ದಸರಾ ಆಹಾರ ಮೇಳದಲ್ಲಿ ಈ ಬಾರಿ ವಿದೇಶಿಗರಿಗೂ ಅವಕಾಶ ಕಲ್ಪಿಸಲು ನಿರ್ಧಾರ
ಮೈಸೂರು

ದಸರಾ ಆಹಾರ ಮೇಳದಲ್ಲಿ ಈ ಬಾರಿ ವಿದೇಶಿಗರಿಗೂ ಅವಕಾಶ ಕಲ್ಪಿಸಲು ನಿರ್ಧಾರ

September 21, 2018

ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಅಂಗವಾಗಿ ಏರ್ಪಡಿಸಲಾಗುವ ಬಾಯಲ್ಲಿ ನೀರೂರಿಸುವ ಆಹಾರ ಮೇಳದಲ್ಲಿ ಈ ಬಾರಿ ಜನರ ಅಭಿರುಚಿಗೆ ತಕ್ಕಂತೆ ವೈವಿಧ್ಯಮಯ ಖಾದ್ಯಗಳನ್ನು ಪರಿಚಯಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಆಹಾರ ಮೇಳದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಜತೆಗೆ ದೇಶೀಯ, ಖಂಡಾಂತರ ಆಹಾರ ಪದ್ಧತಿ ಮತ್ತು ಪ್ರಾದೇಶಿಕ ವೈವಿಧ್ಯದ ಊಟೋಪಚಾರಗಳನ್ನು ಕಳೆದ ವರ್ಷದಂತೆ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಮೈದಾನ ಮತ್ತು ಲಲಿತ್ ಮಹಲ್ ಪ್ಯಾಲೇಸ್ ಹೋಟೆಲ್ ಸಮೀಪದ ಮುಡಾ ಮೈದಾನದಲ್ಲಿ ಆಯೋಜಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಪಿ.ಶಿವಣ್ಣ ತಿಳಿಸಿದ್ದಾರೆ.

ಅ.10 ರಿಂದ 19 ರವರೆಗೆ ನಡೆಯುವ ಆಹಾರ ಮೇಳದಲ್ಲಿ ಗ್ರಾಮೀಣ ಮತ್ತು ಪಾರಂಪರಿಕ ಶೈಲಿಗಳು, ಸಿರಿಧಾನ್ಯ, ಸಾವಯವ ಕೃಷಿ ಅಡುಗೆಗಳು, ದಕ್ಷಿಣ ಕರ್ನಾಟಕ ಆಹಾರ ಪದ್ಧತಿ, ಉತ್ತರ ಕರ್ನಾಟಕ ಆಹಾರ ಪದ್ಧತಿ, ಪಂಜಾಬಿ, ರಾಜಸ್ಥಾನಿ, ಈಶಾನ್ಯ ಭಾರತ, ಆಂಧ್ರ, ಕೇರಳ, ತಮಿಳುನಾಡು, ಮರಾಠಿ ಶೈಲಿಯಲ್ಲಿ ಸಸ್ಯಹಾರಿ ಮತ್ತು ಶಾಖಾಹಾರಿ ಆಹಾರ ಪದ್ಧತಿ, ಕರಾವಳಿ, ಕೊಡಗು, ಮಲೆನಾಡು ಶೈಲಿ ಹಾಗೂ ಹೊಸದಾಗಿ ಅಂತರರಾಷ್ಟ್ರೀಯ ಟಿಬೆಟಿಯನ್, ಚೈನೀಸ್, ಇಟಾಲಿಯನ್, ಅಮೆರಿಕಾ, ಫ್ರೆಂಚ್ ಮತ್ತು ಆಫ್ರಿಕನ್ ಆಹಾರ ಪದ್ಧತಿ ಶೈಲಿಯ ಆಹಾರವನ್ನು ಪ್ರವಾಸಿಗರು ಸವಿಯಬಹುದಾಗಿದೆ ಎಂದರು.

ಸೆಲೆಬ್ರಿಟಿಗಳಿಂದ ಅಡುಗೆ ತಯಾರಿಕೆ: ಆಹಾರ ಮೇಳದ ಜನಪ್ರಿಯತೆಯನ್ನು ಹೆಚ್ಚಿ ಸುವ ಉದ್ದೇಶದಿಂದ ಬೊಂಬಾಟ್ ಭೋಜನ ಕಾರ್ಯಕ್ರಮ ಖ್ಯಾತಿಯ ಸಿಹಿ ಕಹಿ ಚಂದ್ರು, ಭಾನುವಾರದ ಬಾಡೂಟ ಖ್ಯಾತಿಯ ರಾಜೇಶ್ ಗೌಡ, ಒಗ್ಗರಣೆ ಡಬ್ಬಿ ಖ್ಯಾತಿಯ ಮುರಳಿ ಭಾಗವಹಿಸಲಿದ್ದಾರೆ. ಹಾಗೆಯೇ ಫುಡ್ ಕ್ರಾಫ್ಟ್ ಸಂಸ್ಥೆ, ಸಿಎಫ್‍ಟಿಆರ್‍ಐ, ಮೈಮುಲ್, ಸ್ತ್ರೀಶಕ್ತಿ ಸಂಘಗಳು ಸೇರಿದಂತೆ ವಿವಿಧ ಇಲಾಖೆಗಳಿಂದ ಅಡುಗೆ ತಯಾರಿಕೆಯ ನೇರ ಪ್ರಾತ್ಯಕ್ಷಿಕೆಯನ್ನು ನಡೆಸಲಾಗುವುದು.

ವಿದೇಶಿಗರಿಗೆ ಆದ್ಯತೆ: ಈ ಬಾರಿ ಆಹಾರ ಮೇಳದಲ್ಲಿ ಅಂತರರಾಷ್ಟ್ರೀಯ ಆಹಾರ ಪದ್ದತಿ, ಟಿಬೆಟಿಯನ್, ಚೈನೀಸ್, ಇಟಾಲಿ ಯನ್, ಅಮೆರಿಕಾ, ಫ್ರೆಂಚ್ ಹಾಗು ಆಫ್ರಿ ಕನ್ ಆಹಾರ ಪದ್ದತಿಯನ್ನು ಸವಿಯ ಬಹುದಾಗಿದೆ. ಈ ಹಿನ್ನೆಲೆಯಲ್ಲಿ ವಿದೇಶಿ ಗರಿಗೆ ಮಳಿಗೆ ಹಾಗೂ ಅಡುಗೆ ತಯಾ ರಿಕೆಯ ಬಗ್ಗೆ ಪ್ರಾತ್ಯಕ್ಷಿಕೆ ನೀಡಲು ಅವಕಾಶ ಮಾಡಿಕೊಡಲಾಗುತ್ತದೆ. ಈ ಸಂಬಂಧ ಮೈಸೂರು ವಿವಿಯಲ್ಲಿರುವ ವಿದೇಶಿ ವಿದ್ಯಾರ್ಥಿ ಗಳಿಗೆ ಸೂಚಿಸಲಾಗಿದೆ ಎಂದರು.

ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಸಂವಾದ: ಪ್ರತಿದಿನ ಸಂಜೆ ಸಾಂಸ್ಕೃತಿಕ ಕಲಾ ತಂಡಗಳಿಂದ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಅಡುಗೆ ತಯಾರಿಸುವ ಮತ್ತು ತಿನ್ನುವ ಸ್ಪರ್ಧೆಗಳನ್ನು ನಡೆಸಲಾಗುವುದು. ಈ ಬಾರಿ ಸಿರಿ ಧಾನ್ಯಗಳ ಬಗ್ಗೆ ಮಾಹಿತಿಯನ್ನು ನೀಡಲು ಡಾ. ಖಾದರ್ ಅವರನ್ನು ಕರೆಸಲಾಗಿದೆ. ಅಂತೆಯೇ ಆಹಾರ ಪದಾರ್ಥಗಳ ಬಗ್ಗೆ ಸಂವಾದ ಕಾರ್ಯಕ್ರಮಗಳನ್ನು ನಡೆಸ ಲಾಗುತ್ತದೆ ಎಂದು ಹೇಳಿದರು.

Translate »