ಮತ್ತೆ ಚಿತ್ರರಂಗದತ್ತ ಮೋಹಕ ತಾರೆ?
ಮೈಸೂರು

ಮತ್ತೆ ಚಿತ್ರರಂಗದತ್ತ ಮೋಹಕ ತಾರೆ?

June 10, 2018

ಬೆಂಗಳೂರು: – ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ ಬಳಿಕ ಚಿತ್ರ ರಂಗದಿಂದ ದೂರ ಉಳಿದಿದ್ದ ಸ್ಯಾಂಡಲ್‍ವುಡ್ ಕ್ವೀನ್, ಮೋಹಕ ತಾರೆ ರಮ್ಯಾ ಅವರು ಮತ್ತೆ ಚಿತ್ರರಂಗದತ್ತ ಮುಖ ಮಾಡುವ ಸೂಚನೆ ನೀಡಿದ್ದಾರೆ. ಈ ಬಗ್ಗೆ ಸ್ವತಃ ರಮ್ಯಾ ಅವರೇ ಸ್ಪಷ್ಟನೆ ನೀಡಿದ್ದಾರೆ. ನಟ ರಕ್ಷಿತ್ ಶೆಟ್ಟಿಯವರ ‘ಅವನೇ ಶ್ರೀಮನ್ನಾರಾಯಣ’ ಚಿತ್ರದ ಟೀಸರ್‍ಗೆ ರಮ್ಯಾ ಅವರು ಮೆಚ್ಚುಗೆ ನೀಡಿದ್ದು, ನಂತರ ರಕ್ಷಿತ್ ಶೆಟ್ಟಿಯವರು ಕೇಳಿದ ಪ್ರಶ್ನೆಗೆ ಕುತೂಹಲಭರಿತ ಉತ್ತರವನ್ನು ನೀಡಿದ್ದಾರೆ.

ಈ ಹಿಂದೆ ರಕ್ಷಿತ್ ಶೆಟ್ಟಿಯವರಿಗೆ ಟ್ವೀಟ್ ಮಾಡಿದ್ದ ರಮ್ಯಾ ಅವರು, ‘ಅವನೇ ಶ್ರೀಮನ್ನಾರಾಯಣ’ ಚಿತ್ರದ ಟೀಸರ್ ಚೆನ್ನಾಗಿದೆ. ನೀವು ಕನ್ನಡ ಚಿತ್ರರಂಗದಲ್ಲಿ ಹೊಸತೇನನ್ನೋ ಮಾಡಲು ಹೊರಟಿ ದ್ದೀರಿ. ನಾನು ಚಿತ್ರರಂಗವನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನಿಮ್ಮ ಮೇಲೆ ಬಹಳ ಹೆಮ್ಮೆಯಿದೆ. ನಿಮ್ಮ ಕೆಲಸಕ್ಕೆ ಸಂತಸವಿದೆ. ‘ಅವನೇ ಶ್ರೀಮನ್ನಾರಾಯಣ’ ಚಿತ್ರ ತಂಡಕ್ಕೆ ಹಾಗೂ ನಿಮಗೆ ಶುಭವಾಗಲಿ ಎಂದು ಹೇಳಿದ್ದರು.

Translate »