ಮೂಲಭೂತ ಸಂಸ್ಕøತಿ ಮರೆಯಾಗುತ್ತಿದೆ
ಮೈಸೂರು

ಮೂಲಭೂತ ಸಂಸ್ಕøತಿ ಮರೆಯಾಗುತ್ತಿದೆ

September 21, 2018

ಮೈಸೂರು: ತಾಂತ್ರಿಕವಾಗಿ ಮುಂದಿದ್ದರೂ ಮೂಲ ಭೂತವಾದ ಸಂಸ್ಕøತಿಯನ್ನು ಬೆಳೆಸುವಲ್ಲಿ ಹಿಂದೆ ಬಿದ್ದಿz್ದÉೀವೆ ಎಂದು ಮೈಸೂರು ವಿವಿ ಪ್ರಾಧ್ಯಾಪಕ ಡಾ.ಸಿ.ಬಸವರಾಜು ಅಭಿಪ್ರಾಯಪಟ್ಟರು.

ನಗರದ ಜೆಎಲ್‍ಬಿ ರಸ್ತೆಯಲ್ಲಿರುವ ನಾದಬ್ರಹ್ಮ ಸಂಗೀತ ಸಭಾಂಗಣದಲ್ಲಿ ತನುಮನ ಸಂಸ್ಥೆಯ ವತಿಯಿಂದ ಗಾಯಕ ಲಕ್ಷ್ಮಿರಾಮ್ ಸಾರಥ್ಯದಲ್ಲಿ ‘ ಪದವ ಹೇಳೋ ನಾಲಿಗೆಗೆ ಒಲಿದು ಬಾಪ್ಪ ದರ್ಮಾ ಗುರುವೆ’ ಜನಪದ ಪದಪಯಣ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ತಾಂತ್ರಿಕ ಕ್ಷೇತ್ರದಲ್ಲಿ ಹೆಚ್ಚಾಗಿ ಬೆಳೆಯುತ್ತಿರುವ ನಾವು ಸಾಹಿತ್ಯ ಕ್ಷೇತ್ರವನ್ನು ಕಡೆಗಣಿಸುತ್ತಿz್ದÉೀವೆ. ಮನುಷ್ಯ ತನ್ನ ದುರಾಸೆಯಿಂದ ಎಲ್ಲವನ್ನೂ ಮರೆಯುತ್ತಿದ್ದಾನೆ. ಅದೇ ರೀತಿ ಸಾಂಸ್ಕøತಿಕ ಕಾರ್ಯ ಕ್ರಮಗಳು ವಿರಳವಾಗುತ್ತಿವೆ. ಸಮಾಜದಲ್ಲಿ ಅನೇಕ ಅನಿಷ್ಟ ಪದ್ಧತಿ ತಾಂಡವವಾಡುತ್ತಿದ್ದು, ಮನುಷ್ಯ ಮನುಷ್ಯನಲ್ಲಿ ದ್ವೇಷ, ಅಸೂಯೆ ಭಾವನೆ ಬೆಳೆಯುತ್ತಿವೆ. ವಿದ್ಯಾವಂತರೇ ಮಾನವೀಯ ಮೌಲ್ಯಗಳನ್ನು ಮರೆಯುತ್ತಿದ್ದಾರೆ. ಸಮಾಜದಲ್ಲಿ ತಾರತಮ್ಯ, ಗುದ್ದಾಟ, ಗದ್ದಲ ಹೆಚ್ಚಾಗುತ್ತಿದ್ದು, ಅವಿಭಕ್ತ ಕುಟುಂಬಗಳು ಕಣ್ಮರೆ ಯಾಗುತ್ತಿವೆ. ಅಧಿಕಾರ ಎಂಬುದನ್ನು ವ್ಯಾಮೋಹದ ರೀತಿ ಬಳಸಿಕೊಂಡು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಮಾಜದ ಅಭಿವೃದ್ಧಿಗೆ ತೊಡಕಾಗಿರುವ ಅಸಮಾನತೆಯನ್ನು ಹೋಗಲಾಡಿಸಿ ಸಮಾನತೆ ತರುವಲ್ಲಿ ಜನಪದ ಪ್ರಮುಖ ಪಾತ್ರ ವಹಿಸಿದೆ. ಸಾಹಿತ್ಯ, ಸಂಸ್ಕøತಿ, ನಾಟಕ ಪ್ರಕಾರಗಳನ್ನು ನಿರಂತರ ವಾಗಿ ಮುಂದುವರೆಸಿಕೊಂಡು ಹೋಗಬೇಕು ಎಂದರು.
ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಮಾತನಾಡಿ, ದಸರಾ ಮಹೋತ್ಸವದಲ್ಲಿ ಜಾನಪದ ಕಲಾವಿದರಿಗೆ ಹೆಚ್ಚಿನ ಅವ ಕಾಶವನ್ನು ನೀಡಬೇಕು. ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ನೀಡುವ ಅನುದಾನ ಮತ್ತು ಪ್ರೋತ್ಸಾಹ ಕಡಿಮೆ ಎಂದರು. ಲೇಖಕಿ ಡಾ.ವಿಜಯಲಕ್ಷ್ಮೀ ಮನ್ನಾಪುರ, ಕರ್ನಾಟಕ ಕಾವಲುಪಡೆ ಅಧ್ಯಕ್ಷ ಎಂ.ಮೋಹನ್ ಕುಮಾರ್ ಗೌಡ, ಪಾಲಿಕೆ ಸದಸ್ಯ ಮಾ.ವಿ.ರಾಮಪ್ರಸಾದ್, ವಕೀಲ ಪಾಳ್ಯ ಸುರೇಶ್, ಶ್ರೀರಾಂಪುರ ಗ್ರಾಪಂ ಸದಸ್ಯೆ ಕಮಲಾ ನಟರಾಜ್, ತನು ಮನ ಸಂಸ್ಥೆ ಅಧ್ಯಕ್ಷ, ಗಾಯಕ ಲಕ್ಷ್ಮೀನಾರಾಯಣ್ ಉಪಸ್ಥಿತರಿದ್ದರು.

Translate »