ಮೈಸೂರು: ದ್ಯಾ ಸಿನಿಹೌಸ್ ಬ್ಯಾನರ್‍ನಡಿ ನಿರ್ಮಾಣಗೊಂಡಿರುವ ಹಳ್ಳಿಯೊಂದರಲ್ಲಿ ನಡೆದ ನೈಜ ಘಟನೆಯಾಧಾರಿತ ಚಿತ್ರ `ಪರಸಂಗ-ತಿಮ್ಮನ ಕಥೆ’ ಜು.6ರಂದು ರಾಜ್ಯಾದ್ಯಂತ ಬಿಡುಗಡೆಗೊಳ್ಳಲಿದೆ ಎಂದು ಚಿತ್ರ ನಿರ್ದೇಶಕ ಕೆ.ಎಂ.ರಘು ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಸನ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದ ನೈಜ ಘಟನೆಯ ಕಥಾಹಂದರದ ಸಿನಿಮಾ ಇದಾಗಿದ್ದು, ಚಿತ್ರದ ಬಹುತೇಕ ಚಿತ್ರೀಕರಣ ಮೈಸೂರು ನಗರ ಸೇರಿದಂತೆ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ನಡೆದಿರುವುದು ವಿಶೇಷ ಎಂದು ಹೇಳಿದರು. ನಾಯಕರಾಗಿ ಮಿತ್ರ ಹಾಗೂ ನಾಯಕಿಯಾಗಿ ಅಕ್ಷತಾ…
ಇಬ್ಬರ ಸಾಹಸಗಾಥೆಯ ಚಿತ್ರ`ವೀ..ಟು’ ಜೂ.29ಕ್ಕೆ ಬಿಡುಗಡೆ
June 27, 2018ಮೈಸೂರು: ಒಂದು ಲೋ ಬಜೆಟ್ ಸಿನಿಮಾವಾದರೂ ಪಾತ್ರಧಾರಿಗಳು, ತಾಂತ್ರಿಕ ವರ್ಗ ಸೇರಿದಂತೆ ಒಂದಿಷ್ಟು ಮಾನವ ಸಂಪನ್ಮೂಲ ಬೇಕುಬೇಕು. ಚಿತ್ರವೊಂದು ಸಿದ್ಧಗೊಳ್ಳಲು ಆಯಾಯ ಕೆಲಸ-ಕಾರ್ಯಗಳಿಗೆ ಪರಿಣಿತರು ತಂಡ ಅಗತ್ಯವಾಗಿ ಇರಲೇಬೇಕು ಎಂಬ ಸಿದ್ಧ ಸೂತ್ರಕ್ಕೆ ಸೆಡ್ಡು ಹೊಡೆದಿರುವ ಮೈಸೂರಿನ ಇಬ್ಬರು ನಟರು ಎಲ್ಲವನ್ನೂ ತಾವೇ ಮಾಡಿ ಸಿನಿಮಾ ಬಿಡುಗಡೆ ಮಾಡಲು ತಯಾರಿ ನಡೆಸಿದ್ದಾರೆ. ಕಥೆ-ಚಿತ್ರಕಥೆ, ಅಭಿನಯ, ಛಾಯಾಗ್ರಾಹಣ, ಸಂಗೀತ, ಸಂಕಲನ ಎಲ್ಲವನ್ನೂ ಇಬ್ಬರೇ ಮಾಡಿರುವ ಕನ್ನಡ ಸಿನಿಮಾ `ವೀ..ಟು’. ಜೂ.29ರಂದು ಮೈಸೂರು, ಮಂಡ್ಯ ಸೇರಿದಂತೆ ರಾಜ್ಯಾದ್ಯಂತ ಸಿನಿಮಾ ಬಿಡುಗಡೆ…
ಮತ್ತೆ ಚಿತ್ರರಂಗದತ್ತ ಮೋಹಕ ತಾರೆ?
June 10, 2018ಬೆಂಗಳೂರು: – ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ ಬಳಿಕ ಚಿತ್ರ ರಂಗದಿಂದ ದೂರ ಉಳಿದಿದ್ದ ಸ್ಯಾಂಡಲ್‍ವುಡ್ ಕ್ವೀನ್, ಮೋಹಕ ತಾರೆ ರಮ್ಯಾ ಅವರು ಮತ್ತೆ ಚಿತ್ರರಂಗದತ್ತ ಮುಖ ಮಾಡುವ ಸೂಚನೆ ನೀಡಿದ್ದಾರೆ. ಈ ಬಗ್ಗೆ ಸ್ವತಃ ರಮ್ಯಾ ಅವರೇ ಸ್ಪಷ್ಟನೆ ನೀಡಿದ್ದಾರೆ. ನಟ ರಕ್ಷಿತ್ ಶೆಟ್ಟಿಯವರ ‘ಅವನೇ ಶ್ರೀಮನ್ನಾರಾಯಣ’ ಚಿತ್ರದ ಟೀಸರ್‍ಗೆ ರಮ್ಯಾ ಅವರು ಮೆಚ್ಚುಗೆ ನೀಡಿದ್ದು, ನಂತರ ರಕ್ಷಿತ್ ಶೆಟ್ಟಿಯವರು ಕೇಳಿದ ಪ್ರಶ್ನೆಗೆ ಕುತೂಹಲಭರಿತ ಉತ್ತರವನ್ನು ನೀಡಿದ್ದಾರೆ. ಈ ಹಿಂದೆ ರಕ್ಷಿತ್ ಶೆಟ್ಟಿಯವರಿಗೆ ಟ್ವೀಟ್ ಮಾಡಿದ್ದ ರಮ್ಯಾ…