Tag: Suvarna Soudha

ಸುವರ್ಣಸೌಧದಲ್ಲಿ ಸಿದ್ದರಾಮಯ್ಯ-ವಿಶ್ವನಾಥ್‍ಗೆ ಅಕ್ಕಪಕ್ಕದ ಆಸನ
ಮೈಸೂರು

ಸುವರ್ಣಸೌಧದಲ್ಲಿ ಸಿದ್ದರಾಮಯ್ಯ-ವಿಶ್ವನಾಥ್‍ಗೆ ಅಕ್ಕಪಕ್ಕದ ಆಸನ

December 11, 2018

ಬೆಳಗಾವಿ: ಇಂದಿನಿಂದ ಆರಂಭವಾದ ವಿಧಾನಮಂಡಲದ ಚಳಿಗಾಲದ ಅಧಿವೇಶನ ಹಲವು ವೈಶಿಷ್ಟ್ಯಗಳಿಗೆ ಸಾಕ್ಷಿಯಾಗಲಿದೆ. ಒಂದು ಕಾಲದ ಆತ್ಮೀಯ ಮಿತ್ರರಾಗಿ ನಂತರ ರಾಜಕೀಯ ಕಾರಣಗಳಿಂದ ಬದ್ಧವೈರಿಗಳಾದ ಕಾಂಗ್ರೆಸ್ ಶಾಸಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಜೆಡಿಎಸ್ ಶಾಸಕ ಎಚ್.ವಿಶ್ವನಾಥ್ ಅವರಿಗೆ ಅಕ್ಕಪಕ್ಕದ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಕಲಾಪದ ವೇಳೆ ಇವರಿಬ್ಬರೂ ಅಕ್ಕಪಕ್ಕ ಕೂರಲಿ ದ್ದಾರೆಯೇ ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಅವರಿಗೆ 37 ಮತ್ತು ವಿಶ್ವನಾಥ್ ಅವರಿಗೆ 38ನೇ ನಂಬರಿನ ಸೀಟುಗಳನ್ನು ಮೀಸಲಿರಿಸಲಾಗಿದೆ. ಕಾಂಗ್ರೆಸ್‍ನಲ್ಲಿದ್ದ ಎಚ್.ವಿಶ್ವನಾಥ್ ಅವರನ್ನು…

ನಾಳೆಯಿಂದ ಬೆಳಗಾವಿ ಅಧಿವೇಶನ: ಜನಪರ ಚಿಂತನೆಗಿಂತ ಸರ್ಕಾರ ಉರುಳಿಸುವ, ಉಳಿಸಿಕೊಳ್ಳುವ ಕಸರತ್ತಿಗೆ ಮೀಸಲು ಸಾಧ್ಯತೆ
ಮೈಸೂರು

ನಾಳೆಯಿಂದ ಬೆಳಗಾವಿ ಅಧಿವೇಶನ: ಜನಪರ ಚಿಂತನೆಗಿಂತ ಸರ್ಕಾರ ಉರುಳಿಸುವ, ಉಳಿಸಿಕೊಳ್ಳುವ ಕಸರತ್ತಿಗೆ ಮೀಸಲು ಸಾಧ್ಯತೆ

December 9, 2018

ಬೆಂಗಳೂರು: ಬೆಳಗಾವಿ ವಿಧಾನಮಂಡಲ ಚಳಿಗಾಲದ ಅಧಿವೇಶನದಲ್ಲಿ ಜನಪರ ಸಮಸ್ಯೆಗಳಿಗೆ ಸ್ಪಂದಿಸುವುದಕ್ಕಿಂತ ಸರ್ಕಾರ ಉರುಳಿಸಲು ಮತ್ತು ಅಧಿಕಾರ ಉಳಿಸಿಕೊಳ್ಳುವತ್ತ ಹೆಚ್ಚು ಕಸರತ್ತು ನಡೆಯುವ ಸಾಧ್ಯತೆ ಇದೆ. ಸೋಮವಾರ ದಿಂದ ಆರಂಭವಾಗಲಿರುವ ಅಧಿವೇಶನ ಸಂದರ್ಭದಲ್ಲೇ ಕಾಂಗ್ರೆಸ್‍ನ ಕೆಲವು ಶಾಸಕರಿಂದ ರಾಜೀನಾಮೆ ಕೊಡಿಸುವ ಮೂಲಕ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಪತನಗೊಳಿಸಲು ಬಿಜೆಪಿ ಭಾರೀ ತಂತ್ರವನ್ನೆ ರೂಪಿಸಿದೆ. ಇದರ ಸುಳಿ ವರಿತ ಮುಖ್ಯಮಂತ್ರಿ ಅವರು, ತಮ್ಮ ಪಕ್ಷದವರಿರಲಿ, ಕಾಂಗ್ರೆಸ್ ಶಾಸಕರನ್ನು ಮನವೊಲಿಸಿ ಹಿಡಿದಿಟ್ಟುಕೊಳ್ಳುವುದಕ್ಕೆ ತಮ್ಮೆಲ್ಲಾ ಶ್ರಮ ಬಳಸುತ್ತಿದ್ದಾರೆ. ಅಧಿವೇಶನ…

ಡಿ.10ರಿಂದ ಬೆಳಗಾವಿ ಸುವರ್ಣಸೌಧದಲ್ಲಿ ವಿಧಾನ ಮಂಡಲ ಚಳಿಗಾಲ ಅಧಿವೇಶನ
ಮೈಸೂರು

ಡಿ.10ರಿಂದ ಬೆಳಗಾವಿ ಸುವರ್ಣಸೌಧದಲ್ಲಿ ವಿಧಾನ ಮಂಡಲ ಚಳಿಗಾಲ ಅಧಿವೇಶನ

November 15, 2018

ಬೆಂಗಳೂರು: ಚಳಿಗಾಲದ ವಿಧಾನಮಂಡಲದ ಅಧಿವೇಶನ ಬೆಳಗಾವಿಯ ಸುವರ್ಣ ಸೌಧದಲ್ಲಿ ಡಿಸೆಂಬರ್ 10ರಿಂದ 21ರವರೆಗೆ ನಡೆಸಲು ಸರ್ಕಾರ ತೀರ್ಮಾನ ಕೈಗೊಂಡಿದೆ. ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ರಾಜ್ಯ ಸಚಿವ ಸಂಪುಟ ನೀಡಿದ ಅಧಿಕಾರವನ್ನು ಬಳಕೆ ಮಾಡಿಕೊಂಡು ಮುಖ್ಯಮಂತ್ರಿ ಯವರು ಈ ದಿನಾಂಕದಲ್ಲಿ ಅಧಿವೇಶನ ಕರೆಯಲು ಅನುಮತಿ ನೀಡುವಂತೆ ರಾಜ್ಯಪಾಲರನ್ನು ಕೋರಿದ್ದಾರೆ.

ಸುವರ್ಣಸೌಧ ಎದುರು ಮಠಾಧೀಶರ ಧರಣಿ
ಮೈಸೂರು

ಸುವರ್ಣಸೌಧ ಎದುರು ಮಠಾಧೀಶರ ಧರಣಿ

August 1, 2018

ಬೆಳಗಾವಿ: ಉತ್ತರ ಕರ್ನಾಟಕ ಸಮಗ್ರ ಅಭಿವೃದ್ಧಿ ಹಾಗೂ ಸುವರ್ಣಸೌಧಕ್ಕೆ ಕಚೇರಿಗಳ ಸ್ಥಳಾಂತರಕ್ಕೆ ಆಗ್ರಹಿಸಿ ಮಠಾಧೀಶರ ನೇತೃತ್ವದಲ್ಲಿ ಸುವರ್ಣಸೌಧದ ಎದುರು ಇಂದು ಧರಣಿ ನಡೆಯಿತು. ಧರಣಿ ವೇಳೆ ಕೆಲ ಕಿಡಿಗೇಡಿಗಳು ಪ್ರತ್ಯೇಕ ಧ್ವಜ ಹಾರಿಸುವುದರ ಜತೆಗೆ ಘೋಷಣೆ ಸಹ ಕೂಗಿದರು. ಪೊಲೀಸರು ಪ್ರತ್ಯೇಕ ಧ್ವಜ ವಶಪಡಿಸಿಕೊಂಡು, ಕಿಡಿಗೇಡಿಗಳನ್ನು ಬಂಧಿಸಿದರು. ಅಲ್ಲದೆ ವೇದಿಕೆ ಮೇಲೆ ಗೊಂದಲದ ವಾತಾವರಣ ನಿರ್ಮಾಣವಾಯಿತು. ಪ್ರತ್ಯೇಕ ರಾಜ್ಯದ ಹೋರಾಟಕ್ಕೆ ನಮ್ಮ ಬೆಂಬಲ ಇಲ್ಲ. ಗದ್ದಲ ಎಬ್ಬಿಸಿದರೆ ವೇದಿಕೆಯಿಂದ ನಿರ್ಗಮಿಸುವುದಾಗಿ ಸ್ವಾಮೀಜಿಗಳು ಹೇಳುತ್ತಿದ್ದಂತೆ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿತು….

Translate »