ಮೈಸೂರು

ನಾಳೆ ‘ಸುಳಿ’ ವಿಮರ್ಶಾ ಸಂಕಲನ ಬಿಡುಗಡೆ

September 21, 2018

ಮೈಸೂರು: ಮೈಸೂರಿನ ಸ್ಪಂದನ ಸಾಂಸ್ಕೃತಿಕ ಪರಿಷತ್ತು ವತಿಯಿಂದ ಸೆ.22ರಂದು ಸಂಜೆ 5 ಗಂಟೆಗೆ ಕಲಾಮಂದಿರದ ಮನೆಯಂಗಳದಲ್ಲಿ ಹುಣಸೂರು ಸರ್ಕಾರಿ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ಬಿ.ನಂಜುಂಡಸ್ವಾಮಿ ಹರದನಹಳ್ಳಿ ಅವರ ‘ಸುಳಿ’ ವಿಮರ್ಶಾ ಸಂಕಲನ ಬಿಡುಗಡೆ ಸಮಾರಂಭ ಏರ್ಪಡಿಸಲಾಗಿದೆ.

ಎಂಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಜಿ.ಡಿ.ಹರೀಶ್‍ಗೌಡ ಸಮಾರಂಭವನ್ನು ಉದ್ಘಾಟಿ ಸಲಿದ್ದು, ಸ್ಪಂದನ ಸಾಂಸ್ಕೃತಿಕ ಪರಿಷತ್ತು ಸಂಸ್ಥಾಪಕ ಅಧ್ಯಕ್ಷ ಟಿ.ಸತೀಶ್ ಜವರೇಗೌಡ ಅಧ್ಯಕ್ಷತೆ ವಹಿಸುವರು. ಮೈಸೂರು ವಿವಿ ಕುವೆಂಪು ಅಧ್ಯಯನ ಸಂಸ್ಥೆ ನಿರ್ದೇಶಕ ಡಾ. ನೀಲಗಿರಿ ತಳವಾರ ಪುಸ್ತಕ ಬಿಡುಗಡೆ ಮಾಡುವರು. ಮುಕ್ತ ವಿವಿ ಕನ್ನಡ ಪ್ರಾಧ್ಯಾಪಕ ಡಾ.ಪಿ.ಮಣಿ ಪುಸ್ತಕ ಕುರಿತು ಮಾತನಾಡುವರು. ಇದೇ ವೇಳೆ ಮೈಸೂರು ವಿವಿಯ ಹಾಸನದ ಹೇಮ ಗಂಗೋತ್ರಿ ಸ್ನಾತಕೋತ್ತರ ಕೇಂದ್ರದ ನೂತನ ನಿರ್ದೇಶಕ ಡಾ.ಮಧು ವನ ಶಂಕರ್ ಅವರನ್ನು ಸನ್ಮಾನಿಸಲಾಗುವುದು. ಕೃತಿಕಾರ ಡಾ.ನಂಜುಂಡಸ್ವಾಮಿ ಹರದನ ಹಳ್ಳಿ ಮತ್ತು ಪ್ರಕಾಶಕ ಓಂಕಾರಪ್ಪ ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.

Translate »