ಡಿಕೆಶಿ ಮಣಿಸಲು ಬಿಜೆಪಿಯಿಂದ ಅಧಿಕಾರ ದುರ್ಬಳಕೆ
ಮೈಸೂರು

ಡಿಕೆಶಿ ಮಣಿಸಲು ಬಿಜೆಪಿಯಿಂದ ಅಧಿಕಾರ ದುರ್ಬಳಕೆ

September 21, 2018

ಮೈಸೂರು: ಡಿ.ಕೆ.ಶಿವಕುಮಾರ್ ರಂತಹ ನಿಷ್ಠಾವಂತ ಕಾಂಗ್ರೆಸ್ ನಾಯಕರನ್ನು ಸಂಕಷ್ಟಕ್ಕೆ ಸಿಲುಕಿಸಿ ಕಾಂಗ್ರೆಸ್ ಪಕ್ಷದ ಬೆನ್ನುಮೂಳೆ ಮುರಿಯ ಬಹುದು ಎಂದು ಬಿಜೆಪಿ ಎಣಿಸಿದ್ದು, ಇದು ಕೇವಲ ಅವರ ಭ್ರಮೆಯಷ್ಟೇ ಎಂದು ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಮಾಧ್ಯಮ ವಿಭಾಗದ ಅಧ್ಯಕ್ಷ ಪ್ರೊ.ಕೆ.ಇ.ರಾಧಾಕೃಷ್ಣ ಬಿಜೆಪಿ ವಿರುದ್ಧ ಹರಿಹಾಯ್ದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರು ವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಅವರು ಕಾಂಗ್ರೆಸ್ ಪಕ್ಷದ ನಿಷ್ಠಾ ವಂತ ನಾಯಕ. ಕೇಂದ್ರ ಬಿಜೆಪಿ ನಾಯಕರು ಅಧಿ ಕಾರ ದುರ್ಬಳಕೆ ಮಾಡಿಕೊಂಡು ಡಿ.ಕೆ.ಶಿವಕುಮಾರ್ ಅವರನ್ನು ಸಮಸ್ಯೆಗಳಿಗೆ ಸಿಲುಕಿಸುವ ಪ್ರಯತ್ನ ದಲ್ಲಿದ್ದು, ಆ ಮೂಲಕ ಕಾಂಗ್ರೆಸ್ ಬೆನ್ನು ಮೂಳೆ ಮುರಿಯಬಹುದು ಎಂಬ ಅವರ ಲೆಕ್ಕಾಚಾರ ಫಲಿಸದು ಎಂದು ಕಿಡಿಕಾರಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅಕ್ರಮ ನಡೆಸಿ ಬೆಂಗಳೂರಿನ ಅರ್ಕಾವತಿ ಬಡಾವಣೆಗೆ ಇತಿಶ್ರೀ ಹಾಡಿದರು. ಹೀಗೆ ಹಲವು ಅಕ್ರಮಗಳನ್ನು ನಡೆಸಿರುವ ಇಂತಹವರನ್ನು ಇಟ್ಟುಕೊಂಡು ಸ್ವಚ್ಛ ಸರ್ಕಾರ, ಸ್ವಚ್ಛ ಆಡಳಿತ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬೊಗಳೆ ಬಿಡುತ್ತಾರೆ. ಅಮಿತ್ ಶಾ ಅವರ ಪುತ್ರ ಕೇವಲ 10 ಸಾವಿರ ರೂ. ಬಂಡವಾಳದಲ್ಲಿ ವಾಣಿಜ್ಯ ಚಟುವಟಿಕೆ ಆರಂಭಿಸಿದ್ದರು. ಇದೀಗ ವಿದೇಶಗಳಲ್ಲಿ ಗಣಿಗಾರಿಕೆ ಉದ್ಯಮ ನಡೆಸುತ್ತಿದ್ದಾರೆ. ಪ್ರಾಮಾಣಿ ಕತೆಯಿಂದ ಇದ್ದರೆ ಇದೆಲ್ಲಾ ಹೇಗೆ ಸಾಧ್ಯವಾಯಿತು ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಎಂದೂ ಗಂಟಲು ಹರಿಯುವಂತೆ ಚೀರಾಟದ ರಾಜಕಾರಣ ಮಾಡಿಲ್ಲ. ಆದರೆ ಮೋದಿ, ಅಮಿತ್ ಶಾ ಹಾದಿಯಾಗಿ ಬಿಜೆಪಿಯವರು ಗಂಟಲ ಬಲದಿಂದಲೇ ಸತ್ಯ ಮರೆಮಾಚುವ ಕಾಯಕದಲ್ಲಿ ತೊಡ ಗಿದ್ದಾರೆ. ಇದರಿಂದ ಮೈಸೂರಿನ ಪ್ರತಾಪ್ ಸಿಂಹ ಹೊರ ತಾಗಿಲ್ಲ. ಇವರು ಮತ್ತೊಬ್ಬರ ಸಾಧನೆಯನ್ನು ತಮ್ಮದೇ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಾರೆ ಎಂದು ಟೀಕಿ ಸಿದ ಅವರು, ತಮ್ಮ ವಿರುದ್ಧ ಕೇವಲ ಒಂದು ವ್ಯಂಗ್ಯ ಚಿತ್ರ ಪ್ರಕಟಣೆಗೊಂಡ ಕಾರಣಕ್ಕೆ ನರೇಂದ್ರ ಮೋದಿ ಯವರು ಆ ವ್ಯಂಗ್ಯಚಿತ್ರಕಾರನನ್ನೇ ಕೆಲಸದಿಂದ ತೆಗೆಸಿದರು ಎಂದು ಆರೋಪಿಸಿದರು.

ದೇಶದ ಉದ್ಯಮಗಳನ್ನು ಉದ್ಧಾರ ಮಾಡುತ್ತೇವೆ ಎಂದು ಹೇಳಿಕೊಳ್ಳುವ ನರೇಂದ್ರ ಮೋದಿ ಸರ್ಕಾರ, ಉದ್ಧಾರ ಮಾಡುತ್ತಿರುವುದು ಅಂಬಾನಿ ಹಾಗೂ ಅದಾನಿ ಯನ್ನು ಮಾತ್ರ. 2014ರಲ್ಲಿ ಕಚ್ಛಾತೈಲ ಬೆಲೆ ಬ್ಯಾರೆಲ್ ವೊಂದಕ್ಕೆ 113 ಡಾಲರ್ ಇತ್ತು. ಈ ವೇಳೆ ಅಧಿಕಾರ ದಲ್ಲಿದ್ದ ಯುಪಿಎ ಸರ್ಕಾರ ಡೀಸೆಲ್‍ಗೆ 1 ಲಕ್ಷ 38 ಸಾವಿರ ಕೋಟಿ ರೂ. ಸಬ್ಬಿಡಿ ನೀಡಲಾಯಿತು. ಆದರೆ ಮೋದಿ ಸರ್ಕಾರ 11 ಲಕ್ಷದ 60 ಸಾವಿರ ಕೋಟಿ ರೂ. ಆದಾಯ ಮಾಡಿಕೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವೈಯಕ್ತಿಕ ಸಾವುಗಳಿಗೆ ಕೋಮು ಬಣ್ಣ ಕೊಡು ವುದರಲ್ಲಿ ಬಿಜೆಪಿಯವರು ಪ್ರವೀಣರು. ದೇಶಭಕ್ತಿ ಇದ್ದರೆ ದೇಶ ಉದ್ಧಾರವಾಗುತ್ತದೆ. ಅದೇ ವ್ಯಕ್ತಿ ಭಕ್ತಿ ಇದ್ದರೆ ಅಲ್ಲಿ ಸರ್ವಾಧಿಕಾರ ಹುಟ್ಟಿಕೊಳ್ಳುತ್ತದೆ. ನರೇಂದ್ರ ಮೋದಿ ಭಕ್ತಾದಿಗಳನ್ನು ಸೃಷ್ಟಿ ಮಾಡಿ ಕೊಂಡು ಸರ್ವಾಧಿಕಾರಿ ಆಗಿದ್ದಾರೆ. ವಿದ್ಯುನ್ಮಾನ ಮಾಧ್ಯಮ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳಿನ ಕಾರ್ಖಾನೆ ಕಟ್ಟಿ ಮೆರೆಯುತ್ತಿದ್ದಾರೆ. ಆ ಮೂಲಕ ದೇಶದ ಜನತೆಯಲ್ಲಿ ಭ್ರಮೆ ಹುಟ್ಟಿಸಲು ಮುಂದಾ ಗಿದ್ದು, ಮುಂಬರುವ ದಿನಗಳಲ್ಲಿ ಇವರ ಆಟ ನಡೆಯುವುದಿಲ್ಲ. ಮೋದಿ ಸಿಂಹಾಸನ ಅಲುಗಾಡಲು ದಿನಗಣನೆ ಆರಂಭ ಗೊಂಡಿದ್ದು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನಾಯಕತ್ವವನ್ನು ದೇಶದ ಜನತೆ ಒಪ್ಪಿಕೊಳ್ಳುವ ವಿಶ್ವಾಸವಿದೆ ಎಂದು ನುಡಿದರು.

ತ್ರಿವಳಿ ತಲಾಖ್: ತ್ರಿವಳಿ ತಲಾಖ್ ಎಂಬುದು ಮಾನವ ವಿರೋಧಿ ಹಾಗೂ ಮಾನವ ಹಕ್ಕುಗಳ ಉಲ್ಲಂಘನೆ ಎನ್ನುವುದು ಕಾಂಗ್ರೆಸ್ ನಿಲುವು. ಆದರೆ ಈ ವಿಚಾರವನ್ನು ಕೋಮಿನ ಹಿನ್ನೆಲೆಯಲ್ಲಿ ಬಳಸಿ ಕೊಳ್ಳಲು ಬಿಜೆಪಿ ಉದ್ದೇಶಿಸಿದೆ ಎಂದು ಆರೋಪಿ ಸಿದರು. ಮಾಜಿ ಶಾಸಕ ವಾಸು, ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ, ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯ ಕುಮಾರ್, ಪಕ್ಷದ ಮುಖಂಡ ಹೆಚ್.ಎ.ವೆಂಕಟೇಶ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

Translate »