ಇಗ್ನೋದ ವಿವಿಧ ಕೋರ್ಸ್‍ಗಳಿಗೆ ಆನ್‍ಲೈನ್ ಪ್ರವೇಶಾತಿ ಆರಂಭ
ಮೈಸೂರು

ಇಗ್ನೋದ ವಿವಿಧ ಕೋರ್ಸ್‍ಗಳಿಗೆ ಆನ್‍ಲೈನ್ ಪ್ರವೇಶಾತಿ ಆರಂಭ

December 6, 2018

ಮೈಸೂರು: ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾನಿಲ ಯದ (ಐಜಿಎನ್‍ಓಯು) ವಿವಿಧ ಕೋರ್ಸ್‍ಗಳಿಗೆ ಆನ್‍ಲೈನ್ ಪ್ರವೇಶಾತಿ ಆರಂಭವಾಗಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ ಎಂದು ಇಗ್ನೋದ ಬೆಂಗಳೂರು ಪ್ರಾದೇಶಿಕ ಕೇಂದ್ರ ವಲಯದ ಸಹಾಯಕ ನಿರ್ದೇಶಕಿ ಡಾ.ಹೇಮಾಮಾಲಿನಿ ಇಂದಿಲ್ಲಿ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಭಾರತ ಸರ್ಕಾರದ ಮಾನವ ಸಂಪನ್ಮೂಲ ಸಚಿವಾಲಯದ ಅಧೀನದಲ್ಲಿ 1985ರಿಂದ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೇಂದ್ರೀಯ ವಿವಿ ಇಗ್ನೋ, ಶಿಕ್ಷಣ ವಂಚಿತರಿಗೆ, ದುರ್ಬಲರಿಗೆ ಹಾಗೂ ಆರ್ಥಿಕವಾಗಿ ಹಿಂದುಳಿದವರನ್ನು ಸುಶಿಕ್ಷಿತರನ್ನಾಗಿ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಪ್ರಸ್ತುತ ಶೈಕ್ಷಣಿಕ ಸಾಲಿನ ಸ್ನಾತಕ, ಪದವಿ, ಸ್ನಾತಕೋತ್ತರ ಡಿಪ್ಲೊಮಾ, ಸರ್ಟಿಫಿಕೇಟ್ ಮತ್ತು ಸರ್ಟಿಫಿಕೇಟ್ ಪ್ರೋಗ್ರಾಮ್‍ಗಳ ಪ್ರವೇಶಾತಿಯನ್ನು ಆರಂಭಿಸಿರುವುದಾಗಿ ತಿಳಿಸಿದರು.

ಜನವರಿ ಅವಧಿಯ ಆನ್‍ಲೈನ್ ಪ್ರವೇಶಾತಿಗೆ ಹಿಂದುಳಿದ, ಪರಿಶಿಷ್ಟರಿಗೆ, ತೃತೀಯ ಲಿಂಗಿಗಳಿಗೆ ಹಾಗೂ ನೇಕಾರ ಸಮುದಾಯದವರಿಗೆ ಸ್ನಾತಕ ಮತ್ತು ಸ್ನಾತಕೋತ್ತರ ಕೋರ್ಸ್‍ಗಳಿಗೆ ಉಚಿತ ಪ್ರವೇಶವಿದೆ. ಆಸಕ್ತರು www.ignou.ac.in ಇಲ್ಲಿ ಅರ್ಜಿ ಭರ್ತಿ ಮಾಡಬಹುದು. ವಿವರಗಳನ್ನು ಮೈಸೂರಿನ ಶೇಷಾದ್ರಿ ಅಯ್ಯರ್ ರಸ್ತೆಯಲ್ಲಿರುವ ವಿದ್ಯಾ ವರ್ಧಕ ಪ್ರಥಮ ದರ್ಜೆ ಕಾಲೇಜಿನಲ್ಲಿ ಪಡೆಯಬಹುದು. ಮಾಹಿತಿಗೆ ದೂ.0821- 2421619 ಸಂಪರ್ಕಿಸಬಹುದು. 18 ವರ್ಷ ಪೂರೈಸಿದ ಓದು-ಬರಹ ಬಲ್ಲವರೂ ಅರ್ಜಿ ಸಲ್ಲಿಸಬಹುದಾಗಿದ್ದು, ಅವರಿಗೆ ಬಿಪಿಓ ಎಂಬ 6 ತಿಂಗಳ ಕೋರ್ಸ್ ನಂತರ ಪದವಿಗೆ ಪ್ರವೇಶಾತಿ ನೀಡಲಾಗುವುದು. ಗ್ರೇಡ್ ರೀತಿಯಲ್ಲಿ ಫಲಿತಾಂಶ ನೀಡಲಾಗು ವುದು ಎಂದರು. ಸುದ್ದಿಗೋಷ್ಠಿಯಲ್ಲಿ ಡಾ.ಶ್ರೀಹರ್ಷ, ಸಿದ್ದರಾಜು ಉಪಸ್ಥಿತರಿದ್ದರು.

Translate »