂಬುವನೇ ಐಪಿಎಸ್ ಅಧಿಕಾರಿ ಸೋಗಿನಲ್ಲಿ ಪೊಲೀಸ್ ಕಾರು ವ್ಯವಸ್ಥೆ ಮಾಡುವಂತೆ ದುಂಬಾಲು ಬಿದ್ದು ಸಿಕ್ಕಿರುವ ಆಸಾಮಿ. ಮಂಡ್ಯದ ಇಂಜಿನಿಯರಿಂಗ್ ಕಾಲೇಜೊಂದರಲ್ಲಿ ಓದಿ ವಿಶ್ವೇಶ್ವರಯ್ಯ ಟೆಕ್ನಿಕಲ್ ಯೂನಿವರ್ಸಿಟಿಯಿಂದ ಬಿಇ ಪದವಿ ಪಡೆದಿರುವ ದಿಲೀಪ್ ಐಎಎಸ್ ಮಾಡಲು ಪ್ರಯತ್ನಿಸಿ ವಿಫಲ ನಾಗಿದ್ದ…

ಪಶ್ಚಿಮ ಬಂಗಾಳ 15 ವರ್ಷಗಳ ಹಿಂದಿನ ಬಿಹಾರದಂತಾಗಿದೆ
ಮೈಸೂರು

ಪಶ್ಚಿಮ ಬಂಗಾಳ 15 ವರ್ಷಗಳ ಹಿಂದಿನ ಬಿಹಾರದಂತಾಗಿದೆ

April 22, 2019

ಕೋಲ್ಕತಾ: ಹಾಲಿ ಪಶ್ಚಿಮ ಬಂಗಾಳ ರಾಜ್ಯ ಈ ಹಿಂದೆ ಅಂದರೆ 10-15 ವರ್ಷಗಳ ಹಿಂದಿನ ಬಿಹಾರದಂತಾಗಿದ್ದು, ಇಲ್ಲಿನ ಪ್ರಜೆಗಳಿಗೆ ಚುನಾವಣೆ ಮತ್ತು ಜನಪ್ರತಿನಿಧಿಗಳ ಮೇಲೆ ನಂಬಿಕೆಯೇ ಇಲ್ಲದಂತಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗದ ವಿಶೇಷ ವೀಕ್ಷ ಕರು ಅಭಿಪ್ರಾಯಪಟ್ಟಿದ್ದಾರೆ. ಚುನಾವಣಾ ಆಯೋಗದ ವತಿಯಿಂದ ಪಶ್ಚಿಮ ಬಂಗಾಳಕ್ಕೆ ವಿಶೇಷ ವೀಕ್ಷಕ ರಾಗಿ ನೇಮಕರಾಗಿರುವ ಅಜಯ್ ವಿ. ನಾಯಕ್ ಅವರು ಖಾಸಗಿ ಮಾಧ್ಯಮದೊಂದಿಗೆ ಈ ಬಗ್ಗೆ ಮಾತನಾಡಿದ್ದು, ಚುನಾವಣಾ ಆಯೋಗದ ವಿಶೇಷ ವೀಕ್ಷಕನಾಗಿ ನಾನು ರಾಜ್ಯಾದ್ಯಂತ ಪ್ರವಾಸ ಮಾಡಿದ್ದೇನೆ. ನನ್ನ…

ಮತದಾರರ ಪಟ್ಟಿಯಿಂದ 1.5 ಲಕ್ಷಕ್ಕೂ ಹೆಚ್ಚು ಹೆಸರು ನಾಪತ್ತೆ, ಆಯೋಗದಿಂದ ತನಿಖೆಗೆ ಆದೇಶ
ಮೈಸೂರು

ಮತದಾರರ ಪಟ್ಟಿಯಿಂದ 1.5 ಲಕ್ಷಕ್ಕೂ ಹೆಚ್ಚು ಹೆಸರು ನಾಪತ್ತೆ, ಆಯೋಗದಿಂದ ತನಿಖೆಗೆ ಆದೇಶ

April 22, 2019

ಬೆಂಗಳೂರು: ಭಾರೀ ಸಂಖ್ಯೆಯ ಅರ್ಹ ಮತದಾರರು ಮತದಾನ ಕೇಂದ್ರಗಳಿಗೆ ಹೋದಾಗ ಮತಪಟ್ಟಿಯಲ್ಲಿ ತಮ್ಮ ಹೆಸರು ನಾಪತ್ತೆಯಾಗಿರುವುದನ್ನು ಕಂಡು ಆತಂಕಿತರಾಗಿದ್ದಾರೆ. ಹಲವಾರು ಜನರು ಈ ಬಗ್ಗೆ ದೂರು ಸಲ್ಲಿಸಿದ ಬಳಿಕ ರಾಜ್ಯ ಚುನಾವಣಾ ಆಯೋಗವು ಹೆಸರುಗಳ ನಾಪತ್ತೆ ಕುರಿತಂತೆ ವಿಚಾರಣೆಗೆ ಆದೇಶ ನೀಡಿದೆ. ನೂರಾರು ಜನರು ತಮ್ಮ ಹೆಸರನ್ನು ಯಾವ ಕಾರಣಕ್ಕಾಗಿ ಪಟ್ಟಿಯಿಂದ ಕೈಬಿಡಲಾಗಿದೆ ಎನ್ನುವುದನ್ನೇ ತಿಳಿಯದೆ ಮತದಾನ ಮಾಡಲೂ ಅವಕಾಶವಿಲ್ಲದೆ ನಿರಾಸೆಯಿಂದ ಹಿಂತಿರುಗಬೇಕಾಗಿ ಬಂದಿತ್ತು. ಗುರುವಾರ (ಏ.18)ರಂದು ಕರ್ನಾಟಕ ದಲ್ಲಿ ಮೊದಲ ಹಂತದ ಮತದಾನ ನಡೆದಿದ್ದು ಆ…

7ನೇ ತರಗತಿ ವಿದ್ಯಾರ್ಥಿ ನೇಣಿಗೆ ಶರಣು
ಮೈಸೂರು

7ನೇ ತರಗತಿ ವಿದ್ಯಾರ್ಥಿ ನೇಣಿಗೆ ಶರಣು

April 22, 2019

ಮೈಸೂರು: ಖಿನ್ನತೆಗೊಳಗಾಗಿದ್ದ 7ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿ ತನ್ನ ತನ್ನ ಹುಟ್ಟು ಹಬ್ಬದಂದು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ಜನತಾನಗರದಲ್ಲಿ ಶನಿ ವಾರ ಮಧ್ಯಾಹ್ನ ಸಂಭವಿಸಿದೆ. ಜನತಾನಗರ 10ನೇ ಕ್ರಾಸ್ ನಿವಾಸಿ ರವಿ ಎಂಬುವರ ಪುತ್ರ ಗಣೇಶ(13) ನೇಣಿಗೆ ಶರಣಾದ ವಿದ್ಯಾರ್ಥಿ. ಕೆಲ ಸಕ್ಕೆ ಹೋಗಿ ಸಂಜೆ ಹಿಂದಿರುಗಿದಾಗ ಪುತ್ರ ಮನೆಯ ಕೊಠಡಿಯಲ್ಲಿ ನೇಣು ಹಾಕಿಕೊಂಡು ಸಾವನ್ನಪ್ಪಿರುವುದು ತಂದೆ-ತಾಯಿಯರಿಗೆ ತಿಳಿಯಿತು. ಕಳೆದ ಒಂದು ವಾರದಿಂದ ಖಿನ್ನತೆ ಗೊಳಗಾಗಿ ಬಳಲುತ್ತಿದ್ದ ಗಣೇಶ ಶನಿ ವಾರ ಹುಟ್ಟುಹಬ್ಬ…

ನೀರಿನ ಪ್ರಮಾಣ ಕುಸಿದಿದ್ದರೂ ಕುಕ್ಕರಹಳ್ಳಿ ಕೆರೆಯಲ್ಲಿ ಮೀನುಗಾರಿಕೆ
ಮೈಸೂರು

ನೀರಿನ ಪ್ರಮಾಣ ಕುಸಿದಿದ್ದರೂ ಕುಕ್ಕರಹಳ್ಳಿ ಕೆರೆಯಲ್ಲಿ ಮೀನುಗಾರಿಕೆ

April 22, 2019

ಮೈಸೂರು: ಮಳೆ ಕೊರತೆ ಯಿಂದ ಮೈಸೂರಿನ ಪ್ರಮುಖ ಕೆರೆ ಗಳಾದ ಕಾರಂಜಿ ಹಾಗೂ ಲಿಂಗಾಂಬುಧಿ ಕೆರೆ ಸಂಪೂರ್ಣವಾಗಿ ಬತ್ತಿಹೋಗಿದ್ದು, ಪಕ್ಷಿಗಳು ವಲಸೆ ಬಂದಿರುವ ಕುಕ್ಕರಹಳ್ಳಿ ಕೆರೆಯಲ್ಲಿ ನೀರಿನ ಪ್ರಮಾಣ ಕುಸಿದಿದ್ದರೂ ಮೀನುಗಾರಿಕೆ ನಡೆಸುತ್ತಿರುವುದಕ್ಕೆ ಪಕ್ಷಿ ಪ್ರಿಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಗೆ ಕುಕ್ಕರಹಳ್ಳಿ ಕೆರೆ ಸೇರುತ್ತದೆಯಾದರೂ ಕರ್ನಾಟಕ ಮೀನು ಮಹಾಮಂಡಳಕ್ಕೆ ಮೀನುಗಾರಿಕೆ ನಡೆಸಲು ಟೆಂಡರ್ ನೀಡಿದೆ. ಇದರಿಂದ ಕುಕ್ಕರಹಳ್ಳಿ ಕೆರೆ ಸೇರಿದಂತೆ ಬಹುತೇಕ ಎಲ್ಲಾ ಕೆರೆಗಳಿಗೂ ಮೀನು ಮಹಾಮಂಡಳದ ವತಿಯಿಂದಲೇ ಮೀನಿನ ಮರಿ ಬಿಡಲಾಗುತ್ತದೆ….

ನೀರಿಲ್ಲದೇ ಸೊರಗುತ್ತಿರುವ ಮೀಡಿಯನ್ ಗಿಡಗಳು
ಮೈಸೂರು

ನೀರಿಲ್ಲದೇ ಸೊರಗುತ್ತಿರುವ ಮೀಡಿಯನ್ ಗಿಡಗಳು

April 22, 2019

ಮೈಸೂರು: ಹಸಿರೀಕರಣ ಉಳಿಸಿಕೊಂಡು ನಗರದ ಸೌಂದರ್ಯ ವೃದ್ಧಿಸುವ ಸಲುವಾಗಿ ಮೈಸೂರಿನ ಕೆಲವು ಕಡೆ ರಸ್ತೆ ವಿಭಜಕದಲ್ಲಿ ಬೆಳೆಸಿದ್ದ ಗಿಡಗಳು ನೀರುಣಿಸದ ಕಾರಣ ಒಣಗುತ್ತಿವೆ. ಮೈಸೂರಿನ ಬಂಬೂ ಬಜಾರ್ ಬಳಿ ಅಂಧರ ಶಾಲೆ ಎದುರು ರಸ್ತೆ ವಿಭಜಕದಲ್ಲಿ ಬೆಳೆಸಿದ್ದ ಗಿಡಗಳು ಒಣಗಿ ಸೊರಗುತ್ತಿದ್ದು, ಪಾಲಿಕೆ ವತಿಯಿಂದ ಆಗಿಂದಾಗ್ಗೆ ನೀರು ಹಾಕದ ಕಾರಣ ಬೇಸಿಗೆ ಬಿಸಿಲಿಗೆ ಗಿಡಗಳು ಒಣಗಿವೆ. ಸ್ವಚ್ಛ ಭಾರತ ಅಭಿಯಾನದಡಿ ಸ್ವಚ್ಛ ಸರ್ವೇಕ್ಷಣೆಗೂ ಮುಂಚೆ ಮೈಸೂರು ಮಹಾನಗರ ಪಾಲಿಕೆಯು ಬಂಬೂ ಬಜಾರ್ ರಸ್ತೆ, ಹಾರ್ಡಿಂಜ್ ಸರ್ಕಲ್ ನಿಂದ…

ಮಹಾರಾಣಿ ಕಾಮರ್ಸ್ ಕಾಲೇಜು ಆವರಣದಲ್ಲಿ ಭದ್ರತಾ ಸಿಬ್ಬಂದಿಗಾಗಿ ಮೊಬೈಲ್ ಟಾಯ್ಲೆಟ್
ಮೈಸೂರು

ಮಹಾರಾಣಿ ಕಾಮರ್ಸ್ ಕಾಲೇಜು ಆವರಣದಲ್ಲಿ ಭದ್ರತಾ ಸಿಬ್ಬಂದಿಗಾಗಿ ಮೊಬೈಲ್ ಟಾಯ್ಲೆಟ್

April 22, 2019

ಮೈಸೂರು: ಲೋಕಸಭಾ ಚುನಾವಣೆಯ ಇವಿಎಂಗಳನ್ನು ಕಾಯಲು ನೇಮಿಸಿರುವ ಪೊಲೀಸ್ ಸಿಬ್ಬಂದಿಗಳಿಗಾಗಿ ಮೈಸೂರಿನ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಆವರಣದಲ್ಲಿ ಮೊಬೈಲ್ ಟಾಯ್ಲೆಟ್‍ಗಳನ್ನು ನಿರ್ಮಿಸಲಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ತಿಳಿಸಿದ್ದಾರೆ. ಸ್ಟ್ರಾಂಗ್ ರೂಂ ಭದ್ರತೆಗಾಗಿ ನಿಯೋಜಿಸಿರುವ ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ ಸಿಬ್ಬಂದಿ ಗಳು ಮಹಾರಾಣಿ ಕಾಲೇಜಿನ ಕಟ್ಟಡ ಪ್ರವೇಶಿಸಲು ಅವಕಾಶ ನೀಡದಿರುವುದರಿಂದ ಶೌಚಾಲಯಕ್ಕೆ ಹೋಗಲು ತೀವ್ರ ತೊಂದರೆಯಾಗುತ್ತಿದೆ ಎಂದು ಸ್ಥಳೀಯ ಸಿವಿಲ್ ಪೊಲೀಸರು ತಮ್ಮ ಅಳಲು ತೋಡಿಕೊಂಡಿದ್ದರು. ಈ ಸಂಬಂಧ ಸಂಪರ್ಕಿಸಿದ…

ಪಾರಂಪರಿಕ ಹಾಸು ಆಟಗಳ ಅನಾವರಣ
ಮೈಸೂರು

ಪಾರಂಪರಿಕ ಹಾಸು ಆಟಗಳ ಅನಾವರಣ

April 22, 2019

ಮೈಸೂರು: ರಣ ತಂತ್ರದ ಚದುರಂಗದಾಟ… ಬದುಕಿನ ಪಾಠ ಹೇಳುವ ಪಗಡೆಯಾಟ… ಸಂಘಟನಾ ಶಕ್ತಿಯ ಮಹತ್ವ ಸಾರುವ ಹುಲಿಕಟ್ಟಿ ನಾಟ… ವಿವೇಚನಾಶಕ್ತಿ ಬೆಳೆಸುವ ಸಾಲು ಮನೆಯಾಟ… ಹೀಗೆ 100ಕ್ಕೂ ಹೆಚ್ಚು ಮೈಸೂರು ಪರಂಪರೆ ಮಾತ್ರವಲ್ಲದೆ, ಇಡೀ ಭಾರತದ ಪರಂಪರೆಯಲ್ಲಿ ಹಾಸು ಹೊಕ್ಕ ಹಾಸು ಆಟಗಳ ಸಾಮ್ರಾಜ್ಯವೇ ಅಲ್ಲಿ ತಲೆ ಎತ್ತಿದೆ. ನೀತಿ ಪಾಠ ಬೋಧಿಸಿ ಬದುಕುವ ಕಲೆ ಕಲಿಸುವ ಹಾಗೂ ಬೌದ್ಧಿಕ ಸಾಮಥ್ರ್ಯ ವೃದ್ಧಿಸುವ ಈ ಜನಪದ ಕಲೆಗಳು ಆಧು ನಿಕತೆಯ ಭರಾಟೆಯಲ್ಲಿ ಕಣ್ಮರೆಯಾಗುವ ಈ ಸಂದರ್ಭದಲ್ಲಿ ಅವುಗಳಿಗೆ…

ತೃಪ್ತಿ, ಮಾನವೀಯತೆ ಮೈಗೂಡಿಸಿ ಸಮಾಜದಲ್ಲಿ ಶಾಂತಿ-ಸೌಹಾರ್ದತೆ ಮೂಡಿಸಿ
ಮೈಸೂರು

ತೃಪ್ತಿ, ಮಾನವೀಯತೆ ಮೈಗೂಡಿಸಿ ಸಮಾಜದಲ್ಲಿ ಶಾಂತಿ-ಸೌಹಾರ್ದತೆ ಮೂಡಿಸಿ

April 22, 2019

ಮೈಸೂರು: ಯುವ ಜನಾಂಗದಲ್ಲಿ ತೃಪ್ತಿ ಮತ್ತು ಮಾನವೀಯತೆ ಅಂಶಗಳನ್ನು ಮೈಗೂಡಿಸಿ ಸಮಾಜದಲ್ಲಿ ಶಾಂತಿ-ಸೌಹಾರ್ದ ಮೂಡಿಸಿ ಎಂದು ಕರ್ನಾಟಕ ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಅವರು ಇಂದಿಲ್ಲಿ ಸಲಹೆ ನೀಡಿದರು. ಮೈಸೂರಿನ ಹುಣಸೂರು ರಸ್ತೆಯ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲ ಯದ ಘಟಿಕೋತ್ಸವ ಭವನದಲ್ಲಿ ಏರ್ಪ ಡಿಸಿದ್ದ ಲಯನ್ಸ್ ಕ್ಲಬ್ಸ್ ಇಂಟರ್ ನ್ಯಾಷನಲ್ (ಡಿಸ್ಟ್ರಿಕ್ಟ್ 317ಂ)ನ 43ನೇ ವಾರ್ಷಿಕ ಜಿಲ್ಲಾ ಸಮಾವೇಶವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ತಾವು ಹಲವು ಹುದ್ದೆಗಳನ್ನು ನಿರ್ವಹಿ ಸಿದ್ದರೂ,…

ಜನಸಂಖ್ಯಾ ಸ್ಫೋಟದಿಂದ ಪರಿಸರ ಅಸಮತೋಲನ
ಮೈಸೂರು

ಜನಸಂಖ್ಯಾ ಸ್ಫೋಟದಿಂದ ಪರಿಸರ ಅಸಮತೋಲನ

April 22, 2019

ಮೈಸೂರು: ಮಿತಿ ಮೀರುತ್ತಿರುವ ಜನಸಂಖ್ಯಾ ಸ್ಫೋಟದ ಹಿನ್ನೆಲೆಯಲ್ಲಿ ಪರಿಸರದ ಸಮತೋಲನ ಹದಗೆಡು ತ್ತಿದ್ದು, ಅರಣ್ಯ, ವನ್ಯಸಂಪತ್ತಿನ ಸಂರಕ್ಷಣೆಯಲ್ಲಿ ಯುವಜನರ ಪಾತ್ರ ಮುಖ್ಯವಾಗಿದೆ ಎಂದು ಕೇಂದ್ರ ಮೃಗಾಲಯ ಪ್ರಾಧಿ ಕಾರದ ಸದಸ್ಯ ಸಿ.ಎಸ್.ಯಾಲಕ್ಕಿ ಅಭಿಪ್ರಾಯಪಟ್ಟಿದ್ದಾರೆ. ಮೈಸೂರಿನ ಮೃಗಾಲಯದಲ್ಲಿ ಇಂದಿನಿಂದ ಆರಂಭವಾದ ಮೊದಲ ತಂಡದ ಬೇಸಿಗೆ ಶಿಬಿರದಲ್ಲಿ ಮಾತನಾಡಿದ ಅವರು, ಈ ಹಿಂದೆ 23 ಕೋಟಿ ಜನಸಂಖ್ಯೆ ಹೊಂದಿದ್ದ ನಮ್ಮ ದೇಶದಲ್ಲಿ ಪ್ರಸ್ತುತ 130 ಕೋಟಿ ಜನರಿದ್ದಾರೆ. ಅಂದಿನಿಂದ ಇಂದಿನವರೆಗೂ ಜನಸಂಖ್ಯಾ ಸ್ಫೋಟ ಹೆಚ್ಚಾಗುತ್ತಿದ್ದರೂ ಕೃಷಿ ಭೂಮಿ ಪ್ರಮಾಣ ಹೆಚ್ಚಾಗಿಲ್ಲ….

1 16 17 18 19 20 194
Translate »