ಡಿ.16ರಂದು ಸಾಧಕರ ಸವಿ ಹೆಜ್ಜೆ, ಕಲಾನ್ವೇಷಕ  ತ್ರಯರು ಪುಸ್ತಕ ಬಿಡುಗಡೆ
ಮೈಸೂರು

ಡಿ.16ರಂದು ಸಾಧಕರ ಸವಿ ಹೆಜ್ಜೆ, ಕಲಾನ್ವೇಷಕ ತ್ರಯರು ಪುಸ್ತಕ ಬಿಡುಗಡೆ

December 6, 2018

ಮೈಸೂರು: ಮುದ್ರಣ ಮಾಧ್ಯಮಗಳ ಪ್ರೋತ್ಸಾಹದಿಂದ ಮೈಸೂರಿನ ರಾಮಾ ನುಜ ರಸ್ತೆಯಲ್ಲಿರುವ ಮೈಸೂರು ಆರ್ಟ್ ಗ್ಯಾಲರಿಗೆ 10 ವರ್ಷ ಸಂದಿದೆ. ಈ ಗ್ಯಾಲರಿ ಯಲ್ಲಿ ಪ್ರತಿ ತಿಂಗಳ 2ನೇ ಶನಿವಾರದಂದು `ಸಾಧಕರೊಂದಿಗೆ ಸಂವಾದ’ ಹಾಗೂ ರಾಜ್ಯದ ಹಲವಾರು ಭಾಗದಿಂದ ಬಂದ ಕಲಾವಿ ದರು ಉಚಿತವಾಗಿ ಕಲಾ ಪ್ರದರ್ಶನ ಮಾಡು ತ್ತಾರೆ. ಮೈಸೂರು ಆರ್ಟ್ ಗ್ಯಾಲರಿಯ 10ನೇ ವಾರ್ಷಿಕೋತ್ಸವ ಸಮಾರಂಭವನ್ನು ಡಿ.16 ರಂದು ಏರ್ಪಡಿಸಲಾಗಿದೆ. ಇದೇ ವೇಳೆ ರಾಮಾನುಜ ರಸ್ತೆಯಲ್ಲಿರುವ ಮೈಸೂರು ಆರ್ಟ್ ಗ್ಯಾಲರಿ ಹೊರತಂದಿರುವ ಲೇಖಕ ಎಲ್.ಶಿವಲಿಂಗಪ್ಪನವರ ‘ಕಲಾನ್ವೇಷಕ ತ್ರಯರು’ ಮತ್ತು ‘ಸಾಧಕರ ಸವಿಹೆಜ್ಜೆ’ ಪುಸ್ತಕಗಳು ಲೋಕಾರ್ಪಣೆಗೊಳ್ಳಲಿವೆ. ಸಾಧಕರ ಸವಿಹೆಜ್ಜೆ ಪುಸ್ತಕವು 2016-17ರಲ್ಲಿ ಸಾಧಕರೊಂದಿಗೆ ಸಂವಾದದಲ್ಲಿ ಭಾಗವಹಿಸಿದ್ದವರ ಸಂಕ್ಷಿಪ್ತ ಜೀವನವನ್ನು ಒಳಗೊಂಡಿದೆ. ಇದು 156 ಪುಟಗಳನ್ನು ಹೊಂದಿದ್ದು, ಬೆಲೆ ರೂ. 150 ಗಳು. ಕಲಾನ್ವೇಷಕ ತ್ರಯರು ಪುಸ್ತಕವನ್ನು ವೀರಶೈವ ಅನಾಥಾಲಯ ಕಾಂಪ್ಲೆಕ್ಸ್‍ನಲ್ಲಿರುವ ಶ್ರೀ ಚಾಮುಂಡೇಶ್ವರಿ ಎಂಟರ್‍ಪ್ರೈಸಸ್ ಹೊರ ತಂದಿದ್ದು, 128 ಪುಟಗಳನ್ನು ಹೊಂದಿದೆ. ಇದರ ಬೆಲೆ ರೂ. 100 ಗಳು.

Translate »