ಮೈಸೂರು: ವಿಜಯಧ್ವನಿ ಪ್ರತಿಷ್ಠಾನದ ಪ್ರಥಮ ವರ್ಷದ ವಾರ್ಷಿಕೋತ್ಸವ, ಹುಬ್ಬಳ್ಳಿಯ ಕಾವ್ಯಮಿತ್ರ ಪ್ರಕಾಶನದ ಉದ್ಘಾಟನೆ ಹಾಗೂ ಕೃತಿ ಬಿಡುಗಡೆ ಕಾರ್ಯಕ್ರಮವನ್ನು ಜೂ.10ರಂದು ಜೆಎಲ್‍ಬಿ ರಸ್ತೆಯ ರೋಟರಿ ಸಭಾಂಗಣ ದಲ್ಲಿ ಆಯೋಜಿಸಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷೆ ಆರ್.ಸಿ.ರಾಜಲಕ್ಷ್ಮೀ ತಿಳಿಸಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಮಧ್ಯಾಹ್ನ 2.30ಕ್ಕೆ ಸಾಹಿತಿ ಜಯಪ್ಪ ಹೊನ್ನಾಳಿ ಸಮಾರಂಭ ಉದ್ಘಾಟಿಸಲಿದ್ದು, ಕೌಟಿಲ್ಯ ವಿದ್ಯಾಸಂಸ್ಥೆಯ ಸಂಸ್ಥಾಪಕ ಕೌಟಿಲ್ಯ ರಘು ಅಧ್ಯಕ್ಷತೆ ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಕವಿ ನಿತೀನ್ ನೀಲಕಂಠೆ ಅವರ `ಕೂಲಿಂಗ್ ಗ್ಲಾಸ್ ಕನಸುಗಳು’ ಕವನ ಸಂಕಲನವನ್ನು ಸಾಹಿತಿ ಡಾ. ಹೆಚ್.ಎಸ್. ಸತ್ಯನಾರಾ ಯಣ ಬಿಡುಗಡೆ ಮಾಡಲಿದ್ದಾರೆ ಎಂದು ಹೇಳಿದರು. ಅತಿಥಿಗಳಾಗಿ ಕಾ.ಮಿ. ಪ್ರಕಾ ಶನದ ಗೌರವ ಸಲಹೆಗಾರ ಸೋಮುರೆಡ್ಡಿ, ಕಾವ್ಯ ಮಿತ್ರ ಪ್ರಕಾಶನದ ರೇಖಾಕೊಟ್ಟೂರು ಸೇರಿದಂತೆ ಮತ್ತಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದರು. ಪ್ರತಿಷ್ಠಾನದ ಬಿ.ಪಿ. ಚೆಲುವರಾಜಚಾರ್, ದೊರೆಸ್ವಾಮಿ, ಸುಶ್ಮಿತಾ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.